More

    ‘ಪಬ್‍ಜಿ’ ಆಟವಾಡಿ ಹಣ ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ಕಲಬುರಗಿ: ಇಲ್ಲೊಬ್ಬ ವಿದ್ಯಾರ್ಥಿ ಆನ್‍ಲೈನ್‍ ಗೇಮ್‍ಗಳಲ್ಲಿ ಲೀನನಾಗಿ ಹಣ ಕಟ್ಟಿ ಪಬ್‍ಜಿ ಆಟವಾಡುತ್ತಿದ್ದ. ಕೊನೆಗೆ ಈತ ಸಾಲ ತೀರಿಸಲಾಗದೇ ಸಾವಿಗೆ ಶರಣಾಗಿದ್ದಾನೆ.

    ಪಬ್‍ಜಿ ಮೂಲತಃ ಬೆಟ್ಟಿಂಗ್‍ ಆಟವಲ್ಲ. ಆದರೆ, ಈ ಆಟದಲ್ಲಿ ಕೆಲ ವಿಶಿಷ್ಟ ವರ್ಚ್ಯುವಲ್ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಇದರಿಂದ ಆಟಗಾರ ಬಹಳ ಶಕ್ತಿಶಾಲಿ ಎಂಬ ಸಂದೇಶ ಇತರ ಆಟಗಾರರಿಗೆ ಸಿಗುತ್ತದೆ. ಅಂತಹ ವಸ್ತುಗಳನ್ನು ಖರೀದಿಸಲು ಈ ಯುವಕ ಸಾಲವನ್ನು ಮಾಡಿದ್ದಾನೆ.  

    ಮೃತ ಯುವಕನನ್ನು ಪ್ರವೀಣ್ ಪಾಟೀಲ್ ಎಂದು ಗುರುತಿಸಲಾಗಿದ್ದು (20) ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಕಲಬುರಗಿ ನಗರದ ದೇವಿ ನಗರ ಮನೆಯಲಿ ನಡೆದಿದ್ದು, ಯುವಕ ಮನೆಯಲ್ಲಿ ಯಾರೂ ಇಲ್ಲದ ಮಯ ನೋಡಿ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾನೆ.

    ಪ್ರವೀಣ್, ಕಲಬುರಗಿ ನಗರದ ಖಾಸಗಿ ಕಾಲೇಜ್ ನಲ್ಲಿ ಬಿಇ ವಿಧ್ಯಾಬ್ಯಾಸ ಮಾಡುತ್ತಿದ್ದು ಅಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್‍ ವಿಷಯದಲ್ಲಿ ಬಿಇ ಕೋರ್ಸ್ ಮಾಡುತ್ತಿದ್ದ. ಈತ, ಮೂಲತಃ ಕಲಬುರಗಿ ಜಿಲಗಲೆಯ ಚಿತ್ತಾಪುರ ತಾಲ್ಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts