More

    ರಾಜ್ಯ ಬಜೆಟ್ ಮಂಡನೆಗೂ ಮುನ್ನವೇ ಸಿಎಂ‌ ಮನೆ ಮುಂದೆ ಹೈಡ್ರಾಮ

    ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಇನ್ನು ಕೆಲವೇ ಸಮಯ ಇರುವಾಗಲೇ ಪಂಚಮಸಾಲಿ ಸಮುದಾಯದ ಹೋರಾಟ ತೀವ್ರಗೊಂಡಿದೆ.

    ಮುಖ್ಯಮಂತ್ರಿ ಸರ್ಕಾರಿ ನಿವಾಸ ಕಾವೇರಿ ಬಳಿ ಜಮಾಯಿಸಿದ ಪಂಚಮಸಾಲಿ ಸಮುದಾಯದ ಮಹಿಳಾ ಘಟಕದ ಕಾರ್ಯಕರ್ತರು, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಮುಂದಾದರು. ಕೆಲಕಾಲ ರಸ್ತೆಯಲ್ಲೇ ನಿಂತ ಪಂಚಮಸಾಲಿ ಮಹಿಳೆಯರು, ಸಿಎಂ ಮನೆಗೆ ಬರುವ ವಾಹನಗಳಿಗೆ ಅಡ್ಡಿಪಡಿಸಿದರು. ಇದರಿಂದ ಸ್ಥಳದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಯಿತು.

    ಇದನ್ನೂ ಓದಿರಿ: ಬಿಗ್​ಬಾಸ್​ನಿಂದ ಧನುಶ್ರೀ ಔಟ್​: ಟಿಕ್​ಟಾಕ್​ ಬೆಡಗಿಯ ಎಲಿಮಿನೇಷನ್​ಗೆ ಕಾರಣ ಇದೆನಾ?

    2ಎ ಮೀಸಲು ವಿಚಾರದಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಲೇಬೇಕೆಂದು ಹೋರಾಟಗಾರರು ಪಟ್ಟು ಹಿಡಿದಿದ್ದರಿಂದ ಪೊಲೀಸರು ಗಲಿಬಿಲಿಗೊಂಡರು. ಕೊನೆಯಲ್ಲಿ ಪಂಚಮಸಾಲಿ ಹೋರಾಟಗಾರರನ್ನು ಪೊಲೀಸ್​ ವಶಕ್ಕೆ ಪಡೆಯಲಾಯಿತು.

    ಬಜೆಟ್ ಮಂಡನೆ ಪೂರ್ವದಲ್ಲಿ ಸಂಪ್ರದಾಯದಂತೆ ದೇವಸ್ಥಾನಗಳಿಗೆ ತೆರಳಲು ಸಿಎಂ ಸಿದ್ಧತೆ ನಡೆಸಿದಾಗಲೇ ಪ್ರತಿಭಟನೆ ಎದುರಾಯಿತು. ಇದರಿಂದ ಸಿಎಂ‌ ಕೂಡ ಕಸಿವಿಸಿಗೊಂಡರೆಂದು ತಿಳಿದುಬಂದಿದೆ.

    ಕುಸಿದ ಆದಾಯ ಸಂಪನ್ಮೂಲ ಸಂಗ್ರಹದ ಸವಾಲು; ಬಜೆಟ್​ ಸರಣಿ ಲೇಖನ

    ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳಿಬ್ಬರು ಶವವಾಗಿ ಪತ್ತೆ..!

    Web Exclusive | ಅನ್ನಕ್ಕಾಗಿ ಊರೂರು ಅಲೆಯುವ ಆದಿವಾಸಿಗಳು: ಅರಣ್ಯದಿಂದ ಹೊರಬಂದು 2 ದಶಕವಾದರೂ ದಕ್ಕದ ನೆಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts