blank

ಮತದಾನಕ್ಕೆ ಮುನ್ನ ಗುಳೆಹೊರಟ ಜನ

blank
blank

ದೇವದುರ್ಗ: ತಾಲೂಕಿನ ಜಾಲಹಳ್ಳಿ ಹೋಬಳಿಯ ಕೂಲಿಕಾರರು ಕೆಲಸ ಅರಸಿ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಲೋಕಸಭೆ ಚುನಾವಣೆ ಮತದಾನಕ್ಕೆ ಎರಡು ದಿನ ಬಾಕಿಯಿದ್ದರೂ ಜನರು ಗುಳೆ ಹೋಗುವುದು ಮುಂದುವರಿದಿದೆ.

ರೈತರು, ಕೂಲಿಕಾರರು ಬೆಂಗಳೂರು, ಪುಣೆ, ಹೈದರಾಬಾದ್‌ಗೆ ನವೆಂಬರ್‌ನಿಂದಲೇ ಗುಳೆ ಹೋಗಿದ್ದಾರೆ. ಜಾಲಹಳ್ಳಿಯ ಆರಾಧ್ಯದೈವ ಲಕ್ಷ್ಮೀ ರಂಗನಾಥ ಸ್ವಾಮಿ ಜಾತ್ರೆ ನಿಮಿತ್ತ ಸಾವಿರಾರು ಕೂಲಿಕಾರರು ಇತ್ತೀಚೆಗೆ ಮರಳಿದ್ದರು. ಏಪ್ರಿಲ್ ಕೊನೇ ವಾರ ಜಾತ್ರೆ ಮುಗಿದಿರುವುದರಿಂದ ಮತ್ತೆ ಮಹಾನಗರಗಳಿಗೆ ಹಿಂದಿರುಗುತ್ತಿದ್ದಾರೆ.

ಮೇ 7ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಲಿಕಾರರ ಮನವೊಲಿಸಲು ಮುಂದಾಗಿಲ್ಲ. ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ನಾನಾ ಕಸರತ್ತು ಮಾಡುತ್ತಿದೆ. ಆದರೆ, ಗುಳೆ ಹೊರಟಿರುವ ಕೂಲಿಕಾರರತ್ತ ಗಮನಹರಿಸಿಲ್ಲ.

ಮತದಾನ ಮಾಡಬೇಕಾದ ಜನರು ಚುನಾವಣೆಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಗುಳೆ ಹೊರಟಿದ್ದಾರೆ. ಜಾಲಹಳ್ಳಿಯಿಂದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಕೂಲಿಕಾರರರು ಕೆಲಸ ಅರಸಿ ಹೋಗುತ್ತಿದ್ದಾರೆ. ಬೆಂಗಳೂರು ಹಾಗೂ ಪುಣೆಗೆ ನಿತ್ಯ ಸಾರಿಗೆ ಸಂಸ್ಥೆಯ ಒಂದು ಹಾಗೂ ಎರಡು ಖಾಸಗಿ ಬಸ್‌ಗಳು ಹೋಗುತ್ತಿವೆ. ಖಾಸಗಿ ವಾಹನಗಳಲ್ಲೂ ಜನರು ಗುಳೆ ಹೋಗುತ್ತಿದ್ದಾರೆ.

Share This Article

ನಿಮ್ಮ ಮನೆ ಕಸದ ಬುಟ್ಟಿಯಿಂದ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ… garbage

garbage: ಅಡುಗೆಮನೆಯ ಆಹಾರ ತ್ಯಾಜ್ಯ ಮತ್ತು ಕಸದ ತೊಟ್ಟಿಗೆ ಎಸೆಯಲಾದ ಇತರ ಕಸವು ಬೇಗನೆ ಕೊಳೆಯುತ್ತದೆ…

ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಏಕೆ ಒಟ್ಟಿಗೆ ಇರಬಾರದು? ಇಲ್ಲಿದೆ ನೋಡಿ ಅಚ್ಚರಿಯ ಕಾರಣ… Ashadha

Ashadha : ತಿಂಗಳುಗಳಲ್ಲಿ ಆಷಾಢ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಆಷಾಢ ಮಾಸದಲ್ಲಿ ಅನೇಕ…