More

    ಐಟಿ ದಾಳಿ ವೇಳೆ 42 ಕೋಟಿ ರೂ. ಪತ್ತೆ ಪ್ರಕರಣ: ಹೃದಯಾಘಾತದಿಂದ ಗುತ್ತಿಗೆದಾರ ಅಂಬಿಕಾಪತಿ ಸಾವು

    ಬೆಂಗಳೂರು: ಐಟಿ ದಾಳಿಯ ವೇಳೆ ಕೋಟಿ ಕೋಟಿ ಹಣ ಪತ್ತೆಯಾದ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

    ಇಂದು ಸಂಜೆ 6.40 ಸುಮಾರಿಗೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಅಂಬಿಕಾಪತಿ ಮೃತಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ಅಂಬಿಕಾಪತಿ ಮನೆಯ ಮೇಲೆ ಐಟಿ ದಾಳಿ ನಡೆದಾಗ 42 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿ ಆರೋಪ-ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿತ್ತು. ತಮ್ಮ ಮನೆಯಲ್ಲಿದ್ದ ಹಣ ಪತ್ತೆಯಾಗಿದ್ದಲ್ಲದೆ, ಸಾಕಷ್ಟು ಸುದ್ದಿಯಾದ್ದರಿಂದ ಅಂಬಿಕಾಪತಿ ಮಾನಸಿಕ ಒತ್ತಡಕ್ಕೆ ಒಳಗಾಗಿ, ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

    ಐಟಿ ದಾಳಿ ನಡೆದ ಒಂದೇ ತಿಂಗಳಲ್ಲಿ ಅಂಬಿಕಾಪತಿ ಸಾವಿಗೀಡಾಗಿದ್ದಾರೆ. ನಾಳೆ ಅಂತಿಮ ಕ್ರಿಯೆ ನಡೆಯಲಿದೆ.

    ಸುಲ್ತಾನ್‌ಪಾಳ್ಯ ಬಳಿಯ ಆತ್ಮಾನಂದ ಕಾಲನಿಯಲ್ಲಿರುವ ಅಂಬಿಕಾಪತಿ ಅವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ಐಟಿ ದಾಳಿಯ ವೇಳೆ 42 ಕೋಟಿ ರೂ. ಪತ್ತೆಯಾಗಿತ್ತು. ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಅಂಬಿಕಾಪತಿ ಅವರ ನಿವಾಸದ ಲಾಕರ್‌ನಲ್ಲಿ ಎರಡು ಸೂಟ್‌ಕೇಸ್‌ಗಳು ಸಿಕ್ಕಿದ್ದು, ಅವುಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದವು. ಜತೆಗೆ, 42 ಕೋಟಿ ರೂ.ಗಳಿಗೆ ಸಂಬಂಧಪಟ್ಟಂತೆ ಕೆಲ ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳ ಹೆಸರಿರುವ ಚೀಟಿಗಳು ಸಿಕ್ಕಿವೆ ಎಂದು ಹೇಳಲಾಗಿದೆ. ಈ ಹಣವನ್ನು ಯಾರಿಂದ ಸಂಗ್ರಹಿಸಲಾಗಿದೆ ಮತ್ತು ಯಾರಿಗೆ ಹಣ ತಲುಪಿಸಬೇಕಿತ್ತು ಎಂಬ ಮಾಹಿತಿ ಚೀಟಿಗಳಲ್ಲಿದೆ ಎಂದು ಮೂಲಗಳು ತಿಳಿಸಿವೆ.

    ಹಣ ಪತ್ತೆಯಾದ ವಿಚಾರವಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪದ ಕೆಸರೆರಚಾಟ ನಡೆದಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲೆಕ್ಷನ್ ಹಣವು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಖೇನ ರಾಹುಲ್ ಗಾಂಧಿಗೆ ತಲುಪುತ್ತದೆ. ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಗ್ರಹಿಸಿದ ಹಣ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿಗೆ ತಲುಪುತ್ತದೆ. ಸಿದ್ದರಾಮಯ ತಂಡದಲ್ಲಿ ಅವರ ಪುತ್ರ ಯತೀಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಇನ್ನೂ 3-4 ಜನರಿದ್ದರೆ, ಡಿ.ಕೆ.ಶಿವಕುಮಾರ್ ತಂಡದಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ, ಪ್ರದೀಪ್ ಇನ್ನೂ ನಾಲ್ಜೈದು ಕಂಪನಿಗಳಿವೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು.

    ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಅಂತ್ಯ: ವಿಚಾರಣೆಗೆ ಹಾಜರಾಗಲು ನೋಟಿಸ್​

    ಕಾಂಗ್ರೆಸ್ ನ ಕಲೆಕ್ಷನ್ ವಂಶಾವಳಿ ಬಿಡುಗಡೆ ಮಾಡಿದ ಬಿಜೆಪಿ

    ಸತತ 48 ಗಂಟೆಗಳ ಐಟಿ ದಾಳಿ ಅಂತ್ಯ: ಪ್ರಭಾವಿ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts