More

    ರಸ್ತೆ ಬದಿ ವ್ಯಾಪಾರಿ ಮೇಲೆ 366 ಕೋಟಿ ರೂ. ಜಿಎಸ್​ಟಿ ಫ್ರಾಡ್​ ಕೇಸ್​!

    ಆಗ್ರಾ: ಮುಜಾಫರ್‌ ನಗರದ ಬೀದಿಗಳಲ್ಲಿ ಬಟ್ಟೆ ಮಾರುವ ಮೂಲಕ ದಿನಕ್ಕೆ 500 ರೂಪಾಯಿ ವಹಿವಾಟು ನಡೆಸುತ್ತಾ ಜೀವನ ಸಾಗಿಸುತ್ತಿರುವ ಉತ್ತರ ಪ್ರದೇಶದ 40 ವರ್ಷದ ವ್ಯಕ್ತಿಯೊಬ್ಬರು ಜಿಎಸ್‌ಟಿ ಅಧಿಕಾರಿಗಳು ಮನೆ ಬಾಗಿಲು ತಟ್ಟಿ 366 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದೀರಿ ಎಂದಾಗ ಆಘಾತಕ್ಕೆ ಒಳಗಾಗಿದ್ದಾರೆ. ಈ ಆರೋಪಗಳಿಂದ ದಿಗ್ಭ್ರಮೆಗೊಂಡ ಬೀದಿ ವ್ಯಾಪಾರಿ ಎಜಾಜ್ ಅಹ್ಮದ್, ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಜಿಎಸ್‌ಟಿ ಅಧಿಕಾರಿಗಳು ಮತ್ತು ಇತರ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

    ಎರಡು ವರ್ಷಗಳ ಹಿಂದೆ ಅಹ್ಮದ್, ಜಿಎಸ್‌ಟಿ ಸಂಖ್ಯೆಗಾಗಿ ಜನಸತ್ ಪೊಲೀಸ್ ಮಿತಿಯ ಅಡಿಯಲ್ಲಿ ಕಾವಲ್ ಗ್ರಾಮದಲ್ಲಿ ಸಣ್ಣ ಸ್ಕ್ಯಾಪ್ ಅಂಗಡಿಯನ್ನು ನೋಂದಾಯಿಸಿದ್ದರು. ಆರಂಭದಲ್ಲಿ ದಿನಕ್ಕೆ 500ರಿಂದ 1000 ರೂಪಾಯಿ ಗುಜುರಿ ವ್ಯಾಪಾರ ಮಾಡುತ್ತಿದ್ದ ಅವರು ನಂತರ ಅವರು ನಷ್ಟದ ಕಾರಣದಿಂದ ಸ್ಕ್ಯಾಪ್ ಡೀಲರ್ ಕೆಲಸವನ್ನು ಬಿಟ್ಟು ಬೀದಿಗಳಲ್ಲಿ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು.

    ನಾನು ಆ GST ಖಾತೆಯನ್ನು ಮುಚ್ಚಲು CA (ಚಾರ್ಟಡ್​ರ ಅಕೌಂಟೆಂಟ್) ಗೆ ಕೇಳಿದ್ದೆ. ಆದರೆ ಏನಾಯಿತು ಎಂದು ತಿಳಿದಿಲ್ಲ. ಎರಡು ವರ್ಷಗಳಿಂದ ಬಟ್ಟೆ ಮಾರುತ್ತಿದ್ದೇನೆ. ಈ ಹಿಂದೆ ನಗರದಲ್ಲಿ ಗುಜುರಿ ಖರೀದಿಸಿ ಸರಬರಾಜು ಮಾಡುತ್ತಿದ್ದೆ. ಆದರೆ ಸ್ಕ್ಯಾಪ್ ವ್ಯಾಪಾರ ಕೈಗೂಡದಿದ್ದಾಗ ನಾನು ಮನೆ ಬಿಟ್ಟು ಬಟ್ಟೆ ಮಾರಾಟ ಮಾಡಲು ಆರಂಭಿಸಿದೆ. ಜಿಎಸ್‌ಟಿ ಇಲಾಖೆ ಈ ವಂಚನೆಯ ಹಿಂದಿನ ನಿಜವಾದ ಆರೋಪಿಯನ್ನು ಪತ್ತೆ ಮಾಡಬೇಕೆಂದು ನಾನು ಬಯಸುತ್ತೇನೆ’ ಎಂದು ಅಹ್ಮದ್ ಹೇಳಿದ್ದಾರೆ.

    ಪಶ್ಚಿಮ ಯುಪಿಯ ಜಿಎಸ್‌ಟಿ ವಿಭಾಗದ ಜಂಟಿ ಆಯುಕ್ತ (ವಿಶೇಷ ತನಿಖಾ ವಿಭಾಗ) ಜೆಎಸ್ ಶುಕ್ಲಾ ಅವರು ಶುಕ್ರವಾರ, “300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಿಲ್‌ಗಳನ್ನು ನೀಡಲಾಗಿದೆ. ಇದು ದೊಡ್ಡ ದಂಧೆ ಎಂದು ತೋರುತ್ತದೆ. ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಹಲವಾರು ಸಂಸ್ಥೆಗಳು ಮತ್ತು ಕೆಲವು ವ್ಯಕ್ತಿಗಳು ನಮ್ಮ ಗಮನದಲ್ಲಿದ್ದಾರೆ” ಎಂದಿದ್ದಾರೆ.

    ಜಿಎಸ್‌ಟಿ ಅಧಿಕಾರಿ “ಕೆಲವರು ತಮ್ಮ ಸಂಸ್ಥೆಯ ಖಾತೆ ಸಂಖ್ಯೆಯನ್ನು ಬೇರೆಯವರು ಬಳಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಎಜಾಜ್ ಅಹ್ಮದ್ ಮತ್ತು ಅವರ ಸಿಎ ಅವರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯ ನಂತರವೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಹುದು’ ಎಂದು ಹೇಳಿದರು. ಒಂದು ವಾರದ ಹಿಂದೆ ಜಿಎಸ್‌ಟಿಯ ಹಿರಿಯ ಅಧಿಕಾರಿಗಳು ಎಜಾಜ್​ ಅಹ್ಮದ್​ನ ಮನೆ ಮೇಲೆ ದಾಳಿ ನಡೆಸಿದ್ದರು. ಮನೆಯಲ್ಲಿ ಇಲ್ಲದ ಅಹ್ಮದ್ ನಂತರ ಜಿಎಸ್‌ಟಿ ಇಲಾಖೆಗೆ ದೂರು ನೀಡಿದ್ದರು. ಅವರು ಇಲಾಖೆಗೆ ಎಲ್ಲಾ ವಿವರಗಳನ್ನು ” ಒದಗಿಸಿದ್ದಾರೆ ಮತ್ತು ಈ ವಿಷಯದಲ್ಲಿ ನ್ಯಾಯಯುತ ತನಿಖೆ ಮಾಡುವಂತೆ ಅವರು ಕೋರಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts