More

    ಮುಸ್ಲಿಮರು ಜ. 20- 26ರ ನಡುವೆ ಮನೆಯಲ್ಲೇ ಇರಬೇಕು: ಎಐಯುಡಿಎಫ್​ ಮುಖ್ಯಸ್ಥನ ವಿವಾದಿತ ಹೇಳಿಕೆ

    ನವದೆಹಲಿ: ಜನವರಿ 20 ರಿಂದ 25 ರವರೆಗೆ ರೈಲ್ವೇಯಲ್ಲಿ ಪ್ರಯಾಣಿಸದಂತೆ ಮುಸ್ಲಿಮರಿಗೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಶನಿವಾರ ಮನವಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಇದೇ ಅವಧಿಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭ ಇರುವ ಹಿನ್ನೆಲೆಯಲ್ಲಿ ಅಜ್ಮಲ್​ ಹೇಳಿಕೆಯು ಸಾಕಷ್ಟು ವಿವಾದ ಸೃಷ್ಟಿಸಿದೆ.

    ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಅಧ್ಯಕ್ಷರಾಗಿರುವ ಬದ್ರುದ್ದೀನ್ ಅಜ್ಮಲ್ ಸಾರ್ವಜನಿಕ ಭಾಷಣದಲ್ಲಿ, ಮುಸ್ಲಿಮರು ಜನವರಿ 20 ಮತ್ತು 26 ರ ನಡುವೆ ಮನೆಯಲ್ಲೇ ಇರಬೇಕು. ಅಲ್ಲದೆ, ರಾಮ ಮಂದಿರದ ಪ್ರತಿಷ್ಠಾಪನೆಯ ಸಮಯದಲ್ಲಿ ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

    ‘ಬಿಜೆಪಿ ನಮ್ಮ ಧರ್ಮದ ಶತ್ರು’ ಎಂಬ ಪ್ರಚೋದನಕಾರಿ ಹೇಳಿಕೆಯನ್ನೂ ಅವರು ನೀಡಿದ್ದಾರೆ.

    ಜೀವನ, ಧರ್ಮ, ಇಮಾನ್, ಅಜಾನ್, ಮದರಸಾ, ಮಸೀದಿ, ಇಸ್ಲಾಮಿಕ್ ಕಾನೂನು, ತಲಾಖ್ ಮತ್ತು ಖುರಾನ್​ನಲ್ಲಿ ಇರುವ ಎಲ್ಲದರ ನಂ. 1 ಶತ್ರು “ಭಾರತೀಯ ಜನತಾ ಪಕ್ಷ (ಬಿಜೆಪಿ) ಆಗಿದೆ ಎಂದು ಅವರು ಟೀಕಿಸಿದ್ದಾರೆ.

    ನಂತರ ಇದಕ್ಕೆ ಸ್ಪಷ್ಟನೆ ನೀಡಿದ ಅವರು “ಈ ಸಮಯದಲ್ಲಿ ಹಿಂದೂಗಳು ಬಸ್ಸುಗಳು, ರೈಲುಗಳು ಮತ್ತು ವಿಮಾನಗಳ ಮೂಲಕ ಪ್ರಯಾಣಿಸುತ್ತಾರೆ ಎಂದು ತಿಳಿಸಿದ್ದಾರೆ.

    ಬಿಜೆಪಿ ತಿರುಗೇಟು:

    ಅಜ್ಮಲ್​ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, “ಬಿಜೆಪಿ ಮುಸ್ಲಿಮರನ್ನು ದ್ವೇಷಿಸುವುದಿಲ್ಲ. ನಾವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ (ನಾವು ಎಲ್ಲರ ಜತೆಗೆ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ) ಎಂಬ ಮಂತ್ರದೊಂದಿಗೆ ಕೆಲಸ ಮಾಡುತ್ತೇವೆ. ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಮಾಜಿ ಅರ್ಜಿದಾರ ಇಕ್ಬಾಲ್ ಅನ್ಸಾರಿ ಅವರು ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಆಹ್ವಾನ ನೀಡಿದ್ದು, ಅವರು ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ. ಬದ್ರುದ್ದೀನ್ ಅಜ್ಮಲ್, ಓವೈಸಿಯಂತಹವರು ಸಮಾಜದಲ್ಲಿ ದ್ವೇಷ ಹರಡುತ್ತಿದ್ದಾರೆ. ಬಿಜೆಪಿ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ” ಎಂದು ಹೇಳಿದ್ದಾರೆ.

    ಇಸ್ರೋಗೆ ಮತ್ತೊಂದು ಐತಿಹಾಸಿಕ ಯಶಸ್ಸು: ಗಮ್ಯ ಸ್ಥಾನ ಯಶಸ್ವಿಯಾಗಿ ತಲುಪಿದ ಆದಿತ್ಯ ಎಲ್​ 1

    ದೆಹಲಿ ಗ್ಯಾಂಗ್​ಸ್ಟರ್​ ಗೆಳತಿಗೆ ನೀಡಿದ್ದ ರೂ 100 ಕೋಟಿಯ ಬಂಗಲೆ ಪೊಲೀಸರಿಂದ ಸೀಲ್​: ಕಾಜಲ್​ ಝಾ ಯಾರು?

    ಪಡಿತರ ಹಗರಣದಲ್ಲಿ ಇಡಿಯಿಂದ ಟಿಎಂಸಿ ನಾಯಕನ ಬಂಧನ; ಬೆಂಬಲಿಗರಿಂದ ಕಲ್ಲು ತೂರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts