More

    ಕೃಷಿಕರ ಸಮಸ್ಯೆಗಳ ನಿವಾರಣೆಗೆ ನೆರವಾದ ಎಸ್‌ಆರ್‌ಕೆ ಲ್ಯಾಡರ್ – ಮಾಲೀಕ ಕೇಶವ ಅಮೈ ಮಾಹಿತಿ

    ಪುತ್ತೂರು: ಕೃಷಿಕರಿಗೆ ನುರಿತ ಕಾರ್ಮಿಕರ ಅಭಾವದಿಂದ ಕೃಷಿ ಚಟುವಟಿಕೆಯಲ್ಲಿ ಆಗುತ್ತಿದ್ದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಣ್ಣದಾಗಿ ಎಸ್.ಆರ್. ಕೆ. ಲ್ಯಾಡರ್ ಅನ್ನು 1999ರಲ್ಲಿ ಪ್ರಾರಂಭಿಸಲಾಗಿತ್ತು. ಬಿದಿರಿನ ಅಲಭ್ಯತೆಯ ಸಮಯದಲ್ಲಿ 2-3 ಕಾರ್ಮಿಕರ ಜತೆಗೂಡಿ ಅಲ್ಯೂಮಿನಿಯಂನಿAದ ಏಣಿ ತಯಾರಿಸಸಲಾಗಿದೆ. ಈಗ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ನಗರಕ್ಕಿಂತ ಹಳ್ಳಿಗಳಲ್ಲೇ ಜನರಿಗೆ ಬರಲು ಅನುಕೂಲ ಎಂಬ ನಿಟ್ಟಿನಲ್ಲಿ ರಜತ ಸಂಭ್ರಮವನ್ನು ಕಲಾಯಿ ಗುತ್ತಿನಲ್ಲಿ ಇಟ್ಟುಕೊಳ್ಳಲಾಗಿದೆ. ಎಂದು ಎಸ್.ಆರ್. ಕೆ. ಲ್ಯಾಡರ್ ಮಾಲೀಕ ಕೇಶವ ಅಮೈ ಹೇಳಿದರು.


    2006ರ ಬಳಿಕ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಣೆ ಮಾಡುವ ಕಾರ್ಯವಾಗಿದ್ದು, 2008ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯ ಧನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2015ರ ಹೊತ್ತಿಗೆ ಏಣಿಗಳ ಜತೆಗೆ ಮಾನವ ಚಾಲಿತ ಗಾಡಿ, ಕತ್ತಿ ದೋಟಿಗಳು, ಔಷಧ ಹೊಡೆಯುವ ವ್ಯವಸ್ಥೆ, 2017ರ ಕಾಳುಮೆಣಸು ಬೇರ್ಪಡಿಸುವ ಯಂತ್ರ, 2019ರಲ್ಲಿ ಯಂತ್ರ ಚಾಲಿತ ಟ್ರಾಲಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕೃಷಿಕರಿಗೆ ಬೇಕಾದ ಪರಿಕರಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.
    ಲೋಗೋ ಅನಾವರಣ ಮತ್ತು ರಕ್ತದಾನ ಶಿಬಿರ, ಎಂ.ಬಿ. -Ëಂಡೇಷನ್ ವಿಶೇಷ ಚೇತನ ಮಕ್ಕಳ ಶಾಲೆಗೆ ಧನ ಸಹಾಯ ಮತ್ತು ಸಹಭೋಜನ, ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭ, ಶಿವರಾಮ ಕಾರಂತ ಶಾಲೆಯಲ್ಲಿ ತಾಯಂದಿರ ಸಭೆ, ಸಂಪನ್ಮೂಲ ವ್ಯಕ್ತಿಗಳಿಂದ ಸೈಬರ್ ಕ್ರೆÊಮ್ ಮತ್ತು ಆರೋಗ್ಯ ಮಾಹಿತಿ, ಬನ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಹಾಗೂ ಶಾಲಾ ಕೊಠಡಿ, ದಾಸ್ತಾನು ಕೊಠಡಿಗಳ ನಿರ್ವಹಣೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಮತ್ತು ಹಣ್ಣುಹಂಪಲು ವಿತರಣೆ, ಎಸ್.ಆರ್. ಕೆ. ಸಿಬ್ಬಂದಿಗಳಿಗೆ ಕ್ರೀಡಾ ಸಂಭ್ರಮ, ಕೊÊಲ ಜಾನುವಾರು ಕೇಂದ್ರದ ಶ್ರಮಿಕ ವರ್ಗವನ್ನು ಸನ್ಮಾನಿಸುವ ಕಾರ್ಯಕ್ರಮ, ಬೆಳ್ಳಾರೆ ವಿದ್ಯಾಬೋಽನಿ ಶಾಲೆಯಲ್ಲಿ ಕೃಷಿ ವಿಚಾರ ಸಂಕಿರಣ, ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಕೊÊಲ ಗ್ರಾಮದ ಹತ್ತು ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಗಿದೆ. ನ.28ರಿಂದ ಮೇ 14ರವರೆಗೆ ಹತ್ತು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.


    ರಜತ ಸಂಭ್ರಮ ಕಾರ್ಯಕ್ರಮ ಸಂಯೋಜಕರಾದ ಸತೀಶ್ ಭಟ್ ಬಿಳಿನೆಲೆ, ಅಬ್ರಹಾಂ ಎಸ್.ಎ., ಲೋಕೇಶ್ ಬನ್ನೂರು ಉಪಸ್ಥಿತರಿದ್ದರು.

    ಅನ್ಯ ರಾಜ್ಯಗಳಿಗೂ ವಿಸ್ತರಣೆ
    ಅಡಕೆ, ಕಾಳುಮೆಣಸು ಇರುವ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಭಾಗದಲ್ಲಿ ಮಾರುಕಟ್ಟೆಯನ್ನು ಹೊಂದಿರುವ ಕಂಪನಿ ಇತ್ತೀಚಿನ ದಿನದಲ್ಲಿ ಒಡಿಶಾ ಭಾಗದ ಕೃಷಿಕರೂ ಬಳಕೆ ಮಾಡುತ್ತಿದ್ದಾರೆ. 60 ಮಂದಿ ಕಾರ್ಮಿಕರನ್ನು ಸ್ಥಳೀಯ ಕಾರ್ಖಾನೆಯಲ್ಲಿ ಹೊಂದಿ, 100ಕ್ಕೂ ಅಽಕ ಮಂದಿಗೆ ಹೊರಭಾಗದಲ್ಲಿ ಉದ್ಯೋಗ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಏಣಿಗಳ ಮೂಲ ಎಸ್. ಆರ್. ಕೆ. ಲ್ಯಾಡರ್ ಆಗಿದ್ದು, ಸಾವಿರಕ್ಕೂ ಮಿಕ್ಕಿ ಇಂಡೈರೆಕ್ಟ್ ಜಾಬ್ ಹೊಂದಿದ್ದಾರೆ. 2023ರ ನವೆಂಬರ್‌ನಲ್ಲಿ 25 ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆಯಿAದ ಸುಮಾರು 10 ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮೇ 25ರಂದು ಸಮಾರೋಪ ಸಮಾರಂಭವನ್ನು ಮಾಡುತ್ತಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts