More

    ಉನ್ನತ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ

    ಬ್ಯಾಡಗಿ: ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ಸಮಾಜ ಬಾಂಧವರು ಹೆಚ್ಚು ಆದ್ಯತೆ ನೀಡಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ತಿರಕಪ್ಪ ಮರಬಸಣ್ಣನವರ ತಿಳಿಸಿದರು.

    ಪಟ್ಟಣದ ಶೇಖಪ್ಪ ಗಡಾದ ತೋಟದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ತಾಲೂಕು ಘಟಕದ ಕಾರ್ಯಾಲಯದಲ್ಲಿ ಭಾನುವಾರ ಸಮಾಜದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

    ಸಮಾಜದ ಬಹುತೇಕ ಕುಟುಂಬಗಳು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿವೆ. ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳಲ್ಲಿ ಪ್ರಭಲ ಸ್ಥಾನದಲ್ಲಿದ್ದರೂ ಸರ್ಕಾರ ಈವರೆಗೂ ನಮ್ಮ ಹಕ್ಕುಗಳನ್ನು ನೀಡದೆ, ಸಮಾಜ ಬಾಂಧವರು ಹಿಂದುಳಿಯಲು ಕಾರಣವಾಗಿದೆ. ಈ ಕುರಿತು ಹಲವು ಹೋರಾಟ ನಡೆದರೂ ಸಮರ್ಪಕ ನ್ಯಾಯ ಸಿಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರದ ಸೌಲಭ್ಯಕ್ಕಾಗಿ ತೀವ್ರ ಹೋರಾಟ ನಡೆಸುವ ಚಿಂತನೆ ನಡೆದಿದೆ ಎಂದರು.

    ಪ್ರತಿವರ್ಷ ತಾಲೂಕು ಮಟ್ಟದಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸಮಾಜ ಹಮ್ಮಿಕೊಂಡಿದೆ ಎಂದರು.

    ಜು. 30ರೊಳಗೆ ದಾಖಲೆ ಸಲ್ಲಿಸಿ:

    ಶಹರ ಘಟಕದ ಅಧ್ಯಕ್ಷ ಬಸವರಾಜ ಕಡೆಕೊಪ್ಪ ಮಾತನಾಡಿ, ತಾಲೂಕು ಮಟ್ಟದಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿದ್ದಾರೆ. ಕೆಲವರು ತೀರಾ ಬಡತನದಲ್ಲಿದ್ದು, ಅಂತಹ ಮಕ್ಕಳನ್ನು ಗುರುತಿಸಲಾಗುವುದು. ಅತಿಹೆಚ್ಚು ಅಂಕಪಡೆದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿದ್ದು, ಅರ್ಹ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಜು. 30ರೊಳಗಾಗಿ ದಾಖಲಾತಿಗಳನ್ನು ತಾಲೂಕು ಕಾರ್ಯದರ್ಶಿ ದಯಾನಂದ ಉಳ್ಳಾಗಡ್ಡಿ ಅವರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

    ಸಮಾಜದ ಮುಖಂಡರಾದ ಜಯದೇವ ಶಿರೂರ, ಶಂಕರಗೌಡ ಪಾಟೀಲ, ಶೇಖರಗೌಡ ಗೌಡರ, ಚನ್ನಬಸಪ್ಪ ಬೂದಿಹಾಳ, ಕೆಂಪೆಗೌಡ್ರ ಪಾಟೀಲ, ಡಿ.ಎಚ್. ಬುಡ್ಡನಗೌಡ, ಶಿವಯೋಗಿ ಗಡಾದ, ಮಹಾಂತೇಶ ಪೂಜಾರ, ನಾಗನಗೌಡ ಕಲ್ಲಾಪುರ, ಶಂಕ್ರಪ್ಪ ದಾನಪ್ಪನವರ, ಹನುಮಂತಪ್ಪ ಕುರುಡಮ್ಮನವರ, ನಾಗರಾಜ ಗುತ್ತಲ, ಚಂದ್ರಶೇಖರ ಗಡಾದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts