More

    ದೆಹಲಿ ಬಜೆಟ್ 2024: 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ಸಿಗಲಿದೆ ತಿಂಗಳಿಗೆ 1000 ರೂ.

    ದೆಹಲಿ: ದೆಹಲಿ ಹಣಕಾಸು ಸಚಿವೆ ಅತಿಶಿ ಸೋಮವಾರ ವಿಧಾನಸಭೆಯಲ್ಲಿ ತಮ್ಮ 10 ನೇ ಬಜೆಟ್ ಮಂಡಿಸಿದರು. ಅತಿಶಿ ದೆಹಲಿಗೆ 76000 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದು, ಈ ಬಜೆಟ್​​​ನಲ್ಲಿ ಎಎಪಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡುವುದಾಗಿ ಘೋಷಿಸಿದೆ. ಈ ಮೊತ್ತವನ್ನು ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ ನೀಡಲಾಗುವುದು ಎಂದು ತಿಳಿಸಿದರು.

    ಶಿಕ್ಷಣಕ್ಕೆ 16,396 ಕೋಟಿ ರೂ. ಆರೋಗ್ಯಕ್ಕೆ 8685 ಕೋಟಿ ರೂ., ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಮತ್ತು ಸೌಲಭ್ಯಗಳಿಗಾಗಿ 6215 ಕೋಟಿ ರೂ., ಮೊಹಲ್ಲಾ ಕ್ಲಿನಿಕ್ ಗೆ 212 ಕೋಟಿ ರೂ. ನೀಡುವುದಾಗಿ ದೆಹಲಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

    ತಮ್ಮ ಬಜೆಟ್ ಭಾಷಣದ ಆರಂಭದಲ್ಲಿ ಅತಿಶಿ ಅವರು ಕೇಜ್ರಿವಾಲ್ ಸರ್ಕಾರದ ಈವರೆಗಿನ ಸಾಧನೆಗಳನ್ನು ಪ್ರಸ್ತಾಪಿಸಿದರು. ಕಳೆದ 10 ವರ್ಷಗಳಲ್ಲಿ ದೆಹಲಿಯ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದೆಹಲಿಯ ಜನರು ಉತ್ತಮ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನೋಡಿದ್ದಾರೆ. ದೆಹಲಿಯಲ್ಲಿ ರಾಮರಾಜ್ಯದ ಕನಸನ್ನು ನನಸಾಗಿಸಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.

    ರಾಮರಾಜ್ಯದ ಉಲ್ಲೇಖ 
    ರಾಮರಾಜ್ಯದ ಕನಸನ್ನು ನನಸು ಮಾಡಲು ಕಳೆದ 9 ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಅತಿಶಿ ಹೇಳಿದರು. ರಾಮರಾಜ್ಯಕ್ಕಾಗಿ ನಾವು ಬಹಳ ದೂರ ಕ್ರಮಿಸಬೇಕಾಗಿದೆ. ಈ ಹಿಂದೆ ಸಾಮಾನ್ಯ ಜನರು ದುಬಾರಿ ಆಸ್ಪತ್ರೆ ಬಿಲ್‌ಗಳ ಹೊರೆಯನ್ನು ಹೊತ್ತುಕೊಂಡು ತಮ್ಮ ಆಭರಣಗಳನ್ನು ಅಡಮಾನವಿಡಬೇಕಾಗಿತ್ತು. ಓದಿದರೂ ಮಕ್ಕಳಿಗೆ ಕೆಲಸ ಸಿಗುತ್ತಿರಲಿಲ್ಲ. ತಿಂಗಳ 25ಕ್ಕೆ ಗೃಹಿಣಿಯ ಹಣ ಖಾಲಿಯಾಗುತ್ತಿತ್ತು. ಬದುಕಲು ತಮ್ಮ ಒಡವೆಗಳನ್ನು ಅಡಮಾನವಿಡಬೇಕಾಗಿತ್ತು ಎಂದು ತಿಳಿಸಿದರು. 

    ದೆಹಲಿಯ ಸರ್ಕಾರಿ ಶಾಲೆಗಳು ಬದಲಾಗಿವೆ ಹೇಳಿದ ಅತಿಶಿ, ಒಂಬತ್ತು ವರ್ಷಗಳಲ್ಲಿ ರಾಜಧಾನಿಯ ಪ್ರತಿಯೊಂದು ವಿಭಾಗವನ್ನು ಸರ್ಕಾರ ಅಭಿವೃದ್ಧಿಪಡಿಸಿದೆ. ಈ ವರ್ಷ ಹೊಸ ಶಾಲೆಗಳು ಮತ್ತು ತರಗತಿ ಕೊಠಡಿಗಳ ನಿರ್ಮಾಣಕ್ಕೆ 150 ಕೋಟಿ ರೂ., ಪ್ರಸ್ತುತ ತರಗತಿ ಕೊಠಡಿಗಳ ನಿರ್ವಹಣೆಗೆ 45 ಕೋಟಿ ರೂ., ಎಸ್‌ಒಎಸ್‌ಇಗಳಿಗೆ 42 ಕೋಟಿ ರೂ. ಇದರೊಂದಿಗೆ ಕ್ರೀಡಾ ಶಿಕ್ಷಣಕ್ಕೆ 118 ಕೋಟಿ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣಕ್ಕೆ 1212 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದರು. 

    10 ದಿನಗಳು, 12 ರಾಜ್ಯಗಳು, 29 ಕಾರ್ಯಕ್ರಮಗಳು… ಮೋದಿಯವರ ಬಿರುಸಿನ ಪ್ರವಾಸದ ಮೆಗಾ ಪ್ಲಾನ್ ಏನು?

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts