ನವದೆಹಲಿ: ಸೂರ್ಯನನ್ನು ಅಧ್ಯಯನಕ್ಕಾಗಿ ಉಡಾಯಿಸಲಾದ ಭಾರತದ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಈ ನೌಕೆಯು ಲಾಗ್ರಾಂಜಿಯನ್ ಪಾಯಿಂಟ್ 1 ರಲ್ಲಿ ಯಶಸ್ವಿಯಾಗಿ ನಿಲುಗಡೆಯಾಗಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ವಿಕ್ರಮವನ್ನು ಸಾಧಿಸಿದೆ.
ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೆಪ್ಟೆಂಬರ್ 2, 2023 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತ. ನೌಕೆಯು ಕಾರ್ಯಾಚರಣೆಯು ಅಂದಾಜು ಮೂರು ವರ್ಷಗಳ ಕಾಲ ಇರಲಿದೆ.
ಆದಿತ್ಯ-ಎಲ್ 1ನ್ನು ಇಸ್ರೋ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ. ಇದರ ಜೀವಿತಾವಧಿ ಐದು ವರ್ಷಗಳ ಕಾಲ ಎಂದು ನಿರೀಕ್ಷಿಸಲಾಗಿದೆ,
ಭೂಮಿಯಿಂದ ಅಂದಾಜು 15 ಲಕ್ಷ ಕಿಮೀ ದೂರದಲ್ಲಿರುವ ಸೂರ್ಯ-ಭೂಮಿಯ ವ್ಯವಸ್ಥೆಯ ಹಾಲೋ ಕಕ್ಷೆಯಲ್ಲಿ ನೌಕೆಯನ್ನು ಇರಿಸಲಾಗಿದೆ. ಆದಿತ್ಯ-ಎಲ್1 ಸ್ಥಿತಿ ಆರೋಗ್ಯಕರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನೌಕೆಯನ್ನು ಎಲ್ 1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸುವುದರಿಂದ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಬಹುದಾಗಿದೆ. ಈ ಕಾರ್ಯಾಚರಣೆಯಲ್ಲಿ ಸೌರ ವಾತಾವರಣವನ್ನು ಮುಖ್ಯವಾಗಿ ವರ್ಣಗೋಳ ಮತ್ತು ಕರೋನಾ, ಸೂರ್ಯನ ಹೊರಗಿನ ಪದರಗಳನ್ನು ವೀಕ್ಷಿಸಿ ಅಧ್ಯಯನ ಮಾಡಲಾಗುತ್ತದೆ. ಸ್ಥಳೀಯ ಪರಿಸರವನ್ನು ದಾಖಲಿಸಲು ಹಲವಾರು ಪೇಲೋಡ್‌ಗಳನ್ನು ಬಳಸಲಾಗುತ್ತದೆ.
ದೆಹಲಿ ಗ್ಯಾಂಗ್ಸ್ಟರ್ ಗೆಳತಿಗೆ ನೀಡಿದ್ದ ರೂ 100 ಕೋಟಿಯ ಬಂಗಲೆ ಪೊಲೀಸರಿಂದ ಸೀಲ್: ಕಾಜಲ್ ಝಾ ಯಾರು?
ಪಡಿತರ ಹಗರಣದಲ್ಲಿ ಇಡಿಯಿಂದ ಟಿಎಂಸಿ ನಾಯಕನ ಬಂಧನ; ಬೆಂಬಲಿಗರಿಂದ ಕಲ್ಲು ತೂರಾಟ
ಗಾಳಿಯಲ್ಲಿಯೇ ಹಾರಿಹೋದ ವಿಮಾನದ ಬಾಗಿಲು: ಆತಂಕಕಾರಿ ದೃಶ್ಯ ವಿಡಿಯೋದಲ್ಲಿ ಸೆರೆ