More

    ಕಾಲೇಜು ವಿದ್ಯಾರ್ಥಿಗೆ ಐಟಿ ಶಾಕ್! ಎಷ್ಟು ಕೋಟಿ ರೂಪಾಯಿ ಆದಾಯ ತೆರಿಗೆ ನೋಟಿಸ್ ನೀಡಿದ್ರು ಗೊತ್ತಾ?

    ಭೋಪಾಲ್(ಮಧ್ಯ ಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್‌ನ ವಿದ್ಯಾರ್ಥಿಯೊಬ್ಬನಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಇದ್ದಕ್ಕಿದ್ದಂತೆ 46 ಕೋಟಿ ರೂ.ಗಳ ನೋಟಿಸ್ (ಐಟಿ ನೋಟಿಸ್) ಕಳುಹಿಸಲಾಗಿದೆ.

    ಇದನ್ನೂ ಓದಿ: ಗಾಯತ್ರಿ ಸಿದ್ದೇಶ್ವರ ಅಡುಗೆ ಮನೆಗಷ್ಟೇ ಲಾಯಕ್ಕು ಎಂದ ಶಾಮನೂರ್​​ಗೆ ಸೈನಾ ನೆಹ್ವಾಲ್ ತಿರುಗೇಟು!

    ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಅಂತಹ ತೆರಿಗೆ ನೋಟೀಸ್ ಸ್ವೀಕರಿಸಿದ ಹುಡುಗನಿಗೆ ಆಘಾತವಾಗಿದೆ. ಬಳಿಕ ಅಸಲಿ ವಿಷಯ ತಿಳಿದು ಆಶ್ಚರ್ಯವಾಗಿದೆ. ವಿದ್ಯಾರ್ಥಿ ಪಾನ್ ಕಾರ್ಡ್ ಅನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿಯೇ ಆತನಿಗೆ ಐಟಿ ನೋಟಿಸ್‌ ಬಂದಿದೆ.

    ಗ್ವಾಲಿಯರ್ ಜಿಲ್ಲೆಯ ಪ್ರಮೋದ್ ಕುಮಾರ್ ಎಂಬ ಯುವಕನ ಬ್ಯಾಂಕ್ ಖಾತೆಯಿಂದ ಆತನಿಗೆ ತಿಳಿಯದಂತೆ 2021 ರಲ್ಲಿ ಮುಂಬೈ ಮತ್ತು ದೆಹಲಿಯ ಕಂಪನಿಗಳು ಪ್ಯಾನ್ ಕಾರ್ಡ್ ಮೂಲಕ 46 ಕೋಟಿ ರೂ. ಆತನ ಪ್ಯಾನ್ ಕಾರ್ಡ್ ಬಳಸಿ ವಹಿವಾಟು ನಡೆಸಲಾಗುತ್ತಿತ್ತು.

    ಇದರಿಂದಾಗಿ ಪ್ರಮೋದ್ ಕುಮಾರ್ ಗೆ ಐಟಿ ಮತ್ತು ಜಿಎಸ್‌ಟಿ ಇಲಾಖೆಯಿಂದ ನೋಟಿಸ್‌ಗಳು ಬಂದಿದ್ದವು. ಸತ್ಯ ತಿಳಿದ ಪ್ರಮೋದ್ ಕುಮಾರ್ ಬೆಚ್ಚಿಬಿದ್ದಿದ್ದ. ಇದೆಲ್ಲಾ ತನಗೆ ತಿಳಿಯದಂತೆ ನಡೆದಿದೆ ಎಂದು ಆತ ಹೇಳುತ್ತಾನೆ.

    ಕಂದಾಯ ಇಲಾಖೆಯಿಂದ ನೋಟಿಸ್ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸತ್ಯಾಂಶ ತಿಳಿದುಕೊಂಡಿದ್ದೇನೆ. ತನ್ನ ಪಾನ್ ಕಾರ್ಡ್ ದುರ್ಬಳಕೆಯಾಗಿರುವುದು ತಿಳಿದ ತಕ್ಷಣ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಶುಕ್ರವಾರ ಎಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.

    ಮೋಹದ ಬಲೆಗೆ ಬಿದ್ದ.. ತಪ್ಪಿಸಿಕೊಳ್ಳಲು ಹೋಗಿ ಜೈಲು ಸೇರಿದ! ಕೋಲಾರದಲ್ಲಿ ನಡೆದಿದ್ದ ಕೊಲೆ ರಹಸ್ಯ ಭೇದಿಸಿದ ಪೊಲೀಸರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts