More

    ಎಸ್ಸೆಸ್ಸೆಲ್ಸಿ: ಮರುಮೌಲ್ಯಮಾಪನದ ಬಳಿಕ ರಾಜ್ಯಕ್ಕೆ 5ನೇ ಸ್ಥಾನ ಪಡೆದ ವಿದ್ಯಾರ್ಥಿನಿ!

    ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಮರುಮೌಲ್ಯಮಾಪನದ ಬಳಿಕ ಹಾಸನದ ಯುನೈಟೆಡ್ ಅಕಾಡೆಮಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ. ಪುಣ್ಯ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ.

    ಹಾಸನ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್.ಜಯರಾಮಯ್ಯ ಹಾಗೂ ಕೆ.ಹೇಮಾ ದಂಪತಿ ಪುತ್ರಿ ಪುಣ್ಯ ಮೊದಲಿನ ಫಲಿತಾಂಶದಲ್ಲಿ 625ಕ್ಕೆ 617 ಅಂಕ ಗಳಿಸಿದ್ದರು. ನಿರೀಕ್ಷಿಸಿದಷ್ಟು ಅಂಕ ಬಾರದ ಕಾರಣ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.

    ಇದನ್ನೂ ಓದಿ: ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ

    ಇದೀಗ ಫಲಿತಾಂಶ ಬಂದಿದ್ದು, 625ಕ್ಕೆ 620 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ್ದಾರೆ. ಕನ್ನಡ ವಿಷಯದಲ್ಲಿ 125 ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಶಿರಾ ತಾಲೂಕಿನ ಬರಗೂರು ಬಳಿಯ ರಂಗಾಪುರ ಮೂಲದ ಜೆ.ಪುಣ್ಯ ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

    ಕರೊನಾ ರ‍್ಯಾಪಿಡ್ ಟೆಸ್ಟ್‌ನಿಂದ ತಪ್ಪು ಫಲಿತಾಂಶ: ಒಪ್ಪಿಕೊಂಡ ಕೇಂದ್ರ, ಐಸಿಎಂಆರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts