More

    ‘ಮದಗಜ’ ಎರಡನೇ ಹಂತದ ಶೂಟಿಂಗ್​ ಮುಕ್ತಾಯ

    ಬೆಂಗಳೂರು: ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್​ ಗೌಡ ನಿರ್ದೇಶನ ಮಾಡುತ್ತಿರುವ ಮದಗಜ ಸಿನಿಮಾ ಇದೀ ಎರಡನೇ ಹಂತದ ಶೂಟಿಂಗ್​ ಮುಗಿಸಿಕೊಂಡ ಖುಷಿಯಲ್ಲಿದೆ. ಮೈಸೂರಿನಲ್ಲಿ ಭರ್ಜರಿ ಸೆಟ್​ಗಳನ್ನು ಹಾಕಿ ಸಾಹಸ ದೃಶ್ಯಗಳು ಮತ್ತು ಮಾತಿನ ಭಾಗದ ಒಂದಷ್ಟು ಚಿತ್ರೀಕರಣವನ್ನೂ ಇದೀಗ ಮುಗಿಸಿಕೊಂಡು ಬೆಂಗಳೂರಿಗೆ ಮರಳಿದೆ.

    ಇದನ್ನೂ ಓದಿ: ಅನ್​ಲಾಕ್​ ಬಳಿಕ ಈಗ ಸಿನಿಮಾಗಳ ಮರುಬಿಡುಗಡೆ ಪರ್ವ!

    ರೋರಿಂಗ್​ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್​ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರ ದಂಡೇ ಇದೆ. ಅದರಲ್ಲೂ ಟಾಲಿವುಡ್​ನ ಖ್ಯಾತ ಖಳ ನಟರೊಬ್ಬರನ್ನು ಕರೆದು ತಂದು ಚಿತ್ರೀಕರಣ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ದಿಶಾ ರೇಪ್​ ಕೇಸ್​ ಕುರಿತು ಚಲನಚಿತ್ರ: ಬಿಡುಗಡೆಗೆ ತಡೆ ಕೋರಿ ದಿಶಾ ತಂದೆ ಕೋರ್ಟ್​ಗೆ

    ಹಾಗಾದರೆ, ಮುಂದಿನ ಶೂಟಿಂಗ್ ಯಾವಾಗ? ಸಿನಿಮಾ ಮುಗೀತಾ? ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಮಹೇಶ್, ‘ಮೈಸೂರಲ್ಲಿ 20 ದಿನದ ಶೂಟಿಂಗ್​ ಮುಗಿಯಿತು. ಈ ಮೂಲಕ ಒಟ್ಟಾರೆ ಶೇ. 70 ಭಾಗದ ಸಿನಿಮಾ ಮುಗಿದಂತಾಗಿದೆ. ಇನ್ನುಳಿದ ಶೇ. 30 ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಮಹಾನವಮಿ ಬಳಿಕ ಶೂಟಿಂಗ್ ಶುರುವಾಗಲಿದೆ.

    ಮತ್ತೆ ಒಂದಾಯ್ತು ‘ಕೃಷ್ಣ ಲೀಲಾ’ ಜೋಡಿ; ಮತ್ತೊಂದು ತೆಲುಗು ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts