More

  ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

  ಸಿಂಧೂನೂರು: ನಗರದ ಉಪ್ಪಾರವಾಡಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗುರುವಾರ ದೇವಸ್ಥಾನದ ಸೇವಾ ಸಮಿತಿ ಹಾಗೂ ಭಕ್ತರ ಸಹಕಾರದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅನೇಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಆಚರಿಸಲಾಯಿತು.

  ಇದನ್ನೂ ಓದಿ: ಕೃಷ್ಣ ರಾಧೆಯರಾದ ತಾರೆಯರ ಮಕ್ಕಳು ; ಸ್ಯಾಂಡಲ್‌ವುಡ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮ

  ಬೆಳಗ್ಗೆ ಸುಪ್ರಭಾತ ದೇವರನಾಮಗಳು ಹಾಗೂ ಶ್ರೀವೆಂಕಟೇಶ್ವರ ಮೂರ್ತಿಗೆ ಶ್ರೀಕೃಷ್ಣನ ಅಲಂಕಾರ, ಪಂಚಾಮೃತ, ಅಭೀಷೇಕ, ಪುಷ್ಪಾಲಂಕಾರ ಸಲ್ಲಿಸಲಾಯಿತು.

  ಸಂಜೆ ವಿಶೇಷ ಗೋಪೂಜೆ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆಯ ಮೊಸರುಗಡಿಗೆ ಒಡೆಯುವ ಕಾರ್ಯಕ್ರಮ, ಕುರ್ಚಿ ಆಟದ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸಲಾಯಿತು.

  ರಾಯಚೂರು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಭಾರ್ಗವಿ ದೇಸಾಯಿ ಮಾನವಿ ಮಾತನಾಡಿ, ಗೀತೆಯಲ್ಲಿ ಹೇಳಿರುವಹಾಗೆ ಜೀವನದಲ್ಲಿ ನೆಮ್ಮದಿ ಮುಖ್ಯ. ಅನೇಕ ಕಷ್ಟಗಳು ಬಂದರೂ ನಾವು ಜೀವನ ಸಾಗಿಸಬೇಕೆಂದರೆ ಶ್ರೀಕೃಷ್ಣನ ಭಗವದ್ಗೀತೆಯನ್ನು ತಿಳಿಯಬೇಕು ಎಂದು ತಿಳಿಸಿದರು.

  ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ ಮಾತನಾಡಿ ಕರ್ಮವು ನಿರಂತರವಾಗಿ ಜೀವಕ್ಕೆ ಇರುತ್ತದೆ ನಿಶ್ಕಾಮ ಕರ್ಮಕ್ಕೆ ಅನಂತ ಫಲ ಎಂದು ಗೀತೆಯಲ್ಲಿ ಶ್ರೀಕೃಷ್ಣನ ಮಾತು ಇದೆ. ಭಕ್ತರ ನಿರಂತರ ಸೇವೆಯಿಂದ ಭಕ್ತವತ್ಸಲನ ಅನುಗ್ರಹವಾಗುತ್ತದೆ ಎಂದರು.

  ಶ್ಯಾಮಸುಂದರ ದೇಸಾಯಿ, ಸಂಪದಾ ಕುಲಕರ್ಣಿ, ಸಮಿತಿಯ ಕಾರ್ಯದರ್ಶಿ ವಿರುಪಣ್ಣ ಗುಡಿ, ಉಪನ್ಯಾಸಕಿ ಸಂತೋಷಿಕುಮಾರಿ, ಶಿಕ್ಷಕ ತಿಮ್ಮಣ್ಣ ದೇಸಾಯಿ, ದೇವಸ್ಥಾನದ ಸೇವಾ ಸಮಿತಿಯ ಉಮೇಶ ಗೋಮರ್ಸಿ,
  ಬಸವರಾಜ ಕೆಸರಟ್ಟಿ, ತಿರುಪತಿ ಪೂಜಾರಿ, ಅಮರೇಶ ಯಾದವ, ಶ್ರೀನಿವಾಸ ಕಟ್ಟಿಮನಿ, ಅಭೀ, ಭೀಮಣ್ಣ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts