More

    ಉಕ್ಕು ಕಾರ್ಖಾನೆಗಳಿಂದ ಹೆಚ್ಚಿದೆ ಮೆಡಿಕಲ್ ಆಕ್ಸಿಜನ್ ಪೂರೈಕೆ

    ನವದೆಹಲಿ : ಸರ್ಕಾರಿ ಮತ್ತು ಖಾಸಗಿ ವಲಯದ ಸ್ಟೀಲ್ ಕಂಪೆನಿಗಳು ದೇಶದ ಮೆಡಿಕಲ್ ಆಕ್ಸಿಜನ್​ನ ಅಗತ್ಯವನ್ನು ಪೂರೈಸಲು ಪೂರ್ಣ ಪ್ರಯತ್ನ ಮಾಡುತ್ತಿವೆ. ನಿನ್ನೆ ಸ್ಟೀಲ್​ ಪ್ಲ್ಯಾಂಟ್​​ಗಳಲ್ಲಿ ನಡೆದ ಒಟ್ಟು ಲಿಖ್ವಿಡ್ ಮೆಡಿಕಲ್ ಆಕ್ಸಿಜನ್​ (ಎಲ್​ಎಂಒ)ನ ಉತ್ಪಾದನೆ 3,680.30 ಮೆಗಾಟನ್​ನಷ್ಟಾದರೆ, ಒಟ್ಟು 4,076.65 ಮೆಗಾಟನ್ ಪೂರೈಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಸ್ಟೀಲ್ ಅಥಾರಿಟಿ ಆಫ್​ ಇಂಡಿಯಾ ಎಲ್​ಎಂಒ ಪೂರೈಕೆಯನ್ನು ಹೆಚ್ಚಿಸುತ್ತಿದೆ. ಛತ್ತೀಸಗಢದ ಭಿಲಾಯಿ, ಒಡಿಶಾದ ರೂರ್ಕೆಲಾ, ಜಾರ್ಖಂಡ್​​ನ ಬೊಕಾರೊ, ಪಶ್ಚಿಮ ಬಂಗಾಳದ ದುರ್ಗಾಪುರ ಮತ್ತು ಬರ್ನ್‌ಪುರಗಳ ಉಕ್ಕಿನ ಸ್ಥಾವರಗಳಿಂದ ಏಪ್ರಿಲ್​ ಎರಡನೇ ವಾರದಲ್ಲಿ ದೈನಂದಿನ ಆಕ್ಸಿಜನ್ ವಿತರಣೆ 500 ಮೆ.ಟನ್​ರಷ್ಟಿತ್ತು. ಪ್ರಸ್ತುತ ಅದನ್ನು 1,100 ಮೆ.ಟನ್​ಗಳಿಗೆ ಏರಿಸಲಾಗಿದೆ ಎಂದು ಉಕ್ಕು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ಉಪಚುನಾವಣೆ ಮುಂದೂಡಿದ ಚುನಾವಣಾ ಆಯೋಗ

    ಇನ್ನೂ ಬರಲಿದೆಯಂತೆ ಕರೊನಾ 3ನೇ ಅಲೆ ! ಸರ್ಕಾರದ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts