More

    ಬಜೆಟ್​ ಮುನ್ನಾದಿನ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು; 612 ಅಂಕ ಸೂಚ್ಯಂಕ ಏರಿಕೆ; ಹೂಡಿಕೆದಾರರು ಕಣ್ಣಿಟ್ಟಿರುವ ಎರಡು ಸಂಗತಿಗಳೇನು?

    ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿನ ಖರೀದಿಯಿಂದ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಬುಧವಾರ ಅಂದಾಜು 1 ಪ್ರತಿಶತದಷ್ಟು ಏರಿದವು.

    ಹೂಡಿಕೆದಾರರು ಮುಂದಿರುವ ಎರಡು ಪ್ರಮುಖ ಘಟನೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಧ್ಯಂತರ ಬಜೆಟ್ ಮತ್ತು ಅಮೆರಿಕದ ಫೆಡರಲ್​ ರಿಸರ್ವ್​ ಬಡ್ಡಿ ದರದ ನಿರ್ಧಾರ ಇವುಗಳತ್ತ ಗಮನ ನೆಟ್ಟಿದ್ದಾರೆ. ಬಡ್ಡಿ ದರ ಇಳಿಕೆಯಾದರೆ ಷೇರು ಪೇಟೆಯಲ್ಲಿ ಮತ್ತೆ ಚೇತರಿಕೆ ಕಂಡುಬರಲಿದೆ.

    ಆರಂಭಿಕ ವಹಿವಾಟಿನಲ್ಲಿ ಹಿನ್ನಡೆ ಕಂಡರೂ ನಂತರ ಚೇತರಿಸಿಕೊಂಡ 30-ಷೇರುಗಳ ಬಿಎಸ್‌ಇ ಸೂಚ್ಯಂಕವು 612.21 ಅಂಕಗಳು ಅಥವಾ ಶೇಕಡಾ 0.86 ಜಿಗಿದು 71,752.11 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 711.49 ಅಂಕಗಳ ಹೆಚ್ಚಳವನ್ನು ಕಂಡಿತ್ತು. ನಿಫ್ಟಿ ಸೂಚ್ಯಂಕವು 203.60 ಅಂಕಗಳು ಅಥವಾ ಶೇ. 0.95 ರಷ್ಟು ಏರಿಕೆಯಾಗಿ 21,725.70 ಕ್ಕೆ ತಲುಪಿತು.

    ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ 1.5% ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಅಂದಾಜು 2% ರಷ್ಟು ಏರಿಕೆ ದಾಖಲಿಸಿತು.

    ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ, ಬಜಾಜ್ ಫಿನ್‌ಸರ್ವ್, ಪವರ್ ಗ್ರಿಡ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಮೊದಲಾದ ಕಂಪನಿಗಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಡಿಸೆಂಬರ್ ತ್ರೈಮಾಸಿಕ ಗಳಿಕೆಯ ನಂತರ ಲಾರ್ಸೆನ್ ಆ್ಯಂಡ್​ ಟೂಬ್ರೊ ಷೇರು ಶೇಕಡಾ 4 ರಷ್ಟು ಹಿನ್ನಡೆ ಕಂಡಿದೆ. ಟೈಟಾನ್ ಸಹ ಹಿನ್ನಡೆ ಅನುಭವಿಸಿದೆ.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ದಾಖಲಿಸಿದರೆ, ಸಿಯೋಲ್ ಲಾಭ ಕಂಡಿತು. ಐರೋಪ್ಯ ಮಾರುಕಟ್ಟೆಗಳು ಮಿಶ್ರ ವಹಿವಾಟು ಕಂಡುಬಂದಿತು. ಮಂಗಳವಾರದಂದು ಅಮೆರಿಕದ ಮಾರುಕಟ್ಟೆಗಳು ಬಹುತೇಕ ಕುಸಿತ ಕಂಡಿವೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 1,970.52 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಮಂಗಳವಾರ 801.67 ಅಂಕಗಳಷ್ಟು ಕುಸಿದು 71,139.90 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 215.50 ಅಂಕಗಳಷ್ಟು ಹಿನ್ನಡೆ ಕಂಡು 21,522.10 ಕ್ಕೆ ತಲುಪಿತ್ತು.

    ಸಚಿನ್​ ತೆಂಡೂಲ್ಕರ್ ಬಾಜಿ ಕಟ್ಟಿರುವ ಷೇರು ಮೂರೇ ದಿನಗಳಲ್ಲಿ 45% ಏರಿಕೆ: ಇಂಗ್ಲೆಂಡ್​ನ ರೋಲ್ಸ್ ರಾಯ್ಸ್ ಜತೆ ಒಪ್ಪಂದದ ನಂತರ ಅಪಾರ ಬೇಡಿಕೆ

    122 ರಿಂದ 18 ರೂಪಾಯಿಗೆ ಕುಸಿತ ಕಂಡಿದ್ದ ಷೇರು ಈಗ ಒಂದೇ ದಿನದಲ್ಲಿ 17% ಏರಿಕೆ: ಫೆ. 2ರ ಕಂಪನಿಯ ಸಭೆಯಲ್ಲೇನಾಗಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts