More

    ರಾಮ ರಾಜ್ಯವಾಗಿ ಮೆರೆಯಲಿದೆ ಭಾರತ

    ಶಹಾಬಾದ್: ಸಂತರು, ಶರಣರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಕಠಿಣ ಅನುಷ್ಠಾನ ಕೈಗೊಳ್ಳುತ್ತಿದ್ದು, ಭಕ್ತಿಯ ಶಕ್ತಿಯನ್ನು ತೋರಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಗೊಂಡಿದ್ದು, ಭಾರತ ರಾಮ ರಾಜ್ಯವಾಗಿ ಮೆರೆಯಲಿದೆ ಎಂದು ಮುಗುಳನಾಗಾಂವ್ ಮಹಾನಗರ ತಾಂಡಾದ ಶ್ರೀ ಯಲ್ಲಾಲಿಂಗ ಪುಣ್ಯಾಶ್ರಮ ಪೀಠಾಧಿಪತಿ ಶ್ರೀ ಜೇಮಸಿಂಗ ಮಹಾರಾಜ ನುಡಿದರು.

    ಮುಗುಳನಾಗಾಂವ್ ಮಹಾನಗರ ತಾಂಡಾದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಯಲ್ಲಾಲಿಂಗೇಶ್ವರರ ೩೩ನೇ ಜಾತ್ರೋತ್ಸವ ಹಾಗೂ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತರ ಒಳಿತಿಗಾಗಿ ೧ ತಿಂಗಳು ಮೌನಾನುಷ್ಠಾನ ಕೈಗೊಡಿಂದ್ದು, ಭಗವಂತನ ಆಶೀರ್ವಾದದಿಂದ ಯಶಸ್ವಿಯಾಗಿ ಧರ್ಮ ಕಾರ್ಯ ನಡೆದಿದೆ ಎಂದರು.

    ಚಿತ್ತಾಪುರ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಬಂಜಾರ ಸಮಾಜದಲ್ಲಿ ನೆಲೆಯೂರಿದ್ದ ಅಂಧಕಾರ, ಅಜ್ಞಾನವನ್ನು ದೂರ ಮಾಡಲು ಒಬ್ಬ ಗುರುವಿನ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಜೇಮಸಿಂಗ್ ಮಹಾರಾಜರು ಶ್ರೇಷ್ಠ ಕಾರ್ಯ ಮಾಡಿದ್ದಾರೆ. ಸಮಾಜದ ಜನರನ್ನು ಸರಿದಾರಿಗೆ ಕರೆದೊಯ್ಯುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಶ್ರೀ ಬಳಿರಾಮ ಮಹಾರಾಜ, ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ್ ಮಾತನಾಡಿದರು.

    ಬೆಣ್ಣೂರಿನ ಸೈಯದ್ ಯಕ್ಬಾಲ್ ಅಲಿ ಸಾಹೇಬ್, ಮಾತಾ ಲತಾದೇವಿ, ಮಾತಾ ಕಲಾವತಿ, ಮಾತಾ ಶಾಂತಾದೇವಿ, ಅನೀಲ ಸಾಹೇಬ್, ಪ್ರಮುಖರಾದ ಶರಣಗೌಡ ಮಾಲಿಪಾಟೀಲ್, ಡಾ.ಪ್ರೇಮಸಿಂಗ್ ಚವ್ಹಾಣ್, ಅರುಣಾ ತಾಯಿ, ಅಂಜನಾತಾಯಿ, ರಮೇಶ ಕಾರೋಬಾರಿ, ವಿಠ್ಠಲ್ ಜಾಧವ್, ಹರೇರಾಮ, ನೀಲಕಂಠ ಚವ್ಹಾಣ್, ಸಂಜೀವ ರಾಠೋಡ್, ರಾಜು ರಾಠೋಡ್, ಚಂದು ಜಾಧವ್, ಪ್ರಕಾಶ ರಾಠೋಡ್, ಸಿದ್ದೇಶ್ವರ ಶಾಸ್ತ್ರೀ, ಸಂಗಯ್ಯ ಸ್ವಾಮಿ ಇತರರಿದ್ದರು.

    ಜಾತ್ರೋತ್ಸವ ನಿಮಿತ್ತ ಬೆಳಗ್ಗೆ ಶ್ರೀ ಯಲ್ಲಾಲಿಂಗೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ ಶ್ರೀ ಜೇಮಸಿಂಗ್ ಮಹಾರಾಜರು ಅಗ್ಗಿ ತುಳಿದರು. ಮಲ್ಲಿಕಾಜುರ್ನ ಶಾಸ್ತ್ರೀ ಐನಾಪುರ ನಿರೂಪಣೆ ಮಾಡಿದರು. ನಾಮದೇವ ರಾಠೋಡ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts