More

    ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ; ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ

    ಕಾನಹೊಸಹಳ್ಳಿ: ಪುರಾಣ, ಪ್ರವಚನಗಳನ್ನು ಆಲಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ ತಿಳಿಸಿದರು.


    ಸಮೀಪದ ರಂಗನಾಥನಹಳ್ಳಿಯಲ್ಲಿ ಶನಿವಾರ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ಪಠಣ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.


    ಆಧುನಿಕತೆಯ ಭರಾಟೆಯಲ್ಲಿ ಪುರಾಣ ಮತ್ತು ಪ್ರವಚನಗಳನ್ನು ಆಲಿಸುವುದು ಪ್ರಸ್ತುತವಾಗಿದೆ. ಧರ್ಮ, ಸಂಸ್ಕೃತಿ, ಮಹಾತ್ಮರ, ಶರಣರ ತತ್ವ ಸಿದ್ಧಾಂತಗಳನ್ನು ಅರಿತುಕೊಂಡು, ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿ ಹೊಂದಲು ಸಾಧ್ಯ ಎಂದರು.
    ಮಹಾಶಿವರಾತ್ರಿ ಅಂಗವಾಗಿ ಕಳೆದ 15 ದಿನಗಳಿಂದ ಪುರಾಣ ಪ್ರವಚನ ಕಾರ್ಯಕ್ರಮವನ್ನು ಕಾನಹೊಸಹಳ್ಳಿಯ ಗುರುಮೂರ್ತಿ, ಅಗ್ರಹಾರದ ಸೋಮಶೇಖರಯ್ಯ ಶಾಸ್ತ್ರಿ ಅವರು ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts