More

    ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಕಂಡು ಕಂಗಾಲಾದ ತುಮಕೂರು ಕುಟುಂಬ: ಗ್ರಾಮಸ್ಥರಲ್ಲಿ ಆತಂಕ

    ತುಮಕೂರು: ನ್ಯಾಯಬೆಲೆ ಅಂಗಡಿಯಿಂದ ತಂದ ಅಕ್ಕಿಯನ್ನು ನೋಡಿದ ಕುಟುಂಬವೊಂದಕ್ಕೆ ಭಾರೀ ಶಾಕ್​ ಕಾದಿತ್ತು. ಕಾರಣ ಸರ್ಕಾರದಿಂದ ಬಡವರಿಗೆ ಕೊಡುವ ಪಡಿತರ ಅಕ್ಕಿಯಲ್ಲಿ ರಾಶಿ ರಾಶಿ ರಸಗೊಬ್ಬರ ಪತ್ತೆಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಹೋಬಳಿಯ ಯರ್ರಮ್ಮನಹಳ್ಳಿ ನ್ಯಾಯಬೆಲೆ ಅಂಗಡಿಯಿಂದ ಪಡೆದ ಅಕ್ಕಿಯಲ್ಲಿ ರಸಗೊಬ್ಬರ ಕಂಡುಬಂದಿದೆ. ಪ್ರತಿ ತಿಂಗಳಂತೆ ಈ ಬಾರಿಯೂ ಪಡಿತರ ಕಾರ್ಡ್ ಹೊಂದಿರುವವರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗಿತ್ತು. ಈ ವೇಳೆ ಮನೆಗೆ ಕೊಂಡೊಯ್ದ ಅಕ್ಕಿಯಲ್ಲಿ ಕೆಜಿಗಟ್ಟಲೇ ರಸಗೊಬ್ಬರ ಪತ್ತೆಯಾಗಿದೆ. ಅಕ್ಕಿಯಲ್ಲಿ ಯೂರಿಯಾ ಮತ್ತು ಕಾಂಪೋಸ್ಟ್​ ಗೊಬ್ಬರದ ಹರಳುಗಳು ಕಂಡು ಬಂದಿದೆ.

    ಇದರಿಂದ ಅನುಮಾನಗೊಂಡ ಮನೆಯವರು ಅಕ್ಕಪಕ್ಕದ ಮನೆಗಳಲ್ಲಿನ ಪಡಿತರ ಅಕ್ಕಿ ಯನ್ನು ಪರಿಶೀಲಿಸಿದಾಗ ಆ ಅಕ್ಕಿಯಲ್ಲೂ ಇದೇ ಮಾದರಿಯ ರಸಗೊಬ್ಬರ ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡು ಒಂದೆಂಡೆ ಆತಂಕ ಮತ್ತೊಂದೆಡೆ ಆಕ್ರೋಶಗೊಂಡ ಗ್ರಾಮಸ್ಥರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗೆ ದೂರು ನೀಡಿದ್ದರೆ.

    ಕೂಡಲೇ ಪಾವಗಡ ಫುಡ್ ಇನ್ಸ್​ಪೆಕ್ಟರ್​ ಮಂಜುನಾಥ್ ಸ್ಥಳಕ್ಕೆ ಭೇಟಿ ಪರೀಶಿಲನೆ ನಡೆಸಿದರು. ಜತೆಗೆ ನ್ಯಾಯ ಬೆಲೆ ಅಂಗಡಿಯಲ್ಲಿ ದಾಸ್ತಾನು ಮಾಡಿಟ್ಟಿದ್ದ ಅಕ್ಕಿ ಮೂಟೆಗಳನ್ನು ಪರೀಕ್ಷಿಸಿದಾಗ ಅದರಲ್ಲೂ ಗೊಬ್ಬರ ಮಿಶ್ರಣವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆ ತಹಸೀಲ್ದಾರ್ ಆದೇಶದ ಅನ್ವಯ ಕೂಡಲೇ ಪಡಿತರ ಅಕ್ಕಿ ವಿತರಣೆಯನ್ನು ನಿಲ್ಲಿಸಿದ್ದಾರೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ

    ಪ್ರೀತಿಸಿ ಕೈಕೊಟ್ಟ ಶಾಸಕನಿಗೆ ಶಾಕ್​ ಕೊಟ್ಟ ಹೈಕೋರ್ಟ್​! ಕೊನೆಗೂ ಯುವತಿಯ ಹೋರಾಟಕ್ಕೆ ಸಿಕ್ತು ಜಯ

    ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಭೇದಿಸಲಾಗದೇ ಅಧಿಕಾರಿಗಳು ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts