More

    ನವೆಂಬರ್​ನಿಂದ ಕಾಲೇಜು ಆರಂಭ: ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದೇನು?

    ಬೆಂಗಳೂರು: 2020-21ನೇ ಶೈಣಿಕ ಸಾಲಿನ ಪದವಿ ಮತ್ತು ಸ್ನಾತಕೋತ್ತರ ತರಗತಿಯನ್ನು ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ತಾಲೀಮು ಆರಂಭಿಸಿದೆ.

    ಉಪ ಮುಖ್ಯಮಂತ್ರಿ ಡಾ.ಸಿ.ಎನ್​.ಅಶ್ವತ್ಥನಾರಾಯಣ ಅ.20ರಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರಥಮ ಸಭೆಯನ್ನು ನಡೆಸಲಿದ್ದು, ಈ ಹಂತದಲ್ಲಿ ಕಾಲೇಜು ಆರಂಭ ಸೂಕ್ತವೇ? ಸಾಧ್ಯವೇ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.

    ಈ ಸಂಬಂಧ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಡಾ.ಸಿ.ಎನ್​.ಅಶ್ವತ್ಥನಾರಾಯಣ, ಕರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಕಾಲೇಜು ಆರಂಭಿಸುವ ಕುರಿತು ಸರ್ಕಾರದ ನಿಲುವು ಏನಾಗಿರಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಕಷ್ಟು ಹಂತದ ತಯಾರಿ ಬೇಕಾಗುತ್ತದೆ. ಮೊದಲ ಸಭೆ ಮಂಗಳವಾರ ನಡೆಸುತ್ತಿದ್ದೇವೆ, ಮುಂದೆ ಹಲವು ಸುತ್ತಿನ ಸಭೆ ನಡೆಸಲಾಗುತ್ತದೆ ಎಂದರು.

    ಈ ಹಂತದಲ್ಲಿ ತರಗತಿ ಆರಂಭದ ಬಗ್ಗೆ ಅನಿಶ್ಚಿತತೆ ಇದೆ. ಅಧಿಕಾರಿಗಳು, ತಜ್ಞರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಬೇಕಾಗುತ್ತದೆ. ಬಳಿಕ ಮುಖ್ಯಕಾರ್ಯದರ್ಶಿ ಹಂತದಲ್ಲಿ ಸಭೆ ನಡೆಸಬೇಕಾಗುತ್ತದೆ ಎಂದು ವಿವರಿಸಿದ ಡಿಸಿಎಂ, ನವೆಂಬರ್​ನಲ್ಲಿ ಕಾಲೇಜು ಆರಂಭಿಸುವ ಗುರಿ ಇದ್ದರೂ ಯಾವುದೇ ತರಾತುರಿ ಮಾಡಲ್ಲ. ಪರಿಸ್ಥಿತಿ ಅವಲೋಕಿಸಿ, ಸಾಧಕ, ಬಾಧಕ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

    ಈಗಾಗಲೇ ಆನ್​ಲೈನ್​ ಮೂಲಕ ತರಗತಿಗಳು ನಡೆಯುತ್ತಿದ್ದರೂ ಅವು ಸ್ಥಳೀಯ ವಾತಾವರಣಕ್ಕೆ ಪರಿಣಾಮಕಾರಿಯಾಗಿಲ್ಲ. ಅದರಲ್ಲೂ ವೃತ್ತಿ ಶಿಕ್ಷಣ ಕೋರ್ಸ್​ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಸಮಸ್ಯೆಯೊಡ್ಡಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾಲೇಜು ಆರಂಭಕ್ಕೆ ಪರ್ಯಾಯ ಮಾರ್ಗ ಹುಡುಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

    ವಿದ್ಯಾರ್ಥಿಗಳಿಗೆ ಪದವಿ ಅಂತಿಮ ವರ್ಷ ಮುಖ್ಯ, ಒಂದೊಮ್ಮೆ ಅದು ಪರಿಪೂರ್ಣವಾಗಿ ಮುಗಿಯದೇ ಇದ್ದರೆ ವಿದ್ಯಾರ್ಥಿಗಳ ಔದ್ಯೋಗಿಕ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಈ ಕಾರಣಕ್ಕೆ ಸರ್ಕಾರ ಕೂಡ ಚಿಂತಿತವಾಗಿದೆ.

    ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಮೊದಲೇ ಅನುಭವಿಸಿದ್ದ ಚಿರು..!

    ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್​ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts