More

    ಅದಾನಿಗೆ ತಟ್ಟಿದ ಷೇರು ಮಾರುಕಟ್ಟೆ ಬಿಸಿಗೆ ಎಲ್​ಐಸಿ ಕರಗಿತು!

    ನವದೆಹಲಿ: ಅದಾನಿ ಗ್ರೂಪ್​ನ ಷೇರುಗಳು ಶುಕ್ರವಾರ ಒಂದೇ ದಿನದಲ್ಲಿ ಒಟ್ಟು 3.37 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡರೆ, ಈ ಮೂಲಕ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC), 16,627 ಕೋಟಿ ರೂ. ಕಳೆದುಕೊಂಡಿದೆ. ಏಕೆಂದರೆ, LIC ಅದಾನಿ ಗ್ರೂಪ್ಸ್​ನ ಐದು ಅತೀ ದೊಡ್ಡ ಹೂಡಿಕೆದಾರರಲ್ಲಿ ಒಂದು ಸಂಸ್ಥೆಯಾಗಿದೆ.

    ವಾಸ್ತವವಾಗಿ, ಅದಾನಿ ಗ್ರೂಪ್ ಕಂಪನಿಗಳ ಎಲ್‌ಐಸಿಯ ಷೇರುಗಳ ಮೌಲ್ಯ ಮಂಗಳವಾರ 72,193 ಕೋಟಿ ರೂ.ಗಳಿಂದ ಶುಕ್ರವಾರ 55,565 ಕೋಟಿ ರೂ.ಗೆ ಇಳಿದಿದೆ. ಅಂದರೆ ಕೇವಲ ಎರಡು ದಿನಗಳಲ್ಲಿ ಶೇಕಡಾ 22 ರಷ್ಟು ಕುಸಿತವಾಗಿದೆ.

    ಈ ಮಧ್ಯೆ, LICಯ ಷೇರಿನ ಬೆಲೆ ಕೂಡ ಶುಕ್ರವಾರ ಸಂಕಷ್ಟಕ್ಕೆ ಒಳಗಾಗಿದ್ದು ಒಂದೇ ದಿನದಲ್ಲಿ 3.5 ಶೇಕಡಾ ಕುಸಿಯಿತು. ಕಳೆದ ಎರಡು ದಿನಗಳಲ್ಲಿ ಒಟ್ಟು 5.3 ಶೇಕಡಾ ಕುಸಿದಿದೆ.

    ಸರ್ಕಾರಿ ಸ್ವಾಮ್ಯದ ಎಲ್‌ಐಸಿ, ಅದಾನಿ ಟೋಟಲ್ ಗ್ಯಾಸ್‌ನ ಶೇ 5.96 ರಷ್ಟು ಮಾಲೀಕತ್ವ ಹೊಂದಿದ್ದು ಅದಾನಿ ಟೋಟಲ್​ ಗ್ಯಾಸ್​ನ ಷೇರುಗಳು ಶುಕ್ರವಾರ ಶೇ 20ರಷ್ಟು ಕುಸಿದವು. ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯ (ಈ ಸಂಸ್ಥೆಯಲ್ಲಿ ಎಲ್‌ಐಸಿ 4.23% ಮಾಲೀಕತ್ವ ಹೊಂದಿದೆ) ಷೇರುಗಳು ಒಂದೇ ದಿನದ ಅವಧಿಯಲ್ಲಿ 18.5 ಪ್ರತಿಶತದಷ್ಟು ಕುಸಿದವು. ಇದೇ ಸಮಯದಲ್ಲಿ ಅದಾನಿ ಟ್ರಾನ್ಸ್‌ಮಿಷನ್ (ಎಲ್‌ಐಸಿ 3.65% ಹಿಡುವಳಿ) 19.99 ಶೇಕಡಾ ಕುಸಿಯಿತು.

    ಅದಾನಿ ಪೋರ್ಟ್ಸ್ (ಎಲ್‌ಐಸಿಯ ಮಾಲೀಕತ್ವ ಶೇಕಡಾ 9.1) ಶೇಕಡಾ 5 ಮತ್ತು ಅದಾನಿ ಗ್ರೀನ್ ಎನರ್ಜಿ (ಎಲ್‌ಐಸಿ ಮಾಲೀಕತ್ವ ಶೇಕಡಾ 1.28) ಸಹ ದಿನದ ಅವಧಿಯಲ್ಲಿ ಶೇಕಡಾ 20 ರಷ್ಟು ಕುಸಿದಿದೆ.

    ಇತರ ಸಮೂಹ ಕಂಪನಿಗಳು ಕೂಡ ಶುಕ್ರವಾರ ತೀವ್ರ ಕುಸಿತ ಕಂಡಿವೆ. ಶುಕ್ರವಾರದಂದು ಅದಾನಿ ಗ್ರೂಪ್ ಮಾರುಕಟ್ಟೆ ಬಂಡವಾಳದಲ್ಲಿ 3.37 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದರೆ, ಕಳೆದ ಎರಡು ವಹಿವಾಟು ಅವಧಿಗಳಲ್ಲಿ, ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಶುಕ್ರವಾರ 7 ನೇ ಸ್ಥಾನಕ್ಕೆ ಕುಸಿದಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts