More

    ಗಮನ ಸೆಳೆದ ರೀಟೇಲ್ ಎಕ್ಸ್‌ಪೋ 2024

    ಮೈಸೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ಪ್ರಾದೇಶಿಕ ಕಚೇರಿಯಿಂದ ಇತ್ತೀಚೆಗೆ ಮಾಲ್ ಆಫ್ ಮೈಸೂರಿನಲ್ಲಿ ರೀಟೇಲ್ ಎಕ್ಸ್‌ಪೋ 2024 ಆಯೋಜಿಸಿತ್ತು.
    ರಿಟೇಲ್ ಎಕ್ಸ್‌ಪೋವನ್ನು ಮೈಸೂರು ಪ್ರಾದೇಶಿಕ ಮುಖ್ಯಸ್ಥ ಸುನೀಲ್ ವಿ. ಪಾಟೀಲ್ ಹಾಗೂ ಮಾಲ್ ಆಫ್ ಮೈಸೂರಿನ ಪ್ರಧಾನ ವ್ಯವಸ್ಥಾಪಕ ಸಂದೀಪ್‌ಕುಮಾರ್ ಉದ್ಘಾಟಿಸಿದರು.
    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ವಿವಿಧ ಚಿಲ್ಲರೆ ಉತ್ಪನ್ನಗಳಿಗೆ ವಿಶೇಷವಾಗಿ ವಸತಿ ಸಾಲ, ಶಿಕ್ಷಣ ಸಾಲಗಳು, ವಾಹನಗಳ ಸಾಲಗಳು, ವೈಯಕ್ತಿಕ ಸಾಲಗಳು, ಡಿಜಿಟಲ್ ಉತ್ಪನ್ನಗಳು ಇತ್ಯಾದಿಗಳಿಗೆ ಒತ್ತು ನೀಡಿದೆ. ದೇಶ ಮತ್ತು ವಿದೇಶಗಳಲ್ಲಿ ಅಧ್ಯಯನಕ್ಕಾಗಿ ಯಾವುದೇ ಆಧಾರವಿಲ್ಲದೆ 40 ಲಕ್ಷ ರೂ. ವರೆಗೆ ಶಿಕ್ಷಣ ಸಾಲಗಳನ್ನು ಬ್ಯಾಂಕ್ ನೀಡುತ್ತದೆ ಎಂದು ಸುನೀಲ್ ವಿ.ಪಾಟೀಲ್ ತಿಳಿಸಿದರು.
    ಒಂದೇ ದಿನದಲ್ಲಿ ವಾಹನ ಸಾಲ ಮಂಜೂರಾತಿ ಮತ್ತು ವೇತನ ಪಡೆಯುವ ಉದ್ಯೋಗಿಗಳಿಗೆ ವಯಕ್ತಿಕ ಸಾಲ ಸೌಲಭ್ಯ. 1000 ಕ್ಕೂ ಹೆಚ್ಚು ಗ್ರಾಹಕರು ಈವೆಂಟ್‌ನಲ್ಲಿ ಪಾಲ್ಗೊಂಡಿದ್ದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ತಮ್ಮ ಹೊಸ ಅನುಭವವನ್ನು ಸಂಭ್ರಮಿಸಿದರು.
    ಇದೇ ಸಂದರ್ಭದಲ್ಲಿ ಅರ್ಹ ಗ್ರಾಹಕರಿಗೆ ಪ್ರಿನ್ಸಿಪಲ್ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಬ್ಯಾಂಕ್ ಸಿಬ್ಬಂದಿ ವಿವಿಧ ಡಿಜಿಟಲ್ ಚಾಲಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts