More

    ಮಣ್ಣು ಪರೀಕ್ಷಿಸಿ ಭೂಮಿಗೆ ಗೊಬ್ಬರ ನೀಡಿ

    ಎನ್.ಆರ್.ಪುರ: ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿ ಭೂಮಿಗೆ ಕೊರತೆ ಇರುವ ಗೊಬ್ಬರ ನೀಡಬೇಕು ಎಂದು ಶೃಂಗೇರಿ ಅಡಕೆ ಸಂಶೋಧನಾ ಕೇಂದ್ರದ ಸಸ್ಯ ಶಾಸ್ತ್ರಜ್ಞ ಡಾ. ಪಿ.ಎಸ್.ಜಕಾತಿಮಠ್ ರೈತರಿಗೆ ಸಲಹೆ ನೀಡಿದರು.
    ಕಡಹಿನಬೈಲು ಗ್ರಾಮದ ನೇರ್ಲೆಕೊಪ್ಪದಲ್ಲಿ ಕೃಷಿ ಇಲಾಖೆ ಭಾನುವಾರ ಏರ್ಪಡಿಸಿದ್ದ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಡಕೆ ಕೊಳೆರೋಗ ಬಾರದಂತೆ ಬೋರ್ಡೋ ಮಿಶ್ರಣ ತಯಾರಿಸುವಾಗ ಪಿ.ಎಚ್-7 ಬರುವಂತೆ ನೋಡಿಕೊಳ್ಳಬೇಕು. ಪ್ರತಿ ತೋಟದಲ್ಲೂ ಬಸಿ ಕಾಲುವೆ ಅಗತ್ಯ. ವಿಶೇಷವಾಗಿ ಗದ್ದೆಗಳಲ್ಲಿ ತೋಟ ಮಾಡುವ ರೈತರು ನೀರು ಬಸಿದುಹೋಗುವಂತೆ ಬಸಿ ಕಾಲುವೆ ಮಾಡಬೇಕು. ಜತೆಗೆ ಹೊಸ ಗದ್ದೆಗಳಿಗೆ ಹೊಸ ಮಣ್ಣು ಹಾಕಬೇಕು. ಅಡಕೆ ಮರಗಳಿಗೆ ವರ್ಷದಲ್ಲಿ ಹಿಂಗಾರು ಹಾಗೂ ಮುಂಗಾರಿನಲ್ಲಿ ಗೊಬ್ಬರ ನೀಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
    ತೀರ್ಥಹಳ್ಳಿ ಕೀಟಶಾಸ್ತ್ರಜ್ಞ ಡಾ. ಅಂಜನಕುಮಾರ್ ಮಾತನಾಡಿ, ಬೋರ್ಡೋ ಮಿಶ್ರಣದ ಪ್ರಾತ್ಯಕ್ಷಿಕೆಯನ್ನು ಶೀಘ್ರದಲ್ಲೇ ರೈತರ ತೋಟಗಳಲ್ಲೇ ಮಾಡಲಾಗುವುದು. ಅಡಕೆ ತೋಟಗಳಿಗೆ ಪ್ರತಿವರ್ಷ ಸುಣ್ಣ ನೀಡಬೇಕು. ಬೋರ್ಡೋ ಮಿಶ್ರಣ ಮಾಡುವಾಗ ಆ ನೀರಿನ ಮೇಲೂ ಬೋರ್ಡೋ ಮಿಶ್ರಣದ ಪಿ.ಎಚ್. ವ್ಯತ್ಯಾಸವಾಗಲಿದೆ. ಹಾಗಾಗಿ ಸುಣ್ಣ, ಮೈಲುತುತ್ತ ತೂಕದಲ್ಲೂ ವ್ಯತ್ಯಾಸವಾಗಲಿದೆ ಎಂದರು.
    ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕಿ ವಿನುತಾ ಮಾಹಿತಿ ನೀಡಿದರು. ನಂತರ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಿದರು. ಪ್ರಗತಿಪರ ಕೃಷಿಕ ಬಿ.ಕೆ.ಜಾನಕೀರಾಂ, ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಕಡಹಿನಬೈಲು ಗ್ರಾಪಂ ಸದಸ್ಯರಾದ ಎ.ಬಿ.ಮಂಜುನಾಥ್, ವಾಣಿ ನರೇಂದ್ರ, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಮಮತಾ, ಚೇತನ್ ಬಣಗಿ, ವಿಜೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts