More

    ವಿಜೃಂಭಣೆಯ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ

    ಕಳಸ: ಪುರಾಣ ಪ್ರಸಿದ್ಧ ಬಾಳೆಹೊಳೆ ಶ್ರೀ ಚನ್ನಕೇಶವ ದೇವಾಲಯದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
    ಭಾನುವಾರ ಶ್ರೀಗಣಪತಿ ಹೋಮ, ಧ್ವಜಾರೋಹಣ ಮತ್ತು ದಿಂಡಿ ಉತ್ಸವದೊಂದಿಗೆ ಜಾತ್ರೆ ಆರಂಭಗೊಂಡಿತು. ಸೋಮವಾರ ಮಧ್ಯಾಹ್ನ ಶ್ರೀ ದೇವರ ಸುತ್ತು ಸೇವೆ ಮಂಗಳಾರತಿ ನಂತರ ಚನ್ನಕೇಶವ ದೇವರ ವಿಗ್ರಹವನ್ನು ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಿ ಶ್ರೀಮನ್ಮಹಾರತಾರೋಹಣ ನಡೆಸಲಾಯಿತು. ಭಕ್ತಾದಿಗಳು ತಮ್ಮ ಹರಕೆಯಂತೆ ತಾವು ಬೆಳೆದ ಕಾಳು ಮೆಣಸು, ಏಲಕ್ಕಿ, ಅಡಕೆ, ಕಾಫಿಬೀಜ ಇತ್ಯಾದಿ ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾದರು. ರಾತ್ರಿ ಭಕ್ತರ ಜಯ ಘೋಷಗಳೊಂದಿಗೆ ಶ್ರೀಮನ್ಮಹಾರಥೋತ್ಸವ ನಡೆಯಿತು. ದೇವಾಲಯವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಜಾತ್ರೆ ಪ್ರಯಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆದವು.
    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಬಾಳೆಹೊಳೆಯ ಶ್ರೀ ಚನ್ನಕೇಶವ ಭಕ್ತವೃಂದ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 7ಗಂಟೆಗೆ ಹೊಳ್ಳಾಸ್‌ಶ್ರೀ ಚನ್ನಕೇಶವ ಯಕ್ಷಗಾನ ಕಲಾ ಪ್ರತಿಷ್ಠಾನ ಗೊರಸುಕುಡಿಗೆ ಇವರಿಂದ ಭೀಷ್ಮ ಪ್ರತಿಜ್ಞೆ ಯಕ್ಷಗಾನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts