More

    ಇಂದು ಶ್ರೀನಗರ ಲಾಲ್​ಚೌಕ್​​ನಲ್ಲಿ ಧ್ವಜಾರೋಹಣ ನಡೆದಿದ್ದು ಸತ್ಯನಾ? ಇಲ್ಲಿದೆ ನೋಡಿ ವಾಸ್ತವ

    ಇಂದು ದೇಶ 74ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದೆ. ಇದರ ಬೆನ್ನಲ್ಲೇ ಕಳೆದ ವರ್ಷ ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್​ 370ನ್ನು ರದ್ದುಗೊಳಿಸಿದ್ದನ್ನೂ ನೆನಪಿಸಿಕೊಳ್ಳಲಾಗುತ್ತಿದೆ.

    ಕಳೆದ ಬಾರಿ ಆರ್ಟಿಕಲ್​ 370ನ್ನು ರದ್ದುಗೊಳಿಸಿದ್ದಕ್ಕೆ ಈ ಬಾರಿ ಶ್ರೀನಗರದ ಸೂಕ್ಷ್ಮ ಪ್ರದೇಶವಾದ ಲಾಲ್​ ಚೌಕ್​​ನಲ್ಲೂ ತ್ರಿವರ್ಣಧ್ವಜ ಹಾರಿಸಲು ಸಾಧ್ಯವಾಯಿತು ಎಂಬ ಒಂದು ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬೆಳಗ್ಗೆಯಿಂದ ಹರಿದಾಡುತ್ತಿದೆ. ಲಾಲ್​ಚೌಕ್​​ನ ಕ್ಲಾಕ್​ ಟವರ್​ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿರುವುದನ್ನು ನೀವು ಫೋಟೋದಲ್ಲಿ ನೋಡಬಹುದು.

    ಈ ಫೋಟೋದೊಂದಿಗೆ ಕ್ಯಾಪ್ಷನ್​ ಕೂಡ ಬರೆಯಲಾಗಿದೆ. 2019ರ ಆಗಸ್ಟ್​ 5ರ ನಂತರ ಬದಲಾವಣೆ ಆಗಿದ್ದು ಏನು? ಜಿಹಾದಿಗಳ, ದೇಶವಿರೋಧಿ ಅಭಿಯಾನಗಳ ತಾಣವಾಗಿದ್ದ ಲಾಲ್​ ಚೌಕ್ ಈಗ ರಾಷ್ಟ್ರೀಯತೆಯ ಕಿರೀಟವಾಗಿದೆ ಎಂಬುದಕ್ಕೆ ಇಲ್ಲಿ ಧ್ವಜಾ ರೋಹಣವಾಗಿದ್ದೇ ಸಾಕ್ಷಿ ಎಂದು ಬರೆಯಲಾಗಿದೆ. ಈ ಫೋಟೋಗಳು ಸಿಕ್ಕಾಪಟೆ ವೈರಲ್​ ಆಗಿವೆ.

    ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ನಡೆಸಿದ ಫ್ಯಾಕ್ಟ್​ಚೆಕ್​​ನಲ್ಲಿ ಇದು ಸುಳ್ಳು ಎಂಬುದು ಗೊತ್ತಾಗಿದೆ. ಲಾಲ್​ ಚೌಕ್​ನಲ್ಲಿ ಇಂದು ಧ್ವಜಾರೋಹಣ ಮಾಡಿಲ್ಲ. ಇದೊಂದು ಮಾರ್ಪಾಡು ಮಾಡಲಾದ ಫೋಟೋ. ಅಲ್ಲದೆ 10 ವರ್ಷ ಹಳೆಯದ್ದು ಎಂಬ ಸತ್ಯ ಬಯಲಾಗಿದೆ. ಇದನ್ನೂ ಓದಿ: ಶುಕವನದಲ್ಲಿ ಸ್ವಾತಂತ್ರ್ಯ ದಿನಾಚರಣೆ; ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸಿದ ‘ಗಿಳಿ’ಗಳು

    ಈ ಫೋಟೋವನ್ನು ರಿವರ್ಸ್​ ಇಮೇಜ್​ ಸರ್ಚ್​ಗೆ ಕೊಟ್ಟಾಗ 2010ರ ಫೋಟೋ ಎಂಬುದು ಗೊತ್ತಾಗಿದೆ. ಅಲ್ಲದೆ, ಅದೂ ಕೂಡ ತಿರುಚಲಾದ ಚಿತ್ರ ಎನ್ನಲಾಗಿದೆ.

    2010ರಲ್ಲಿ ಫ್ರೀಲಾನ್ಸ್​ ಜರ್ನಲಿಸ್ಟ್​ ಆದ ಮುಬಾಶಿರ್​ ಮುಸ್ತಾಕ್​ ಎಂಬುವರು ಬರೆದಿದ್ದ ಎ ಡೆಸರ್ಟೆಡ್​ ಲಾಲ್​ ಚೌಕ್​, ಶ್ರೀನಗರ್​ ಎಂಬ ಆರ್ಟಿಕಲ್​ಗೆ ಈ ಫೋಟೋ ಬಳಸಿದ್ದರು. ಅದರಲ್ಲೂ ಕೂಡ ರಾಷ್ಟ್ರಧ್ವಜ ಇರಲಿಲ್ಲ. ಅದೇ ಫೋಟೋವನ್ನು ಎಡಿಟ್​ ಮಾಡಿ, ಕ್ಲಾಕ್​ ಟವರ್​ ಮೇಲೆ ಧ್ವಜ ಇರುವಂತೆ ಮಾರ್ಪಡಿಸಿ ಈ ಬಾರಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಲಾಗಿದೆ.
    ಅಷ್ಟೇ ಅಲ್ಲ, ಇಂದು ಲಾಲ್​ಚೌಕ್​​ನಲ್ಲಿ ಧ್ವಜಾರೋಹಣ ಆಗಿಲ್ಲ ಎಂಬುದನ್ನು ಇಂಡಿಯಾ ಟುಡೆಯ ಶ್ರೀನಗರದ ಫೋಟೋ ಜರ್ನಲಿಸ್ಟ್​ ಸ್ಪಷ್ಟವಾಗಿ ತಿಳಿಸಿದ್ದಾರೆ.

    ಪೊಲೀಸ್ ಕಂಟ್ರೋಲ್​ ರೂಂ, ಎಸ್​.ಕೆ.ಸ್ಟೇಡಿಯಂ, ರಾಜಕೀಯ ಪಕ್ಷಗಳ ಪ್ರಧಾನ ಕಚೇರಿಗಳು, ಸಿಆರ್​ಪಿಎಫ್​ ಬೆಟಾಲಿಯನ್​ನ ಪ್ರಧಾನ ಕಚೇರಿಗಳಲ್ಲಿ ಧ್ವಜಾರೋಹಣ ನಡೆದಿದೆ. ಆದರೆ ಲಾಲ್​ ಚೌಕ್​ ಒಂದು ಸೂಕ್ಷ್ಮ ಪ್ರದೇಶವಾಗಿದ್ದರಿಂದ ಅಲ್ಲಿ ಧ್ವಜಾರೋಹಣ ಮಾಡಿಲ್ಲ ಎಂದು ವರದಿಯಾಗಿದೆ. (ಏಜೆನ್ಸೀಸ್)

    ಇಂದು ಶ್ರೀನಗರ ಲಾಲ್​ಚೌಕ್​​ನಲ್ಲಿ ಧ್ವಜಾರೋಹಣ ನಡೆದಿದ್ದು ಸತ್ಯನಾ? ಇಲ್ಲಿದೆ ನೋಡಿ ವಾಸ್ತವ

    ಇಂದು ಶ್ರೀನಗರ ಲಾಲ್​ಚೌಕ್​​ನಲ್ಲಿ ಧ್ವಜಾರೋಹಣ ನಡೆದಿದ್ದು ಸತ್ಯನಾ? ಇಲ್ಲಿದೆ ನೋಡಿ ವಾಸ್ತವ

    ಧ್ವಜಾರೋಹಣದ ವಿಚಾರಕ್ಕೆ ಗಲಾಟೆ; ಬಿಜೆಪಿ ಕಾರ್ಯಕರ್ತನ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts