More

    ದಾರ್ಶನಿಕತೆಯ ಮೌಲ್ಯವೇ ಶ್ರೀರಾಮಚಂದ್ರ

    ಬಸವಕಲ್ಯಾಣ: ಆದರ್ಶಗಳನ್ನು ಜೀವನ್ಮುಖಿಗೊಳಿಸಿ ಸುಖಿ ರಾಜ್ಯದ ವಾಸ್ತವ ರೂಪವಾಗಿ ಸಹಸ್ರ ಸಹಸ್ರ ವರ್ಷಗಳಿಂದ ಮಾನವ ಕಲ್ಯಾಣಕ್ಕಾಗಿ ದಿಗ್ದರ್ಶನ ನೀಡುತ್ತಿರುವ ದಾರ್ಶನಿಕತೆಯ ಒಟ್ಟು ಮೌಲ್ಯವೇ ಶ್ರೀ ರಾಮಚಂದ್ರ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಬಣ್ಣಿಸಿದರು.

    ರಾಮನವಮಿ ನಿಮಿತ್ತ ಹಾರಕೂಡದಲ್ಲಿ ಬುಧವಾರ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿದ ಅವರು, ತತ್ವಾದರ್ಶ, ಮಾನವೀಯ ಮೌಲ್ಯ, ಜನಪರ ಚಿಂತನೆ ಮತ್ತು ಅನುಪಾಲನೆ ನಮ್ಮ ಬದುಕಿನ ಭಾಗವಾದಾಗಲೇ ರಾಮನ ನಿಜವಾದ ಪೂಜೆ ಎನಿಸುತ್ತದೆ. ಒಂದು ಧರ್ಮ, ದೇಶ, ಕಾಲ ಎಲ್ಲವನ್ನು ಮೀರಿದ ನಿಸ್ಸೀಮ ವ್ಯಕ್ತಿತ್ವಧಾರಿಯಾಗಿ, ಪ್ರಜಾ ಪಾಲಕನಾಗಿ ಶ್ರೇಷ್ಠತೆ ಮೆರೆಯುವ ಚೈತನ್ಯಶೀಲ ಶಕ್ತಿಯೇ ರಾಮ ಎಂದರು.

    ಪ್ರಮುಖರಾದ ಓಂಕಾರ ದರ್ಜಿ, ವಿಠ್ಠಲರಾವ ಸಾಮದೆ, ಶಿವಶರಣಪ್ಪ ಚೌಧರಿ, ನಾಗಣ್ಣ ಪೂಜಾರಿ, ಬಸವರಾಜ ಚವ್ಹಾಣ್ ಇತರರಿದ್ದರು. ಮಲ್ಲಪ್ಪ ಖೇಲ್ಡೆ ವಂದಿಸಿದರು. ವಿಠ್ಠಲ್ ಹೂಗಾರ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts