More

    ಶಿಕ್ಷಕಿಗೆ ಒಳ ಉಡುಪು ಗಿಫ್ಟ್​ ಕೊಟ್ಟು ಸುತ್ತಾಡೋಕೆ ಹೊರ ಕರೆದ ಮನೆ ಮಾಲೀಕ… ಒಲ್ಲೆ ಎಂದಾಕೆಗೆ ಕ್ವಾಟ್ಲೆ ಶುರು…

    ಬೆಂಗಳೂರು: ಇಲ್ಲೊಬ್ಬ ಮನೆ ಮಾಲೀಕ, ಬಾಡಿಗೆಗೆ ಮನೆಯಲ್ಲಿ ವಾಸವಿದ್ದ ಶಿಕ್ಷಕಿಗೆ ಒಳ ಉಡುಪುಗಳನ್ನು ಗಿಫ್ಟ್​ ಕೊಟ್ಟು ಇರಿಸುಮುರಿಸು ಉಂಟು ಮಾಡಿದ್ದಲ್ಲದೇ, ಸುತ್ತಾಡೋಕೆ ಹೊರ ಹೋಗೋಣಾ ಬಾ ಎಂದು ಪೀಡಿಸುತ್ತಾ ಕಿರುಕುಳ ಕೊಟ್ಟಿದ್ದಾನೆ… ಒಲ್ಲೆ ಎಂದಾಕೆಗೆ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾನೆ.. ನೊಂದ ಶಿಕ್ಷಕಿ ಮನೆ ಮಾಲೀಕನ ವಿರುದ್ಧ ಸಿಡಿದೆದ್ದು ದೂರು ದಾಖಲಿಸಿದ್ದಾರೆ.

    ಇಂತಹ ಘಟನೆ ಬೆಂಗಳೂರಿನ ಶ್ರೀನಗರದಲ್ಲಿ ನಡೆದಿದೆ. ಪದ್ಮನಾಭ ಎಂಬುವರ ಮನೆಯಲ್ಲಿ ಶಿಕ್ಷಕಿಯೊಬ್ಬರು ಬಾಡಿಗೆಗೆ ವಾಸವಿದ್ದಾರೆ. ಶಿಕ್ಷಕಿಯ ಹುಟ್ಟು ಹಬ್ಬಕ್ಕೆ ಮನೆ ಮಾಲೀಕ ಒಳ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದನಂತೆ. ಅಷ್ಟೇ ಅಲ್ಲ, ಹೊರಗೆ ಸುತ್ತಾಡೋಕೆ ಹೋಗಿಬರೋಣ ಬಾ ಎಂದೂ ಆಹ್ವಾನಿಸಿದ್ದನಂತೆ. ಪದೇಪದೆ ಫೋನ್​ ಮಾಡಿ ಡಬ್ಬಲ್​ ಮೀನಿಂಗ್​ ಪದಗಳನ್ನೂ ಬಳಸಿ ಮಾತನಾಡಿ ಕ್ವಾಟ್ಲೆ ಕೊಟ್ಟಿದ್ದನಂತೆ. ಮನೆ ಮಾಲೀಕನ ವರ್ತನೆ ವಿರುದ್ಧ ಶಿಕ್ಷಕಿ ಆಕ್ರೋಶ ಹೊರ ಹಾಕಿದ್ದಕ್ಕೆ ಸಿಟ್ಟಾದ ಪದ್ಮನಾಭ ಒಂದು ದಿನ ರಾತ್ರಿ ಮನೆಯ ಡೋರ್​ ಲಾಕ್​ ಮಾಡಿ ಕಿರುಕುಳ ಕೊಟ್ಟಿದ್ದನಂತೆ.

    ಮಾನಸಿಕ ಕಿರುಕುಳ ಕೊಟ್ಟು ಕೂಡಲೇ ಮನೆ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಆರೋಪಿಸಿ ಮನೆ ಮಾಲೀಕನ ವಿರುದ್ಧ ಹನುಮಂತನಗರ ಪೊಲೀಸ್​ ಠಾಣೆಯಲ್ಲಿ ಶಿಕ್ಷಕಿ ದೂರು ದಾಖಲಿಸಿದ್ದಾರೆ.

    ಪಾನಿಪುರಿ ತಿನ್ನಲು ಬಂದರೆಂದು ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ: ಮೈಸೂರಿನ ಅರಸಿನಕೆರೆ ಗ್ರಾಮದಲ್ಲಿ ಬಿಗುವಿನ ವಾತಾವರಣ

    ಮೈಸೂರಲ್ಲಿ ಸಾಲಕ್ಕಾಗಿ ಅಲೆದು ಹೈರಾಣದ ಮಹಿಳೆ: ಬ್ಯಾಂಕ್​ ಬಳಿ ಧರಣಿ ಕೂರುತ್ತಿದ್ದಂತೆ ಸಿನಿಮೀಯ ಶೈಲಿಯಲ್ಲಿ ಒಲಿದ ಜಯ

    ನಾನು 4 ತಿಂಗಳ ಗರ್ಭಿಣಿ.. ಪ್ಲೀಸ್​ ನೀವೆಲ್ಲ ನನಗೊಂದು ಸಹಾಯ​ ಮಾಡಿ… ಮಗಳ ಸಾವಿನ ನೋವಲ್ಲೂ ಅಮೃತಾ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts