More

    VIDEO | ಶ್ರೀಲಂಕಾ ಬ್ಯಾಟ್ಸ್‌ಮನ್ ವಿರುದ್ಧ ನೀಡಿದ ಔಟ್ ತೀರ್ಪಿನ ಬಗ್ಗೆ ಬಿಸಿಬಿಸಿ ಚರ್ಚೆ!

    ಆಂಟಿಗಾ: ವಿಕೆಟ್ ಕೀಪರ್-ಆರಂಭಿಕ ಶೈ ಹೋಪ್ (110 ರನ್, 133 ಎಸೆತ, 12 ಬೌಂಡರಿ, 1 ಸಿಕ್ಸರ್) ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಕೈರಾನ್ ಪೊಲ್ಲಾರ್ಡ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನೂ ಸಾಧಿಸಿತು. ಆದರೆ ಪಂದ್ಯದ ಬಳಿಕ ಇದಕ್ಕಿಂತ ಹೆಚ್ಚಾಗಿ ಶ್ರೀಲಂಕಾ ಆರಂಭಿಕ ಧನುಷ್ಕ ಗುಣತಿಲಕ ವಿರುದ್ಧ ಅಂಪೈರ್ ನೀಡಿದ ‘ಔಟ್’ ತೀರ್ಪಿನ ಬಗ್ಗೆಯೇ ಕ್ರಿಕೆಟ್ ಜಗತ್ತಿನಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ.

    55 ರನ್ ಗಳಿಸಿ ಆಡುತ್ತಿದ್ದ ಧನುಷ್ಕ ಗುಣತಿಲಕ ಪಂದ್ಯದ 21ನೇ ಓವರ್ ವೇಳೆ ಫೀಲ್ಡಿಂಗ್‌ಗೆ ಅಡಚಣೆ ಮಾಡಿದ ದೂರಿನ ಮೇರೆಗೆ ಔಟಾದರು. ಬೌಲರ್ ಕೈರಾನ್ ಪೊಲ್ಲಾರ್ಡ್ ಸ್ಟ್ರೈಕರ್ ಎಂಡ್‌ಗೆ ಬಂದು ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಲು ಯತ್ನಿಸಿದಾಗ ಗುಣತಿಲಕ ಉದ್ದೇಶಪೂರ್ವಕವಾಗಿ ಇದಕ್ಕೆ ಅಡ್ಡಿಪಡಿಸಿದರು ಎಂಬ ತೀರ್ಪಿನ ಮೇರೆಗೆ ಅವರ ವಿರುದ್ಧ ಅಂಪೈರ್ ಔಟ್ ತೀರ್ಪು ನೀಡಿದ್ದರು.

    ಇದನ್ನೂ ಓದಿ: ಪೃಥ್ವಿ ಷಾ ಭರ್ಜರಿ ಶತಕ, ಸೆಮೀಸ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕಕ್ಕೆ ನಿರಾಸೆ

    ಗುಣತಿಲಕ ಕ್ರೀಸ್‌ಗೆ ಮರಳಲು ಯತ್ನಿಸುತ್ತಿದ್ದ ಸಮಯದಲ್ಲಿ ಚೆಂಡು ಅವರ ಕಾಲಿಗೆ ತಾಗಿ ಹಿಂದಕ್ಕೆ ಹೋಗಿತ್ತು. ಇದರಿಂದಾಗಿ ಪೊಲ್ಲಾರ್ಡ್ ಫೀಲ್ಡಿಂಗ್‌ಗೆ ಅಡಚಣೆ ತಂದ ಬಗ್ಗೆ ಅಂಪೈರ್‌ಗೆ ದೂರಿದ್ದರು. ಆಗ ಮೈದಾನದ ಅಂಪೈರ್ ತೃತೀಯ ಅಂಪೈರ್ ಮೊರೆ ಹೋದರು. ಕೊನೆಗೆ ತೃತೀಯ ಅಂಪೈರ್ ಪರಿಶೀಲನೆಯ ಬಳಿಕ ಅವರ ಸಲಹೆಯ ಮೇರೆಗೆ ಮೈದಾನದ ಅಂಪೈರ್ ‘ಔಟ್’ ತೀರ್ಪು ನೀಡಿದ್ದರು.

    ಆದರೆ ಈ ತೀರ್ಪಿನ ಬಳಿಕ ಘಟನೆಯ ಮರುಪ್ರಸಾರವನ್ನು ವೀಕ್ಷಿಸಿದ ಹೆಚ್ಚಿನವರು ಗುಣತಿಲಕ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್‌ಗೆ ಅಡಚಣೆ ತಂದಿಲ್ಲ ಎಂದೇ ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಅಂಪೈರ್ ತೀರ್ಪಿನ ಬಗ್ಗೆ ವಿವಾದ ಎದ್ದಿದೆ. ಹಲವು ಮಾಜಿ ಆಟಗಾರರು ಗುಣತಿಲಕ ಪರವಾಗಿ ಮಾತನಾಡಿದ್ದು, ಅಂಪೈರ್ ತೀರ್ಪು ಸರಿಯಾದುದಲ್ಲ ಎಂದಿದ್ದಾರೆ. ಇನ್ನು ಕೆಲವರು ಗುಣತಿಲಕ ಉದ್ದೇಶಪೂರ್ವಕವಾಗಿ ಅಡಚಣೆ ತಂದಿರದಿದ್ದರೂ, ಕ್ರಿಕೆಟ್ ನಿಯಮದ ಪ್ರಕಾರ ಅಂಪೈರ್ ನೀಡಿರುವ ತೀರ್ಪು ಸರಿಯಾಗಿಯೇ ಇದೆ ಎಂದಿದ್ದಾರೆ.

    ಈ ನಡುವೆ ಪೊಲ್ಲಾರ್ಡ್ ಪಂದ್ಯದ ಬಳಿಕ ಗುಣತಿಲಕ ಬಳಿ ಕ್ಷಮೆಯಾಚಿಸಿದ್ದಾರೆ. ‘ಪಂದ್ಯದ ವೇಳೆ ಸರಿಯಾಗಿ ಗಮನಿಸಿರಲಿಲ್ಲ. ಆದರೆ ವಿಡಿಯೋ ನೋಡಿದ ಬಳಿಕ ಉದ್ದೇಶಪೂರ್ವಕವಾಗಿ ಚೆಂಡನ್ನು ಸರಿಸಿಲ್ಲ ಎಂಬುದು ಸ್ಪಷ್ಟವಾಯಿತು ಎಂಬುದಾಗಿ ಪೊಲ್ಲಾರ್ಡ್ ತಿಳಿಸಿದರು ಎಂದು ಗುಣತಿಲಕ ಪಂದ್ಯದ ಬಳಿಕ ಹೇಳಿದ್ದಾರೆ.
    VIDEO | ಶ್ರೀಲಂಕಾ ಬ್ಯಾಟ್ಸ್‌ಮನ್ ವಿರುದ್ಧ ನೀಡಿದ ಔಟ್ ತೀರ್ಪಿನ ಬಗ್ಗೆ ಬಿಸಿಬಿಸಿ ಚರ್ಚೆ!

    VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

    ಐಪಿಎಲ್‌ಗೂ ಕರೊನಾ ಹೊಡೆತ, ಬ್ರಾಂಡ್ ಮೌಲ್ಯ ಶೇ. 3.6 ಕುಸಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts