More

    ಕರೊನಾ ಭಯದಲ್ಲೇ ಎಸ್ಸೆಸ್ಸೆಲ್ಸಿ ಎಕ್ಸಾಂ ಬರೆದ ತನ್ಮಯಿ ರಾಜ್ಯಕ್ಕೆ ಟಾಪರ್​

    ಬೆಂಗಳೂರು: 2019-20ನೇ ಸಾಲಿನ ಎಸ್​ಎಸ್ಎಲ್​ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ಸೇಂಟ್​ ಜೋಸೆಫರ ಕಾನ್ವೆಂಟ್ ಗಲ್ರ್ಸ್​​ ಹೈಸ್ಕೂಲ್​ನ ಐ.ಪಿ. ತನ್ಮಯಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

    ರಾಜ್ಯಕ್ಕೆ ಟಾಪರ್​ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಖುಷಿ ತಡೆಯಲಾಗದೆ ತನ್ಮಯಿ ಆನಂದಬಾಷ್ಪ ಸುರಿಸಿದರು. ಮಾರ್ಚ್​-ಏಪ್ರಿಲ್​ನಲ್ಲಿ ಪರೀಕ್ಷೆ ನಡೆಯುವ ಹುಮ್ಮಸ್ಸಿನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದ ತನ್ಮಯಿ ಕರೊನಾ ಲಾಕ್​ಡೌನ್​ ವೇಳೆ ದಿನಕ್ಕೆರಡು ತಾಸು ಓದುತ್ತಿದ್ದರಷ್ಟೆ. ಆ ಸಮಯದಲ್ಲಿ ಮನೆಯವರೊಂದಿಗೆ ಕಾಲಕಳೆಯುತ್ತ ಇದ್ದೆ ಎನ್ನುವ ತನ್ಮಯಿ, ‘ಎಕ್ಸಾಂ ಡೇಟ್​ ಅಧಿಕೃತ ಆದ ಬಳಿಕ ಮತ್ತೊಮ್ಮೆ ಎಲ್ಲವನ್ನೂ ಪುನರ್​ಮನನ ಮಾಡಿಕೊಂಡೆ. ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದದ್ದು ಖುಷಿಯಾಗಿದೆ’ ಎಂದು ವಿಜಯವಾಣಿಗೆ ತಿಳಿಸಿದರು.

    ಇದನ್ನೂ ಓದಿರಿ ಎಸ್​ಎಸ್​ಎಲ್​ಸಿ ಟಾಪರ್​ ಧೀರಜ್​ ರೆಡ್ಡಿಗೆ ಲಾಕ್​ಡೌನ್​ ಸಮಯವೇ ವರವಾಯ್ತು!

    ‘ಕರೊನಾ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದಾಗುವ ಆತಂಕ ಎದುರಾಗಿತ್ತು. ಪರೀಕ್ಷೆ ನಡೆಯದಿದ್ದರೆ ನಿಜಕ್ಕೂ ತುಂಬಾ ಬೇಸರವಾಗುತಿತ್ತು. ಕೊನೆಗೂ ಎಕ್ಸಾಂ ನಡೆದದ್ದು ಖುಷಿ ವಿಚಾರ. ನಾನು ಚೆನ್ನಾಗಿಯೇ ಓದಿದ್ದರೂ ಪರೀಕ್ಷೆಗೆ ಹೋಗುವ ಮೊದಲೆರಡು ದಿನ ಕರೊನಾ ಭಯ ಕಾಡುತ್ತಿತ್ತು. ದೇವರ ದಯೆ ಎಲ್ಲವೂ ಸಲೀಸಾಗಿ ನಡೆಯಿತು. ನನ್ನ ಈ ಸಾಧನೆಗೆ ಶಿಕ್ಷಕರು ಮತ್ತು ಪಾಲಕರ ಸಹಕಾರ ಹೆಚ್ಚಾಗಿದೆ. ಮನೆಯಲ್ಲಿ ನನ್ನ ಓದಿಗೆ ಅಪ್ಪ-ಅಮ್ಮ ನಿತ್ಯವೂ ಕಾಳಜಿ ವಹಿಸುತ್ತಿದ್ದರು’ ಎಂದು ತನ್ಮಯಿ ಹೇಳಿದರು.

    ತನ್ಮಯ ತಂದೆ ಇ.ಎಸ್​. ಪ್ರಸನ್ನ ವಸ್ತಾರೆ ಗ್ರಾಮದ ಉಪ ತಹಸೀಲ್ದಾರ್​ ಆಗಿದ್ದು, ತಾಯಿ ಸಂಧ್ಯಾ ಡಿ.ಎಲ್​. ಮಲ್ಲಂದೂರು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ. ಮುಂದೆ ಡಾಕ್ಟರ್ ಆಗುವ ಕನಸುಕಟ್ಟಿಕೊಂಡಿದ್ದಾರೆ ತನ್ಮಯಿ. ಇವರ ಸಾಧನೆಗೆ ಪಾಲಕರು ಮತ್ತು ಶಾಲೆಯಲ್ಲಿ ಸಂಭ್ರಮ ಮನೆಮಾಡಿದೆ.

    ಸರ್ಕಾರಿ ಶಾಲೆಯ ಸನ್ನಿಧಿ ಎಸ್​ಎಸ್​ಎಲ್​ಸಿ ಟಾಪರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts