More

    ಭಾರತ-ವಿಂಡೀಸ್​ ಸರಣಿಗೆ ಹೊಸ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ ಇಶಾಂತ್​ ಶರ್ಮ

    ನವದೆಹಲಿ: ಭಾರತ ತಂಡದ ವೇಗಿ ಇಶಾಂತ್​ ಶರ್ಮ ಸಕ್ರಿಯ ಕ್ರಿಕೆಟಿಗರಾಗಿರುವ ನಡುವೆ, ಮುಂಬರುವ ಭಾರತ-ವೆಸ್ಟ್​ ಇಂಡೀಸ್​ ನಡುವಿನ ಟೆಸ್ಟ್​ ಸರಣಿಯ ವೇಳೆ ವೀಕ್ಷಕ ವಿವರಣೆಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

    ಹಿಂದೆಲ್ಲ ಕ್ರಿಕೆಟಿಗರು ನಿವೃತ್ತಿಯ ನಂತರ ಕಾಮೆಂಟರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ರಾಬಿನ್​ ಉತ್ತಪ್ಪ, ದಿನೇಶ್​ ಕಾರ್ತಿಕ್​ರಂಥ ಕೆಲ ಆಟಗಾರರು ನಿವೃತ್ತಿಗೆ ಮುನ್ನವೇ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ 34 ವರ್ಷದ ಇಶಾಂತ್​ ಕೂಡ ಇದೇ ಸಾಲಿಗೆ ಸೇರುತ್ತಿದ್ದಾರೆ.

    2007ರಿಂದ ಭಾರತ ತಂಡದ ಪರ 105 ಟೆಸ್ಟ್​, 80 ಏಕದಿನ ಮತ್ತು 14 ಟಿ20 ಪಂದ್ಯ ಆಡಿರುವ ಇಶಾಂತ್​ ಒಟ್ಟು 400ಕ್ಕೂ ಅಧಿಕ ವಿಕೆಟ್​ ಕಬಳಿಸಿದ್ದಾರೆ. ಆದರೆ 2021ರ ನವೆಂಬರ್​ ಬಳಿಕ ಅವರು ಭಾರತ ತಂಡದ ಪರ ಯಾವುದೇ ಪಂದ್ಯವಾಡಿಲ್ಲ. ಈ ನಡುವೆ ದೇಶೀಯ ಕ್ರಿಕೆಟ್​ ಮತ್ತು ಐಪಿಎಲ್​ನಲ್ಲಿ ಆಡುತ್ತಿದ್ದಾರೆ.

    ಭಾರತ-ವಿಂಡೀಸ್​ ಕ್ರಿಕೆಟ್​ ಸರಣಿಯನ್ನು ಯಾವ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು ಗೊತ್ತೇ?

    ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ವಿಂಡೀಸ್​ ತಂಡದಲ್ಲಿ ಚಂದ್ರಪಾಲ್​ ಪುತ್ರ, ದೈತ್ಯದೇಹಿ ಸ್ಪಿನ್ನರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts