More

    ವಿದ್ಯಾರ್ಥಿಗಳು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಲಿ

    ಬೆಟ್ಟದಪುರ: ಮಕ್ಕಳ ಹೆಸರಿನಲ್ಲಿ ಅಮೋಘವರ್ಷ, ಅಮೃತವರ್ಷಿಣಿ ಸೇವಾ ಪ್ರತಿಷ್ಠಾನ ಸ್ಥಾಪಿಸಿ ಬಡ ಮಕ್ಕಳಿಗೆ ನೆರವು ನೀಡುತ್ತಿರುವ ಗೊರಳ್ಳಿ ಜಗದೀಶ್ ಅವರ ಸೇವೆ ಶ್ಲಾಘನೀಯ ಎಂದು ಶಿಕ್ಷಣ ತಜ್ಞ ಬಿ.ವಿ ಮಂಜುನಾಥ್ ತಿಳಿಸಿದರು.

    ಇಲ್ಲಿನ ಎಸ್‌ಎಂಎಸ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಅಮೋಘ ವರ್ಷ ಅಮೃತ ವರ್ಷಿಣಿ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಳ್ಳೆಯ ಗುರಿಗಳನ್ನು ಇಟ್ಟುಕೊಂಡು ಆ ದಾರಿಯಲ್ಲಿ ನಡೆದು ಯಶಸ್ಸು ಕಾಣಬೇಕು. ಪ್ರತಿ ಮನುಷ್ಯ ಬಡವರು, ನಿರ್ಗತಿಕರು, ದುರ್ಬಲರಿಗೆ ನೆರವು ನೀಡುವ ಮೂಲಕ ಹೃದಯ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದರು.

    ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ ಮಾತನಾಡಿ, ಇಂದಿನ ಆಧುನಿಕ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಕಲಿಕೆಯಲ್ಲಿಯೇ ಮಕ್ಕಳು ಆರೋಗ್ಯಕರವಾದ ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

    ಎಸ್‌ಎಂಎಸ್ ಸಂಸ್ಥೆ ವತಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ರಟ್ಟು, ಲೇಖನ ಸಾಮಗ್ರಿ ವಿತರಣೆ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಛಾಯಾ, ಕ.ಸಾ.ಪ. ಗೌರವ ಕಾರ್ಯದರ್ಶಿ ಅಲನಹಳ್ಳಿ ಕೆಂಪರಾಜು, ನಿಂಗರಾಜು, ಶಾಲೆ ಮುಖ್ಯಶಿಕ್ಷಕ ಸುರಗಹಳ್ಳಿ ವೆಂಕಟೇಶ್, ಶಿಕ್ಷಕರಾದ ನಿಂಗರಾಜು, ಅಂದಾನಯ್ಯ, ಆರೋಗ್ಯ ಸಹಾಯಕಿ ದೇವಕಿ, ಗೊರಳ್ಳಿ ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts