More

    ಒಂದೇ ದಿನದಲ್ಲಿ ಶೇ. 20 ಹೆಚ್ಚಳ ಕಂಡ ಷೇರು: ಇನ್ನಷ್ಟು ಏರಿಕೆಗೆ ತಡೆ ಹಾಕಿದ್ದೇಕೆ? ಅಪ್ಪರ್​ ಸರ್ಕ್ಯೂಟ್ ಎಂದರೇನು?

    ಮುಂಬೈ: ಐಟಿ ವಲಯದ ಕಂಪನಿ ವಕ್ರಾಂಗೀ ಲಿಮಿಟೆಡ್ (Vakrangee limited) ಷೇರುಗಳ ಏರಿಕೆಯ ಟ್ರೆಂಡ್ ಮುಂದುವರಿಯುತ್ತಲೇ ಇದೆ. ಈ ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರವಂತೂ ಈ ಸ್ಟಾಕ್ ಅಪ್ಪರ್ ಸರ್ಕ್ಯೂಟ್ ಮುಟ್ಟಿತು. ಅಲ್ಲದೆ, ಈ ಷೇರು ಬೆಲೆ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು. ಬುಧವಾರ ಒಂದೇ ದಿನದಲ್ಲಿ ಶೇಕಡಾ 20ರಷ್ಟು ಹೆಚ್ಚಳ ಕಂಡು, 30.18 ರೂಪಾಯಿಗೆ ತಲುಪಿದೆ. ಇದೇ ಸಮಯದಲ್ಲಿ, ಕಂಪನಿಯ ಮಾರುಕಟ್ಟೆ ಬಂಡವಾಳಿಕರಣವು 3,197.61 ರೂ. ತಲುಪಿತು.

    ವಕ್ರಾಂಗಿ ಲಿಮಿಟೆಡ್ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯು ಫೆಬ್ರವರಿ 6 ರಂದು ನಡೆಯಲಿದೆ ಎಂದು ಬಿಎಸ್‌ಇಗೆ ಕಂಪನಿ ತಿಳಿಸಿದೆ. ಈ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಷೇರು ಹಂಚಿಕೆ ಮೂಲಕ ಹಣ ಸಂಗ್ರಹಿಸುವ ಪ್ರಸ್ತಾವನೆಯನ್ನು ಕಂಪನಿ ಪರಿಗಣಿಸಲಿದೆ. ಕಂಪನಿಯು ತನ್ನ ಹೂಡಿಕೆದಾರರಿಗೆ ಷೇರುಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಸಂಗ್ರಹಿಸಲು ಉದ್ದೇಶಿಸಿದೆ. ನಿಗದಿತ ಅವಧಿಯೊಳಗೆ ಷೇರುದಾರ ಕಂಪನಿಯಿಂದ ಹಕ್ಕುಗಳ ವಿತರಣೆ ಅಡಿಯಲ್ಲಿ ನೀವು ಷೇರುಗಳನ್ನು ಖರೀದಿಸಬಹುದು. ಅದರ ಅನುಪಾತವನ್ನು ಕಂಪನಿಯು ನಿರ್ಧರಿಸುತ್ತದೆ. ಇದಲ್ಲದೆ, ಕಂಪನಿಯು ತ್ರೈಮಾಸಿಕ ಫಲಿತಾಂಶಗಳನ್ನು ಸಹ ಪ್ರಕಟಿಸಬಹುದಾಗಿದೆ.

    ವಕ್ರಾಂಗಿ ಲಿಮಿಟೆಡ್‌ನಲ್ಲಿ ಪ್ರವರ್ತಕರ ಪಾಲು ಶೇಕಡಾ 42.60 ಆಗಿದೆ. ಅದೇ ರೀತಿ ಸಾರ್ವಜನಿಕ ಷೇರು ಶೇ. 57.40ರಷ್ಟು ಇದೆ. ಪ್ರವರ್ತಕರಲ್ಲಿ ಹೆಚ್ಚಿನ ಷೇರುಗಳು VAKRANGEE ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನಲ್ಲಿವೆ. ಇದು ಪ್ರವರ್ತಕರ ಒಟ್ಟು ಪಾಲಿನ 23.69 ಪ್ರತಿಶತಕ್ಕೆ ಸಮನಾಗಿರುತ್ತದೆ. ಇದರ ಹೊರತಾಗಿ, ಪ್ರವರ್ತಕರಲ್ಲಿ NJD ಕ್ಯಾಪಿಟಲ್ ಪ್ರೈ.ಲಿಮಿಟೆಡ್ ಕೂಡ ಸೇರಿದ್ದು, ಶೇ. 12 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

    ವಕ್ರಾಂಗಿ ಲಿಮಿಟೆಡ್, 1990 ರಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿ. ಐಟಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದೆ. ಈ ಕಂಪನಿಯು ದೇಶದ 31 ರಾಜ್ಯಗಳ 560 ಜಿಲ್ಲೆಗಳಲ್ಲಿ ಸೇವೆಯನ್ನು ಒದಗಿಸುತ್ತದೆ. ಇದು ಅಂದಾಜು 21,240 ಮಳಿಗೆಗಳನ್ನು ಹೊಂದಿದೆ. ಈ ಕಂಪನಿಯು ಎಟಿಎಂ, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುತ್ತದೆ.

    ವೈಟ್ ಲೇಬಲ್ ಎಟಿಎಂಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಕಂಪನಿಯು ಆರ್‌ಬಿಐನಿಂದ ಪರವಾನಗಿ ಪಡೆದಿದೆ.
    ಇದು ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಎಟಿಎಂ ಪೂರೈಕೆದಾರನಾಗಿದೆ. ಕಂಪನಿಯ ಸೇವಾ ಪಾಲುದಾರರಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಂದರೆ ಪಿಎನ್​ಬಿ, ಬ್ಯಾಂಕ್ ಆಫ್ ಬರೋಡಾ ಮತ್ತು ಇನ್ನೂ ಅನೇಕ ಬ್ಯಾಂಕ್​ಗಳಿವೆ.

    ಅಪ್ಪರ್​ ಸರ್ಕ್ಯೂಟ್ ಎಂದರೇನು?:

    ದಿನನಿತ್ಯದ ವಹಿವಾಟಿನಲ್ಲಿ, ಅಂದರೆ ಇಂಟ್ರಾ ಡೇ ಟ್ರೇಡ್​ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಅತಿಹೆಚ್ಚು ಗಳಿಕೆ ಮತ್ತು ನಷ್ಟ ತಡೆಯಲು ಅಪ್ಪರ್​ ಹಾಗೂ ಲೋವರ್​ ಸರ್ಕ್ಯೂಟ್​ ವಿಧಿಸಲಾಗುತ್ತದೆ. ಅಪ್ಪರ್​ ಸರ್ಕ್ಯೂಟ್​ ಎಂದರೆ ಯಾವುದೇ ಒಂದು ದಿನದ ವಹಿವಾಟಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಾಣುವುದು. ಹಿಂದಿನ ದಿನದ ಕೊನೆಯಲ್ಲಿನ ಬೆಲೆಗಿಂತ ಶೇಕಡಾ 10 ಇಲ್ಲವೇ 20ರಷ್ಟು ಏರಿಕೆ ಕಂಡರೆ ಆ ಷೇರಿನ ಬೆಲೆಯನ್ನು ಆ ವಹಿವಾಟಿನ ದಿನದಂದು ಮತ್ತೆ ಏರಿಸಲು ಅವಕಾಶ ಇರುವುದಿಲ್ಲ. ಪ್ರತಿಯೊಂದು ಷೇರಿಗೆ ಅಪ್ಪರ್​ ಸರ್ಕ್ಯೂಟ್​ ಮಿತಿ ಎಷ್ಟಿರಬೇಕೆಂಬುದನ್ನು ಷೇರು ವಿನಿಮಯ ಕೇಂದ್ರಗಳು ನಿರ್ಧರಿಸುತ್ತವೆ. ಇದೇ ರೀತಿ ಲೋವರ್​ ಸರ್ಕ್ಯೂಟ್​ ಎಂದರೆ, ಆ ದಿನದ ವಹಿವಾಟಿನಲ್ಲಿ ಷೇರೊಂದರೆ ಕನಿಷ್ಠ ಬೆಲೆ. ಈ ಮಿತಿಯನ್ನು ಕೂಡ ಷೇರು ವಿನಿಮಯ ಕೇಂದ್ರಗಳೇ ನಿರ್ಧರಿಸುತ್ತವೆ.

    ಬಜೆಟ್​ ಮುನ್ನಾದಿನ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು; 612 ಅಂಕ ಸೂಚ್ಯಂಕ ಏರಿಕೆ; ಹೂಡಿಕೆದಾರರು ಕಣ್ಣಿಟ್ಟಿರುವ ಎರಡು ಸಂಗತಿಗಳೇನು?

    ಸಚಿನ್​ ತೆಂಡೂಲ್ಕರ್ ಬಾಜಿ ಕಟ್ಟಿರುವ ಷೇರು ಮೂರೇ ದಿನಗಳಲ್ಲಿ 45% ಏರಿಕೆ: ಇಂಗ್ಲೆಂಡ್​ನ ರೋಲ್ಸ್ ರಾಯ್ಸ್ ಜತೆ ಒಪ್ಪಂದದ ನಂತರ ಅಪಾರ ಬೇಡಿಕೆ

    122 ರಿಂದ 18 ರೂಪಾಯಿಗೆ ಕುಸಿತ ಕಂಡಿದ್ದ ಷೇರು ಈಗ ಒಂದೇ ದಿನದಲ್ಲಿ 17% ಏರಿಕೆ: ಫೆ. 2ರ ಕಂಪನಿಯ ಸಭೆಯಲ್ಲೇನಾಗಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts