More

    VIDEO| ರಾಯರ ಮಠದಲ್ಲಿ ಊಟಕ್ಕೆ ಕುಳಿತ್ತಿದ್ದ ಬಾಲಕ ಅಚ್ಚರಿಯ ಬೇಡಿಕೆ ಇಟ್ಟ! ತುಸು ನಕ್ಕ ಮಂತ್ರಾಲಯ ಶ್ರೀಗಳು ಮಾಡಿದ್ದೇನು?

    ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಊಟಕ್ಕೆ ಕುಳಿತ್ತಿದ್ದ ಪುಟ್ಟ ಬಾಲಕನೊಬ್ಬ ‘ನಂಗೆ ತಿನ್ನೋಕೆ ಪಾನಿಪುರಿ ಬೇಕು’ ಎಂದು ನೇರವಾಗಿಯೇ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಕೇಳಿದ್ದಾನೆ!

    ಹೌದು, ಇಂತಹದ್ದೊಂದು ಘಟನೆ ಐದು ದಿನಗಳ ಹಿಂದಷ್ಟೆ ಸಂಭವಿಸಿದೆ. ಅಂದಹಾಗೇ ಆ ಬಾಲಕ ಮಂತ್ರಾಲಯದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿ. ಇಲ್ಲಿ ಪ್ರಸ್ತುತ 100 ವಿದ್ಯಾರ್ಥಿಗಳಿದ್ದಾರೆ. ಈ ಮಕ್ಕಳೆಲ್ಲರೂ ಭೋಜನಕ್ಕೆ ಕುಳಿತಿದ್ದರು. ಈ ವೇಳೆ ಶ್ರೀ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿರುವಾಗ ಬಾಲಕನೊಬ್ಬ ಪಾನಿಪುರಿ ತಿನ್ನುವ ಆಸೆಯಾಗಿದೆ ಎಂದ. ಇದನ್ನೂ ಓದಿರಿ VIDEO| ಕಾರ್ಗಿಲ್​ ಯುದ್ಧ ಭೂಮಿಯ ಮಣ್ಣು ಕರ್ನಾಟಕಕ್ಕೆ!

    ‘ನಂಗೆ ತಿನ್ನೋಕೆ ಪಾನಿಪುರಿ ಬೇಕು’ ಎಂದು ಬಾಲಕ ಹೇಳುತ್ತಿದ್ದಂತೆ ಶ್ರೀಗಳು ಸ್ಥಳದಲ್ಲೇ ಅಡುಗೆಯವರನ್ನು ಕರೆಸಿ ವಿದ್ಯಾರ್ಥಿಗಳಿಗೆ ಪಾನಿಪುರಿ ವ್ಯವಸ್ಥೆ ಮಾಡಲು ಸೂಚಿಸಿದರು. ಅದರಂತೆ ಶುಕ್ರವಾರ ವಿದ್ಯಾಪೀಠದಲ್ಲಿನ ಎಲ್ಲ ವಿದ್ಯಾರ್ಥಿಗಳಿಗೂ ಪಾನಿಪುರಿ ತಯಾರಿಸಿ ಕೊಡಲಾಯಿತು. ಮಕ್ಕಳು ಖುಷಿಯಿಂದಲೇ ಪಾನಿಪುರಿ ಸವಿದರು.

    ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ (ಆಡಳಿತ) ಕೆ.ರಮಣರಾವ್, ‘ಶ್ರೀ ಸುಬುಧೇಂದ್ರ ತೀರ್ಥರು ವಿದ್ಯಾಪೀಠದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸುವ ಜತೆಗೆ ಅವರ ಬೇಕು-ಬೇಡಗಳನ್ನು ಅರಿತು ಅಗತ್ಯ ಸೌಲಭ್ಯ ಕಲ್ಪಿಸುತ್ತಾರೆ. ಬಾಲಕನೊಬ್ಬ ಪಾನಿಪುರಿ ತಿನ್ನುವ ಕೋರಿಕೆ ವ್ಯಕ್ತಪಡಿಸಿದ್ದರಿಂದ ಶುಕ್ರವಾರ ಎಲ್ಲ ವಿದ್ಯಾರ್ಥಿಗಳಿಗೆ ಪಾನಿಪುರಿ ವ್ಯವಸ್ಥೆ ಮಾಡಲಾಗಿತ್ತು’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts