More

    ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿದ ತಮಿಳುನಾಡಿಗೆ ಶಿಕ್ಷಣ ಸಚಿವರ ಟಾಂಗ್​

    ಬೆಂಗಳೂರು: ಕರೊನಾ ವೈರಸ್​ ಸೊಂಕು ಭೀತಿ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಇದೇ ಹಾದಿಯನ್ನು ಪಕ್ಕದ ಪಾಂಡಿಚೇರಿಯೂ ಸಹ ಹಿಡಿದಿದೆ. ಹೀಗಾಗಿ ರಾಜ್ಯದಲ್ಲೂ ಪರೀಕ್ಷೆ ರದ್ದತಿಗೆ ಒತ್ತಾಯ ಕೇಳಿಬರುತ್ತಿವೆ.

    ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್, ತಮಿಳುನಾಡಿಗಿಂತ ನಮ್ಮ ರಾಜ್ಯ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅವರು ನಮ್ಮ ಹಿಂಬಾಲಿಸಬೇಕೆ ಹೊರತು ನಾವು ಅವರನ್ನು ಅನುಸರಿಸಬಾರದು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಕಾ? ಬೇಡ್ವಾ? ಎಂಬ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಸಚಿವರು

    ಮಕ್ಕಳ ಭವಿಷ್ಯಕ್ಕಾಗಿ ಪರೀಕ್ಷೆ ನಡೆಸುವುದು ಅನಿವಾರ್ಯ. ಮಕ್ಕಳ ಮನಸ್ಸಲ್ಲಿ ಗೊಂದಲವುಂಟಾಗದಂತೆ ವರ್ತಿಸೋಣ. ಮಕ್ಕಳು ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಅವರ ಉತ್ಸಾಹಕ್ಕೆ ತಣ್ಣೀರು ಎರಚುವುದು ಬೇಡ. ನಮ್ಮಲ್ಲಿರುವ ಕರೊನಾ ಪ್ರಕರಣಗಳು ಹೊರರಾಜ್ಯದಿಂದ ಬಂದಿರುವುದು. ಸೋಂಕಿತರು ಅತ್ಯಂತ ವೇಗವಾಗಿ ಗುಣಮುಖರಾಗುತ್ತಿದ್ದಾರೆ. ರಾಜ್ಯದಲ್ಲಿ ಒಂದೇ ಒಂದು ರೋಗಿ ಕೂಡ ವೆಂಟಿಲೇಟರ್​ನಲ್ಲಿ ಇಲ್ಲ. ಇಡೀ ರಾಜ್ಯದಲ್ಲಿ ಕೇವಲ 17 ಜನ ಮಾತ್ರ ಐಸಿಯುನಲ್ಲಿ ಇದ್ದಾರೆ. ಹೀಗಾಗಿ ಮಕ್ಕಳ ಮಾನಸಿಕ ದೃಢತೆಯನ್ನು ಬಲಪಡಿಸೋಣ ಎಂದು ಕರೆ ನೀಡಿದರು.

    ಎಲ್​ಕೆಜಿ-ಯುಕೆಜಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆ ಪ್ರಾರಂಭ ಮಾಡುವಾಗಲೂ ಕೂಡ ಹಂತ-ಹಂತವಾಗಿ ಪ್ರಾರಂಭ ಮಾಡಲಿದ್ದೇವೆ. ಖಾಸಗಿ ಶಾಲೆಗಳು ಶುಲ್ಕ ಪಾವತಿಸಲು ಒತ್ತಾಯಿಸಿದರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕರೊನಾ ಸೋಂಕು; ಆಸ್ಪತ್ರೆಗೆ ದಾಖಲು

    ನಮ್ಮ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಋಣ ನನ್ನ ಮೇಲಿದೆ. ಶಾಲೆಗಳನ್ನು ಸಬಲೀಕರಣ ಮಾಡುವುದೇ ನನ್ನ ಧ್ಯೇಯ. ಖಾಸಗಿ ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸುರೇಶ್​ ಕುಮಾರ್​ ಸ್ಪಷ್ಟನೆ ನೀಡಿದರು. (ದಿಗ್ವಿಜಯ ನ್ಯೂಸ್​)

    PHOTO GALLERY| ಕಿರುತೆರೆಯ ರೌಡಿ ಬೇಬಿಗೆ ಬರ್ತಡೇ ಸಂಭ್ರಮ: ನಿಶಾರ ನಶೆ ಏರಿಸೋ ಫೋಟೋಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts