ಮುಂಬೈ: 4 ತಿಂಗಳ ಮೊದಲು ನನೆಗುದಿಗೆ ಬಿದ್ದಿದ್ದ ಸರ್ಕಾರಿ ಕಂಪನಿಯ ಷೇರುಗಳ ಬೆಲೆ ರಾಕೆಟ್ ವೇಗ ಪಡೆದಿದೆ. ಕಳೆದ 4 ತಿಂಗಳಿನಿಂದ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳ ಬೆಲೆಯಲ್ಲಿ ಬಿರುಸಿನ ಏರಿಕೆಯಾಗಿದೆ.
ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ 600 ರೂ.ನಿಂದ 1066 ರೂಪಾಯಿ ತಲುಪಿವೆ. ಅಂದರೆ ಈ ಅವಧಿಯಲ್ಲಿ ಕಂಪನಿಯು ಸ್ಥಾನಿಕ ಹೂಡಿಕೆದಾರರಿಗೆ ಶೇಕಡಾ 75 ರಷ್ಟು ಲಾಭವನ್ನು ನೀಡಿದೆ. ಎಲ್ಐಸಿ ಷೇರುಗಳು ಏಕೆ ಏರಿಕೆ ಕಾಣುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಪ್ರಬಲ ಕಾರ್ಯಕ್ಷಮತೆಯಿಂದಾಗಿ ಎಲ್‌ಐಸಿ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಷೇರು ಮಾರುಕಟ್ಟೆಗೆ ಸಂಬಂಧಿಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ಕಂಪನಿಯ ಷೇರುಗಳ ಏರಿಕೆಯ ಹಿಂದೆ ಹಲವು ಕಾರಣಗಳಿವೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭದಲ್ಲಿ ಶೇಕಡಾ 49 ರಷ್ಟು ಹೆಚ್ಚಳವಾಗಿರುವುದು ಒಂದು ಕಾರಣ. ಇದಲ್ಲದೆ, ಕಂಪನಿಯು 21,741 ಕೋಟಿ ರೂ.ಗಳನ್ನು ತೆರಿಗೆ ಮರುಪಾವತಿಯಾಗಿ ಪಡೆದಿದೆ. ಈ ಎಲ್ಲಾ ಕಾರಣಗಳು ಎಲ್‌ಐಸಿ ಷೇರುಗಳಲ್ಲಿ ಏರಿಕೆಯನ್ನು ತಂದಿವೆ” eಎಂದು ಸ್ಟಾಕ್‌ಬಾಕ್ಸ್‌ನ ಸಂಶೋಧನಾ ವಿಶ್ಲೇಷಕ ಶ್ರೇಯನ್ಸ್ ವಿ ಷಾ ಹೇಳುತ್ತಾರೆ.
7:1 ಬೋನಸ್ ಷೇರುಗಳು, 1:10 ಸ್ಟಾಕ್ ಸ್ಪ್ಲಿಟ್: ಒಂದು ವರ್ಷದಲ್ಲಿ 815% ಲಾಭ ನೀಡಿದ ಷೇರುಗಳಿಗೆ ಈಗ ಭರ್ಜರಿ ಬೇಡಿಕೆ
ಈ ಷೇರುಗಳ ಲಾಭಾಂಶದಿಂದ ಮನೆ ಖರ್ಚು ನಿರ್ವಹಣೆ: ಡಿವಿಡೆಂಡ್ ಷೇರುಗಳತ್ತ ಹಲವು ಹೂಡಿಕೆದಾರರ ಚಿತ್ತ