More

    ದೆವ್ವದಾಟಕ್ಕೆ ಹೆದರಿದ ‘ದಿಯಾ’ ಖುಷಿ; ಕಾಲೇಜ್​ನಲ್ಲೊಂದು ಹಾರರ್​ ಸ್ಟೋರಿ

    ಬೆಂಗಳೂರು: ‘ದಿಯಾ’ ನಂತರ ಆ ಚಿತ್ರದ ನಾಯಕಿ ಖುಷಿ, ‘ಸ್ಪೂಕಿ ಕಾಲೇಜ್​’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸುದ್ದಿಯಾಗಿತ್ತು. ಈಗ ಆ ಚಿತ್ರ ಸದ್ದಿಲ್ಲದ್ದೆ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ನಾಗಚೈತನ್ಯ-ನಟಿ ಶೋಭಿತಾ ಡೇಟಿಂಗ್ ವಿಷಯದಲ್ಲಿ ಕೆಲ ನೆಟ್ಟಿಗರಿಗೆ ಉಗಿದು ಬುದ್ಧಿ ಹೇಳಿದ ಸಮಂತಾ!

    ಭರತ್ ಜಿ ನಿರ್ದೇಶಿಸಿರುವ ‘ಸ್ಪೂಕಿ ಕಾಲೇಜ್’ ಚಿತ್ರದ ಟೀಸರ್ ಯೂಟ್ಯೂಬ್​ನ ಶ್ರೀದೇವಿ ಮ್ಯೂಸಿಕ್ ಚಾಲನ್​ಲ್ಲಿ ಬಿಡುಗಡೆಯಾಗಿದೆ. ಬಿ.ಜಿ.ಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ|| ಪ್ರಕಾಶನಾಥಸ್ವಾಮೀಜಿ ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ. ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಗ್ಗೆ ಟ್ವಿಟ್ ಮಾಡಿ ಶುಭ ಕೋರಿದ್ದಾರೆ.

    ಇದುವರೆಗೂ ಹಲವು ಹಾರರ್​ ಚಿತ್ರಗಳು ಬಿಡುಗಡೆಯಾಗಿವೆ. ಅವೆಲ್ಲವ ಒಂಟಿ ಮನೆಯಲ್ಲಿ ನಡೆಯುವಂತಹ ಕಥೆಗಳಾಗಿದ್ದವು. ಆದರೆ, ಇದೇ ಮೊದಲ ಬಾರಿಗೆ ಕಾಲೇಜ್​ನಲ್ಲಿ ದೆವ್ವ ಇದ್ದರೆ ಏನಾಗಿದೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ. ಧಾರಾವಾಡದ ನೂರಕ್ಕೂ ಹೆಚ್ಚಿನ ವರ್ಷ ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ‌ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ‘ಸ್ಪೂಕಿ ಕಾಲೇಜ್’ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಅಣ್ಣ ನನ್ನ ಜತೆಲೇ ಇದ್ದಾನೆ; ದಶಕದ ಸಂಭ್ರಮದಲ್ಲಿ ಧ್ರುವ..

    ಈ ಹಿಂದೆ ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ನಿರ್ದೇಶಕ ಭರತ್​ ಅವರೇ ವಹಿಸಿಕೊಂಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.

    ಖುಷಿಗೆ ನಾಯಕನಾಗಿ ವಿವೇಕ್​ ಸಿಂಹ ನಟಿಸಿದ್ದು, ಮಿಕ್ಕಂತೆ ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

    ಸುಚೇಂದ್ರ ಪ್ರಸಾದ್​ ಜತೆಗೆ ಬಿರುಕು, ಮತ್ತೊಂದು ಮದುವೆಯಾಗಿದ್ದಾರಾ ಪವಿತ್ರಾ ಲೋಕೇಶ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts