More

    ಪ್ರೇಮ, ಕಾಮ ಮತ್ತು ಸೇಡು … ‘ಹುಬ್ಬಳ್ಳಿ ಡಾಬಾ’ದೊಂದಿಗೆ ಮತ್ತೆ ಬಂದ ಶ್ರೀನಿವಾಸರಾಜು

    ಬೆಂಗಳೂರು: ಒಂದು ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಜನಪ್ರಿಯರಾಗಿದ್ದವರು ನಿರ್ದೇಶಕ ಶ್ರೀನಿವಾಸರಾಜು. ‘ದಂಡುಪಾಳ್ಯ’, ‘ಶಿವಂ’ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದ ಅವರು, ಕೆಲವು ವರ್ಷಗಳಿಂದ ಯಾವುದೇ ಚಿತ್ರವನ್ನೂ ನಿರ್ದೇಶಿಸಿರಲಿಲ್ಲ. ಈಗ ‘ಹುಬ್ಬಳ್ಳಿ ಡಾಬಾ’ ಎಂಬ ತೆಲುಗು, ಕನ್ನಡ ಚಿತ್ರವೊಂದರ ಮೂಲಕ ವಾಪಸ್ಸಾಗಿದ್ದಾರೆ.

    ಇದನ್ನೂ ಓದಿ: 35 ವರ್ಷಗಳ ನಂತರ ಒಟ್ಟಿಗೆ ಚಿತ್ರ ಮಾಡುತ್ತಿದ್ದಾರೆ ಕಮಲ್​ ಹಾಸನ್​ ಮತ್ತು ಮಣಿರತ್ನಂ

    ಇದರಲ್ಲಿ ನವೀನ್​ ಚಂದ್ರ, ದಿವ್ಯಾ ಪಿಳ್ಳೈ, ಅನನ್ಯಾ ಸೇನ್​ ಗುಪ್ತ ರವಿಶಂಕರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ‌ಮೂರು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಈ ಚಿತ್ರದ ಛಾಯಾಗ್ರಹಕರು. ಈಗಾಗಲೇ ಹಾಡುಗಳು ಮತ್ತು ಟ್ರೇಲರ್​ ಬಿಡುಗಡೆಯಾಗಿದೆ.

    ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಶ್ರೀನಿವಾಸರಾಜು, ‘ಕರೊನಾ ಎರಡನೇ ಅಲೆ ಸಮಯದಲ್ಲಿ ಆರಂಭವಾದ ಸಿನಿಮಾವಿದು. ಈ ಕಥೆಯು ಪ್ರೇಮ, ಕಾಮ ಮತ್ತು ಸೇಡಿನ ಸುತ್ತ ಸುತ್ತುತ್ತದೆ. ಈ ಮೂರು ಭಾವನೆಗಳನ್ನು ಪ್ರತಿನಿಧಿಸುವ ಒಂದಿಷ್ಟು ಪಾತ್ರಗಳು ಚಿತ್ರದಲ್ಲಿವೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಇನ್ನೆಲ್ಲೂ ನೋಡಿರುವುದಕ್ಕೆ ಸಾಧ್ಯವೇ ಇಲ್ಲ. ಎರಡೂ ಭಾಷೆಗಳಲ್ಲಿ ನಿರ್ಮಾಣವಾದ್ದರಿಂದ ಎರಡೂ ಭಾಷೆಗಳ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾರೆ ಶ್ರೀನಿವಾಸರಾಜು.

    ಈ ಚಿತ್ರದಲ್ಲಿ ರವಿಶಂಕರ್​ ಒಂದು ಪ್ರಮುಖ ಪಾತರದಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ನನಗೆ ಶ್ರೀನಿವಾಸರಾಜು ಬಹಳ ಹಳೆಯ ಪರಿಚಯ. ‘ಕೋಟೆ’ ಚಿತ್ರದಲ್ಲಿ ಅವಕಾಶ ನೀಡಿದ್ದರು. ಆ ನಂತರ ‘ದಂಡುಪಾಳ್ಯ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು 80ರ ದಶಕದಲ್ಲಿ ಸಂಗೀತ ನೀಡಿದ್ದ, ಜನಪ್ರಿಯ ತಮಿಳು ಚಿತ್ರದ ಗೀತೆಯೊಂದರ ಟ್ಯೂನ್ ಬಳಸಿಕೊಳ್ಳಲು ಶ್ರೀನಿವಾಸರಾಜು ಅವರಿಗೆ ಅವಕಾಶ ನೀಡಿದ್ದಾರೆ. ಈ ಹಾಡು ನನಗೂ ಬಹಳ ಇಷ್ಟ. ಕ್ಲೈಮ್ಯಾಕ್ಸ್ ಸಾಹಸ ಸನ್ನಿವೇಶವನ್ನು ಹನ್ನೆರಡು ದಿನಗಳ ಕಾಲ ಚಿತ್ರಿಸಿರುವುದು ಚಿತ್ರದ ವಿಶೇಷಗಳಲ್ಲೊಂದು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ರವಿಶಂಕರ್.

    ಇದನ್ನೂ ಓದಿ: ಡಾ. ವಿಜಯ ಸಂಕೇಶ್ವರರ ಬಯೋಪಿಕ್ ‘ವಿಜಯಾನಂದ’ ಡಿ. 9ರಂದು ಬಿಡುಗಡೆ

    ಅಂದಹಾಗೆ, ‘ಹುಬ್ಬಳ್ಳಿ ಡಾಬಾ’ ಚಿತ್ರವು ಇದೇ ಶುಕ್ರವಾರ (ನ.11) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ‘ಗಂಧದಗುಡಿ’ಯಿಂದ ಸಿಹಿಸುದ್ದಿ: ಪುನೀತ್ ಮಹತ್ವಾಕಾಂಕ್ಷೆಯ ಸಿನಿಮಾ ಟಿಕೆಟ್​ ದರದಲ್ಲಿ ಭಾರಿ ಇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts