More

    ಜಂಗಮವಟುಗಳು ಸಂಸ್ಕಾರವಂತರಾಗಲಿ

    ಕಂಪ್ಲಿ: ಜಂಗಮರ ಜೋಳಿಗೆ ಸ್ವಾರ್ಥಕ್ಕಲ್ಲ, ಸಮಾಜ ರಕ್ಷಣೆಗಾಗಿ ಇದೆ. ಜೋಳಿಗೆ ಮೂಲಕ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಹೆಬ್ಬಾಳ ಬೃಹನ್ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು ಹೇಳಿದರು.

    ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ರವಾರ ಹತ್ತು ಜನ ವೀರಮಹೇಶ್ವರರಿಗೆ ಶಿವದೀಕ್ಷೆ ನೀಡಿ ಆಶೀರ್ವಚನ ನೀಡಿದರು. ಶಿವದೀಕ್ಷೆಯಿಂದ ಜಂಗಮವಟುಗಳ ಮಾಂಸಪಿಂಡವು ಮಂತ್ರಪಿಂಡವಾಗಿ ಮಾರ್ಪಟ್ಟಿದ್ದು, ಜಂಗಮವಟುಗಳು ಧರ್ಮವಂತ, ಸಂಸ್ಕಾರವಂತರಾಗಬೇಕು. ವೀರಶೈವ ಧರ್ಮ ಸಿದ್ಧಾಂತಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶರಾಗಬೇಕು.

    ಪಾಲಕರು ಧರ್ಮವಂತ ಮತ್ತು ಸಂಸ್ಕರವಂತರಾದಲ್ಲಿ ಮಾತ್ರ ಅದನ್ನು ಮಕ್ಕಳು ಅನುಸರಿಸಲು ಸಾಧ್ಯ. ರಾಜಕೀಯ ಕಾರಣಕ್ಕಾಗಿ ಸನಾತನ ಧರ್ಮವನ್ನು ಹೀಗೆಳೆಯುವ ಮೂಲಕ ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ. ಸನಾತನ ಧರ್ಮದಲ್ಲಿ ಮಾನವ ಕಲ್ಯಾಣದೊಂದಿಗೆ ಜೀವನಪದ್ಧತಿ, ಸಂಘಟನೆ ಮತ್ತು ಸರ್ವರೂ ಕೂಡಿಬಾಳುವ ಸಂದೇಶಗಳಿವೆ. ಸನಾತನ ಧರ್ಮದ ಬಗ್ಗೆ ಕೀಳರಿಮೆ ಸಲ್ಲದು ಎಂದರು.

    ಇದನ್ನೂ ಓದಿ: 26 ಜಂಗಮ ವಟುಗಳಿಗೆ ಶಿವದೀಕ್ಷೆ

    ಸಾಂಗತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ ಮಾತನಾಡಿ, ನಿತ್ಯ ಜೀವನದಲ್ಲಿ ಲಿಂಗಪೂಜೆಯೊಂದಿಗೆ ವೀರಶೈವ ಧರ್ಮದ ತತ್ವ-ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಆಧುನಿಕ ಜೀವನ ಭರಾಟೆಯಲ್ಲಿ ಲಿಂಗದೀಕ್ಷೆಯ ಮಹತ್ವ, ಪದ್ಧತಿಗಳನ್ನು ಮರೆಯಬಾರದು ಎಂದರು. ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಪದಾಧಿಕಾರಿ ಡಾ.ಜಗನ್ನಾಥ ಹಿರೇಮಠ, ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ, ಎಂ.ಎಸ್.ಕಿರಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts