More

    ಶಿಕ್ಷಣದ ಬಲವರ್ಧನೆಗೆ ಬದಲಾವಣೆ ಅಗತ್ಯವಿದೆ

    ಚಿತ್ರದುರ್ಗ: ಶಿಕ್ಷಣದ ಬಲವರ್ಧನೆಯಲ್ಲಿ ಮಹಿಳೆಯರು ಪ್ರಗತಿಪರ ಬದಲಾವಣೆ ಕಂಡುಕೊಳ್ಳಬೇಕಿದೆ ಎಂದು ಹಿರಿಯ ವಕೀಲ ಬಿ.ಕೆ.ರಹಮತ್‌ವುಲ್ಲಾ ಹೇಳಿದರು.

    ಪತ್ರಿಕಾ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಗಾನಯೋಗಿ ಸಂಗೀತ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ, ತಿಂಗಳ ವಿಶೇಷ ವ್ಯಕ್ತಿ ಪರಿಚಯ, ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

    ಕುಟುಂಬ ನಿರ್ವಹಣೆ ಜಾಣ್ಮೆಯುಳ್ಳ ಮಹಿಳೆಯರು ಹೆಚ್ಚೆಚ್ಚು ಶಿಕ್ಷಣ ಪಡೆಯಬೇಕಿದೆ. ಉದ್ಯೋಗಸ್ಥರಾಗುವ ಮೂಲಕ ಸಮಾನ ಅವಕಾಶಗಳಿಸಿ, ಸ್ವಾವಲಂಬಿಗಳಾಗಿ ಭದ್ರತೆ ಕಂಡುಕೊಳ್ಳಬೇಕು. ಆಸ್ತಿಯಲ್ಲೂ ಸಮಾನ ಹಕ್ಕುದಾರರಾಗಿರುವ ನೀವು ಕಾನೂನಿನ ನಿಯಮಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

    ಕವಿ ಕೊರ‌್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಮಹಿಳೆಯರ ಪ್ರಗತಿಪರ ಬೆಳವಣಿಗೆಗೆ ಕುಟುಂಬದ ಕಟ್ಟುಪಾಡುಗಳಲ್ಲಿ ಸಡಿಲತೆ ಸಿಗಬೇಕು. ಬಸವಣ್ಣ ಅವರ ಲಿಂಗಬೇಧ ತಾರತಮ್ಯ ಚಳವಳಿ ಮತ್ತು ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣ ನನಸಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ನೆಲೆಯಲ್ಲಿ ಸ್ತ್ರೀ ಶಕ್ತಿ ಉದಯವಾಗಬೇಕು ಎಂದು ಕಿವಿಮಾತು ಹೇಳಿದರು.

    ಸಂವಿಧಾನಬದ್ಧ ಅವಕಾಶಗಳಲ್ಲಿ ಸಮಾನತೆ ಕಂಡುಕೊಳ್ಳುತ್ತಿರುವ ಮಹಿಳೆ ಸಂಘಟಿತವಾಗಬೇಕು. ರಾಜಕೀಯವಾಗಿ ಜಾರಿಯಾಗಿರುವ ಶೇ 33ರಷ್ಟು ಮೀಸಲಾತಿ ಬಲಿಷ್ಠ ಕುಟುಂಬದ ಮಹಿಳೆಯರಿಗೆ ಸೀಮಿತವಾಗದಂತೆ ಜಾಗೃತರಾಗಬೇಕು ಎಂದರು.

    ಕವಿಯತ್ರಿ ಶಬ್ರಿನಾ ಮಹಮ್ಮದ್ ಅಲಿ ಮಾತನಾಡಿ, ಮಹಿಳೆಯ ಪ್ರಗತಿಯಲ್ಲಿ ಸಮಾಜದ ಪ್ರಗತಿ ಕಾಣಬಹುದು ಎಂಬ ಅಂಬೇಡ್ಕರ್ ಅವರ ಆಶಯದಂತೆ ಸ್ತ್ರೀ ಕುಲ ಜಾಗೃತವಾಗಬೇಕು. ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ರಕ್ಷಣೆ ಮಾಡಿಕೊಳ್ಳುವ ರೀತಿಯಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.

    ಇದೇ ವೇಳೆ ಸಾಮಾಜಿಕ ಕಾರ್ಯಕರ್ತೆ ನಿವೃತ್ತ ಶಿಕ್ಷಕಿ ಎಸ್.ಮಂಜುಳಾ, ಚಿನ್ಮೂಲಾದ್ರಿ ಸಂಸ್ಥಾಪಕಿ ಆರ್.ದಯಾ ಪುತ್ತೂರ್ಕರ್ ಅವರನ್ನು ಸನ್ಮಾನಿಸಲಾಯಿತು.

    ವೇದಿಕೆ ಅಧ್ಯಕ್ಷ ಡಾ.ಎಸ್.ಎಚ್.ಶಫೀವುಲ್ಲಾ, ಕೆ.ಟಿ.ಶಾಂತಮ್ಮ, ಸುಮಾ ರಾಜಶೇಖರ್, ಸೌಮ್ಯಾಪುತ್ರನ್ ಇತರರಿದ್ದರು. ಗೋಷ್ಠಿಯಲ್ಲಿ ಮುರಳಿ, ಶೋಭಾ, ಕೆ.ಎಸ್.ತಿಪ್ಪಮ್ಮ, ಮಂಜಮ್ಮ, ಡಿ.ಎನ್.ಅನಿತಾ, ರಾಜೇಶ್ವರಿ, ಮೀರಾನಾಡಿಗ್, ಮೀನಾಕ್ಷಿ, ಉಷಾರಾಣಿ, ಸುಜಾತಾ, ನಿರ್ಮಲಾ, ಶಿವರುದ್ರಪ್ಪ, ತ್ರಿವೇಣಿ, ಅಶ್ವಿನಿ, ಜಯಶೀಲಾ, ನಾಗಲಾಂಭಿಕಾ, ಸತ್ಯಪ್ರಭಾ, ಜಿ.ಯು.ಹೇಮಲತಾ, ಕೆ.ಎಚ್.ಮಮತಾ, ಜಯಪ್ರಕಾಶ್, ಎಚ್.ನಾಗೇಂದ್ರಪ್ಪ, ಎಂ.ಜೆ.ಕೋಕಿಲಾ, ಅಶ್ವಿನಿ, ಗೀತಾಸಿಂಗ್, ಜ್ಯೋತಿ ಕವಿತಾ ವಾಚನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts