More

    ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

    ಸೊರಬ: ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಹೇಳಿದರು.
    ಮಂಗಳವಾರ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಚಂದ್ರಗಿರಿ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್(ರಿ) ಚಂದ್ರಗಿರಿ ನರ್ಸರಿ ಸ್ಕೂಲ್‌ನಿಂದ ಹಮ್ಮಿಕೊಂಡಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಚಂದ್ರಗಿರಿ ಶಿಕ್ಷಣ ಸಂಸ್ಥೆ ಕಳೆದ ಐದು ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದಾಗ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯ. ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಬಹಳ ಮುಖ್ಯ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಾಲಕರ ಪ್ರತಿನಿಧಿ ರಿಯಾಜ್ ಅಹಮದ್, ಪಾಲಕರ ಪ್ರತಿನಿಧಿ ಅರ್ಚನಾ ರೇಣುಕಾ ಪ್ರಸಾದ್ ಮಾತನಾಡಿದರು. ನಂತರ ಚಂದ್ರಗಿರಿ ನರ್ಸರಿ ಸ್ಕೂಲ್‌ನ ಪುಟ್ಟ ಮಕ್ಕಳಿಂದ ನೃತ್ಯ, ಹಾಡು, ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
    ಚಂದ್ರಗಿರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಲ್.ಎಂ.ನಾಯ್ಕ, ನಿರಂಜನ್ ವಿ.ಗೌಡರ್, ಮುಖ್ಯ ಶಿಕ್ಷಕ ರವಿ ನಾಯ್ಕ, ಶಿಕ್ಷಕರಾದ ಸಾರಿಯಾ ತಾಜ್, ದಿವ್ಯಾ ಎಸ್. ಗೌಡ, ಮಧುರಾ ಚಂದ್ರಗುತ್ತಿ, ಲತಾ ಚಂದ್ರಗುತ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts