More

    ಒಂದೇ ದಿನದಲ್ಲಿ ಷೇರು ಹೂಡಿಕೆದಾರರ ಸಂಪತ್ತು ರೂ 4.58 ಲಕ್ಷ ಕೋಟಿ ಹೆಚ್ಚಳ; ರೂ. 379 ಲಕ್ಷ ಕೋಟಿ ತಲುಪಿದ ಬಿಎಸ್​ಇ ಬಂಡವಾಳ

    ನವದೆಹಲಿ: ಜನವರಿ 31, ಬುಧವಾರದಂದು ಭಾರತೀಯ ಷೇರು ಮಾರುಕಟ್ಟೆಗಳು ಏರುಗತಿ ಕಂಡುಬಂದಿತು. ಷೇರು ಸೂಚ್ಯಂಕ ಅಂದಾಜು ಶೇಕಡಾ 1 ರಷ್ಟು ಏರಿಕೆಯಾಯಿತು. ಈ ಮೂಲಕ ಹೂಡಿಕೆದಾರರ ಸಂಪತ್ತು 4.58 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಯಿತು.

    30 ಷೇರುಗಳ ಬಿಎಸ್‌ಇ ಸೂಚ್ಯಂಕ 612.21 ಅಂಕಗಳ ಅಥವಾ ಶೇಕಡಾ 0.86 ರಷ್ಟು ಏರಿಕೆಯಾಗಿ 71,752.11 ಕ್ಕೆ ಸ್ಥಿರವಾಯಿತು.

    ಈ ಮೂಲಕ ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು 4,58,130.52 ಕೋಟಿ ರೂ.ಗೆ ಏರಿಕೆಯಾಗಿದ್ದು, 3,79,78,375.88 ಕೋಟಿ ರೂಪಾಯಿ ತಲುಪಿದೆ.

    ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಬಜಾಜ್ ಫಿನ್‌ಸರ್ವ್, ಮಾರುತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಪವರ್ ಗ್ರಿಡ್ ಷೇರುಗಳು ಬುಧವಾರ ಲಾಭ ಗಳಿಸಿದವು.

    ಡಿಸೆಂಬರ್ ತ್ರೈಮಾಸಿಕ ಗಳಿಕೆಯ ನಂತರ ಲಾರ್ಸೆನ್ ಆ್ಯಂಡ್ ​ಟೂಬ್ರೊ ಶೇಕಡಾ 4ಕ್ಕಿಂತ ಕಡಿಮೆಯಾಯಿತು. ಟೈಟಾನ್ ಷೇರು ಸಹ ಕುಸಿತ ಕಂಡಿತು.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 1.83 ರಷ್ಟು ಮತ್ತು ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 1.57 ರಷ್ಟು ಜಿಗಿದಿವೆ.

    ಸೂಚ್ಯಂಕಗಳಲ್ಲಿ, ಹೆಲ್ತ್‌ಕೇರ್ ಶೇಕಡಾ 2.67, ರಿಯಾಲ್ಟಿ ಶೇಕಡಾ 2.29, ಆಟೋ (ಶೇ 1.77), ಸೇವೆಗಳು (ಶೇ 1.60), ಸರಕುಗಳು (ಶೇ 1.48), ವಿದ್ಯುತ್ (ಶೇ 1.15), ಮತ್ತು ದೂರಸಂಪರ್ಕ (ಶೇ 0.97) ವಲಯಗಳ ಷೇರುಗಳು ಹೆಚ್ಚಳ ಕಂಡವು. ಕೈಗಾರಿಕೆಗಳು ಮತ್ತು ಬಂಡವಾಳ ಸರಕುಗಳ ಷೇರುಗಳು ಕುಸಿತ ಅನುಭವಿಸಿದವು.

    ಒಂದೇ ದಿನದಲ್ಲಿ ಶೇ. 20 ಹೆಚ್ಚಳ ಕಂಡ ಷೇರು: ಇನ್ನಷ್ಟು ಏರಿಕೆಗೆ ತಡೆ ಹಾಕಿದ್ದೇಕೆ? ಅಪ್ಪರ್​ ಸರ್ಕ್ಯೂಟ್ ಎಂದರೇನು?

    ಬಜೆಟ್​ ಮುನ್ನಾದಿನ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು; 612 ಅಂಕ ಸೂಚ್ಯಂಕ ಏರಿಕೆ; ಹೂಡಿಕೆದಾರರು ಕಣ್ಣಿಟ್ಟಿರುವ ಎರಡು ಸಂಗತಿಗಳೇನು?

    ಸಚಿನ್​ ತೆಂಡೂಲ್ಕರ್ ಬಾಜಿ ಕಟ್ಟಿರುವ ಷೇರು ಮೂರೇ ದಿನಗಳಲ್ಲಿ 45% ಏರಿಕೆ: ಇಂಗ್ಲೆಂಡ್​ನ ರೋಲ್ಸ್ ರಾಯ್ಸ್ ಜತೆ ಒಪ್ಪಂದದ ನಂತರ ಅಪಾರ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts