More

    ಈ ಷೇರುಗಳ ಲಾಭಾಂಶದಿಂದ ಮನೆ ಖರ್ಚು ನಿರ್ವಹಣೆ: ಡಿವಿಡೆಂಡ್ ಷೇರುಗಳತ್ತ ಹಲವು ಹೂಡಿಕೆದಾರರ ಚಿತ್ತ

    ಮುಂಬೈ: ಷೇರುಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ ಹೋಲಿಸಿದರೆ ಈ ಷೇರುಗಳ ಕಂಪನಿಗಳು ನೀಡುವ ಲಾಭಾಂಶ (ಡಿವಿಡೆಂಡ್​​) ಹಣವು ತೀರ ಕಡಿಮೆಯಾಗಿರುತ್ತದೆ. ಆದರೂ, ಡಿವಿಡೆಂಡ್​ನಿಂದ ಬರುವ ಆದಾಯವು ತಮ್ಮ ಮನೆಯ ಖರ್ಚುಗಳನ್ನು ಪೂರೈಸಲು ಅನುಕೂಲವಾಗಬೇಕು ಎಂಬ ಚಿಂತನೆಯೊಂದಿಗೆ ತಮ್ಮ ಬಂಡವಾಳವನ್ನು ಮಾಡುವ ಕೆಲವು ಹೂಡಿಕೆದಾರರಿದ್ದಾರೆ.

    ಇಂತಹವರು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಷೇರುಗಳು ಎಷ್ಟು ಲಾಭಾಂಶವನ್ನು ನೀಡುತ್ತವೆ ಎಂಬುದರ ಬಗ್ಗೆ ಗಮನ ಹರಿಸುತ್ತಾರೆ. ಒಂದು ವರ್ಷದಲ್ಲಿ ಆ ಸ್ಟಾಕ್‌ನಿಂದ ಎಷ್ಟು ಲಾಭಾಂಶ ಬರಬಹುದು ಎಂದು ಲೆಕ್ಕ ಹಾಕುತ್ತಾರೆ. ಸಾಮಾನ್ಯವಾಗಿ PSU (ಸರ್ಕಾರಿ ಕಂಪನಿಗಳು) ಸ್ಟಾಕ್‌ಗಳು ಲಾಭಾಂಶವನ್ನು ನೀಡಲು ಹೆಸರುವಾಸಿಯಾಗಿವೆ. ಆದರೆ, ಕೆಲವು ಖಾಸಗಿ ವಲಯದ ಷೇರುಗಳು ಸಹ ಪ್ರಚಂಡ ಲಾಭಾಂಶವನ್ನು ನೀಡುತ್ತವೆ.

    ಷೇರು ಮಾರುಕಟ್ಟೆಯಲ್ಲಿ ಅತಿಹೆಚ್ಚು ಲಾಭಾಂಶ ನೀಡುವ ಕೆಲ ಸ್ಟಾಕ್​ಗಳ ವಿವರ ಇಲ್ಲಿದೆ.

    1) ವೇದಾಂತ ಲಿಮಿಟೆಡ್:

    ವೇದಾಂತ ಲಿಮಿಟೆಡ್ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ 269.05 ರೂ. ಇದೆ. ಇದರ ಲಾಭಾಂಶ ಇಳುವರಿಯನ್ನು ಅತ್ಯಧಿಕ ಎಂದು ಪರಿಗಣಿಸಲಾಗಿದೆ, ಇದು 37.54% ಆಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 306.75 ರೂ.

    2) ಹಿಂದೂಸ್ತಾನ್ ಜಿಂಕ್ ಲಿಮಿಟೆಡ್:

    ಶುಕ್ರವಾರ ಹಿಂದೂಸ್ತಾನ್ ಜಿಂಕ್ ಷೇರುಗಳ ಬೆಲೆ 310.50 ರೂ. ಇತ್ತು. ಇದರ ಲಾಭಾಂಶ ಇಳುವರಿ 24.27%. 52 ವಾರಗಳಲ್ಲಿ ಇದರ ಗರಿಷ್ಠ ಬೆಲೆ 344 ರೂ. ಇದೆ.

    3) ಐಡಿಎಫ್​ಸಿ ಲಿಮಿಟೆಡ್​:

    ಐಡಿಎಫ್‌ಸಿ ಷೇರುಗಳ ಬೆಲೆ ಶುಕ್ರವಾರ 118.60 ರೂ. ತಲುಪಿದೆ. ಈ ಷೇರುಗಳ ಲಾಭಾಂಶ ಇಳುವರಿ 10.30%. ಈ ಷೇರಿನ 52 ವಾರದ ಗರಿಷ್ಠ ಬೆಲೆ 137 ರೂ.

    4) ಕಾಮಾ ಹೋಲ್ಡಿಂಗ್ಸ್ ಲಿಮಿಟೆಡ್:

    ಶುಕ್ರವಾರದಂದು ಕ್ಯಾಮಾ ಹೋಲ್ಡಿಂಗ್ಸ್ ಷೇರುಗಳ ಬೆಲೆ ರೂ. 2,525 ಮುಟ್ಟಿದೆ. ಈ ಷೇರುಗಳ ಲಾಭಾಂಶ ಇಳುವರಿ 6.53%. ಇದರ 52 ವಾರದ ಗರಿಷ್ಠ ಬೆಲೆ 3,500 ರೂ.

    5) ಸನೋಫಿ ಇಂಡಿಯಾ ಲಿಮಿಟೆಡ್:

    ಸನೋಫಿ ಇಂಡಿಯಾದ ಷೇರಿನ ಬೆಲೆ 9,155.00 ರೂ. ಈ ಷೇರುಗಳ ಲಾಭಾಂಶ ಇಳುವರಿ 6.24%. 52 ವಾರಗಳಲ್ಲಿ ಇದರ ಅತ್ಯಧಿಕ ಬೆಲೆ 9,380 ರೂ.

    6) ಕೋಲ್ ಇಂಡಿಯಾ ಲಿ:

    ಶುಕ್ರವಾರ ಕೋಲ್ ಇಂಡಿಯಾ ಷೇರುಗಳ ಬೆಲೆ 444.20 ರೂ. ಮುಟ್ಟಿತು. ಈ ಷೇರುಗಳ ಲಾಭಾಂಶ ಇಳುವರಿ 5.43%. ಇದರ 52 ವಾರಗಳ ಗರಿಷ್ಠ ಬೆಲೆ 487.60 ರೂ.

    7) ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿ:

    ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಷೇರುಗಳ ಬೆಲೆ ಶುಕ್ರವಾರ 281.90 ರೂ. ತಲುಪಿತು. ಈ ಷೇರುಗಳ ಲಾಭಾಂಶ ಇಳುವರಿ 5.12%. ಇದರ 52 ವಾರಗಳ ಗರಿಷ್ಠ ಬೆಲೆ 289.45 ರೂ.

    ಅನ್​ನೌನ್​ ನಂಬರ್​ನಿಂದ ಕಾಲ್​ ಬಂದರೂ ಮೊಬೈಲ್​ ಸ್ಕ್ರೀನ್​ನಲ್ಲಿ ಹೆಸರು ಡಿಸ್​ಪ್ಲೇ: ದೊಡ್ಡ ಬದಲಾವಣೆಗೆ ಟ್ರಾಯ್​ ನಡೆಸಿದ ತಯಾರಿ

    245% ಲಾಭದೊಂದಿಗೆ ಲಿಸ್ಟಿಂಗ್​ ಆದ ಐಟಿ ಕಂಪನಿ ಷೇರು: ಮೊದಲ ದಿನವೇ ಹೂಡಿಕೆದಾರರಿಗೆ ಹಣದ ಸುರಿಮಳೆ

    ಇಲ್ಲಿ ಜೂನ್​ನಿಂದ ಬಂದ್​ ಆಗಲಿದೆ Google Pay ಆ್ಯಪ್​

    ವಿದ್ಯುತ್​ ನಿಯಮ ಸರಳಗೊಳಿಸಿದ ಕೇಂದ್ರ ಸರ್ಕಾರ: ಸೋಲಾರ್​ ಪ್ಯಾನಲ್​ ಅಳವಡಿಕೆ ತ್ವರಿತ, ಎಲೆಕ್ಟ್ರಿಕ್​ ವಾಹನಗಳಿಗೂ ಪ್ರತ್ಯೇಕ ಸಂಪರ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts