More

    ಸ್ಫೋಟಕಗಳ ಜತೆ ಹುಡುಗಾಟ; ಎಚ್ಚೆತ್ತುಕೊಳ್ಳದ ಸರ್ಕಾರ, ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರದಲ್ಲೂ ದುರಂತ..

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಶಿವಮೊಗ್ಗ ಜಿಲ್ಲೆಯ ಹುಣಸೋಡುವಿನಲ್ಲಿ ಎಂಟು ಕಾರ್ವಿುಕರನ್ನು ಜೀವಂತವಾಗಿ ದಹಿಸಿದ ಜಿಲೆಟಿನ್ ಸ್ಫೋಟ ದುರಂತಕ್ಕೆ ಸರಿಯಾಗಿ ಒಂದೇ ತಿಂಗಳಿಗೆ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಆರು ಕಾರ್ವಿುಕರನ್ನು ಬಲಿಪಡೆದ ಈ ದುರ್ಘಟನೆ ರಾಜ್ಯದಲ್ಲಿ ಬೇರೂರಿರುವ ಜಿಲೆಟಿನ್ ದಂಧೆಯ ಕರಾಳ ನಂಟನ್ನು ತೆರೆದಿಟ್ಟಿದೆ. ಹೊರರಾಜ್ಯಗಳಿಂದ ಟನ್​ಗಟ್ಟಲೆ ಸ್ಪೋಟಕ ವಸ್ತುಗಳು ರಾಜಾರೋಷವಾಗಿ ರಾಜ್ಯ ಪ್ರವೇಶಿಸುತ್ತಿರುವ ಆಘಾತಕಾರಿ ಸಂಗತಿ ಬಯಲಾಗಿದೆ.

    ವಿಪರ್ಯಾಸ ಎಂದರೆ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೃಪಾಕಟಾಕ್ಷದಲ್ಲೇ ರಾಜ್ಯದಲ್ಲಿ ನೂರಾರು ಕಲ್ಲುಕ್ವಾರಿಗಳು ನಡೆಯುತ್ತಿವೆ. ಇವುಗಳಿಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾದಿಂದ ಟನ್​ಗಟ್ಟಲೆ ಜಿಲೆಟಿನ್, ಅಮೋನಿಯಂ ನೈಟ್ರೇಟ್ ಸೇರಿ ಇನ್ನಿತರ ಸ್ಪೋಟಕ ವಸ್ತುಗಳು ಅಕ್ರಮವಾಗಿ ಪೂರೈಕೆಯಾಗುತ್ತಿವೆ. ಜಿಲೆಟಿನ್ ದಂಧೆ ತಡೆಯುವ ಜವಾಬ್ದಾರಿಯನ್ನು ನಿರ್ದಿಷ್ಟ ಇಲಾಖೆಗೆ ವಹಿಸದಿರುವುದು, ಯಾವ ಅಧಿಕಾರಿಯನ್ನೂ ನೇಮಕ ಮಾಡದಿರುವುದು ಅಕ್ರಮ ದಂಧೆಗೆ ನೀರೆರೆದಂತಾಗಿದೆ.

    ಸ್ಫೋಟಕಗಳ ಜತೆ ಹುಡುಗಾಟ; ಎಚ್ಚೆತ್ತುಕೊಳ್ಳದ ಸರ್ಕಾರ, ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರದಲ್ಲೂ ದುರಂತ..ಬಿಗಿ ನಿಯಮಾವಳಿ ರೂಪಿಸದ ಕಾರಣ ಸ್ಪೋಟಕಗಳ ತಯಾರಿಕೆ ಮತ್ತು ಮಾರಾಟ ಈಗ ದಂಧೆಯಾಗಿ ಪರಿವರ್ತನೆಯಾಗಿದೆ. ಪೆಟ್ರೋಲಿಯಂ ಮತ್ತು ಸ್ಪೋಟಕಗಳ ಸುರಕ್ಷತಾ ಸಂಸ್ಥೆಯಿಂದ ಅನುಮತಿ ಪಡೆದ ವ್ಯಕ್ತಿಗಳು ಮಾತ್ರವೇ ಸ್ಪೋಟಕ ವಸ್ತುಗಳ ತಯಾರಿಕೆ ಮತ್ತು ಮಾರಾಟ ಮಾಡಬೇಕು. ಆದರೆ, ಬಹುತೇಕರು ಪರವಾನಗಿ ಇಲ್ಲದಿದ್ದರೂ ತಯಾರಿಕಾ ಘಟಕ ಅಥವಾ ಲೈಸೆನ್ಸ್​ದಾರರ ಬಳಿ ಸ್ಪೋಟಕಗಳನ್ನು ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಸ್ಪೋಟಕ ಬಳಕೆದಾರರು ಮಾರ್ಗಸೂಚಿ ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡುವ ಗೋಜಿಗೂ ಸರ್ಕಾರ ಹೋಗುತ್ತಿಲ್ಲ. ಒಟ್ಟಾರೆ ಸ್ಪೋಟಕಗಳ ಅಕ್ರಮ ವ್ಯವಹಾರಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.

    3 ವರ್ಷ, 3 ಜನರಿಗೆ ಶಿಕ್ಷೆ: ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ ಸ್ಪೋಟಕ ವಸ್ತು ಕಾಯ್ದೆ-1908 ಮತ್ತು ಸ್ಪೋಟಕ ಕಾಯ್ದೆ-1884 ಅಡಿ ದಾಖಲಾದ ಪ್ರಕರಣಗಳಲ್ಲಿ ಮೂವರಿಗಷ್ಟೇ ಶಿಕ್ಷೆಯಾಗಿದೆ. ಬಹುತೇಕ ಕೇಸುಗಳು ಪೊಲೀಸ್ ತನಿಖೆ ಹಂತ ಮತ್ತು ಕೋರ್ಟ್ ವಿಚಾರಣೆಯಲ್ಲಿ ನಡೆಯುತ್ತಿದೆ. 2020ರಲ್ಲೇ 103 ಪ್ರಕರಣ ದಾಖಲಾಗಿವೆ. ಆದರೆ, ಇದರಲ್ಲಿ 7 ಕೇಸ್ ಕೋರ್ಟ್ ವಿಚಾರಣೆಯಲ್ಲಿದ್ದರೆ ಉಳಿದ 95 ಪ್ರಕರಣ ತನಿಖಾ ಹಂತದಲ್ಲಿವೆ.

    ಸ್ಫೋಟಕಗಳ ಜತೆ ಹುಡುಗಾಟ; ಎಚ್ಚೆತ್ತುಕೊಳ್ಳದ ಸರ್ಕಾರ, ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರದಲ್ಲೂ ದುರಂತ..

    ಪರಿಹಾರದ ಬಳಿಕ ನಾಟ್ ರೀಚಬಲ್: ಸ್ಪೋಟದ ಸಂತ್ರಸ್ತರು ಪರಿಹಾರ ಸಿಗುವವರೆಗಷ್ಟೇ ತನಿಖೆಗೆ ಸಹಕರಿಸುತ್ತಾರೆ. ನಂತರ ಅವರು ಸಂಪರ್ಕಕ್ಕೇ ಸಿಗುವುದಿಲ್ಲ. ಸಾಕ್ಷ್ಯ ಸಂಗ್ರಹದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಾರೆ. ಜಿಲೆಟಿನ್, ಸ್ಪೋಟಕ ವಸ್ತುಗಳನ್ನು ಎಲ್ಲಿಂದ ಖರೀದಿ ಮಾಡಿದ್ದಾರೆ ಎಂಬ ಜಾಡು ಪತ್ತೆ ಹಚ್ಚುವುದಿಲ್ಲ. ಲೈಸೆನ್ಸ್​ದಾರ ಸಹ ಕಂಪನಿಯಿಂದ ಎಷ್ಟು ಖರೀದಿ ಮಾಡಿದ್ದಾನೆ. ಯಾರಿಗೆ ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಸಂಗ್ರಹಿಸುವುದಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಹುತೇಕ ಪ್ರಕರಣಗಳು ತನಿಖೆ ಹಂತದಲ್ಲಿಯೇ ದಾರಿ ತಪು್ಪತ್ತವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪರ್ವಿುಟ್ ಇದೆಯೇ?: ಕೇಂದ್ರದ ‘ಪೆಟ್ರೋಲಿಯಂ ಮತ್ತು ಸ್ಪೋಟಕಗಳ ಸುರಕ್ಷತಾ ಸಂಸ್ಥೆ’(ಪಿಇಎಸ್​ಒ)ಯಿಂದ ಸ್ಪೋಟಕಗಳ ತಯಾರಿಕೆ ಮತ್ತು ಮಾರಾಟಕ್ಕೆ ಪರವಾನಗಿ ಪಡೆಯಬೇಕು. ಮಂಗಳೂರಿನಲ್ಲಿ ಪಿಇಎಸ್​ಒ ಪ್ರಾದೇಶಿಕ ಕಚೇರಿ ಇದೆ. ಜಿಲೆಟಿನ್, ಅಮೋನಿಯಂ ನೈಟ್ರೇಟ್ ಇನ್ನಿತರ ಸ್ಪೋಟಕ ವಸ್ತುಗಳನ್ನು ಇಂಥವರಿಗೇ ಮಾರಾಟ ಮಾಡಬೇಕೆಂಬ ನಿಯಮ ರೂಪಿಸಲಾಗಿದೆ. ಮಾರಾಟಕ್ಕೂ ಮೊದಲು ಗ್ರಾಹಕನ ಹೆಸರು, ಮಾರಾಟದ ಗಾತ್ರ ಲೆಕ್ಕಚಾರ ಸಹ ಇಟ್ಟುಕೊಳ್ಳಬೇಕು. ಆದರೆ, ಯಾವುದೇ ಮಾರ್ಗಸೂಚಿ ಪಾಲಿಸದೆ ಸಿಕ್ಕ ಸಿಕ್ಕವರಿಗೆ ಮಾರಾಟ ಮಾಡಲಾಗುತ್ತಿದೆ.

    ಸಮನ್ವಯದ ಕೊರತೆ: ಅಕ್ರಮ ಚಟುವಟಿಕೆ ತಡೆಗಟ್ಟುವ ಕಾರ್ಯದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ. ಸ್ಪೋಟಕ ತಯಾರಿಕೆ ಮತ್ತು ಮಾರಾಟಕ್ಕೆ ಪಿಇಎಸ್​ಒ ಲೈಸೆನ್ಸ್ ನೀಡಿದ ನಂತರ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಣಿಗಾರಿಕೆಗೆ ಅನುಮತಿ ನೀಡುತ್ತದೆ. ಇವರ ಒಪ್ಪಿಗೆ ಮೇರೆಗೆ ಆಯಾ ಜಿಲ್ಲಾಧಿಕಾರಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪೋಟಕಗಳ ಬಳಕೆಗೆ ಗ್ರೀನ್ ಸಿಗ್ನಲ್ ನೀಡುತ್ತದೆ. ಆದರೆ, ಸ್ಪೋಟಕ ವಸ್ತುಗಳ ಬಳಕೆ ವೇಳೆ ಮಾರ್ಗಸೂಚಿ ಪಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಯಾರೂ ಪರಿಶೀಲನೆ ನಡೆಸುವುದಿಲ್ಲ. ಪೊಲೀಸರು ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದು, ಅನಾಹುತ ಸಂಭವಿಸಿದಾಗ ನೆಪಕ್ಕೆ ಎಫ್​ಐಆರ್ ದಾಖಲಿಸುತ್ತಾರೆ.

    ಟ್ರೖೆನಿಂಗ್ ಇಲ್ಲದೆ ಬಳಕೆ: ಜಿಲೆಟಿನ್, ಅಮೋನಿಯಂ ನೈಟ್ರೖೆಟ್, ಕೇಪು, ಕರಿಮದ್ದು ಬಳಕೆ ಮಾಡುವ ಬಗ್ಗೆ ಯಾವುದೇ ತರಬೇತಿ ಕೊಡಿಸುವುದಿಲ್ಲ. ಸುರಕ್ಷಿತ ಕ್ರಮಗಳನ್ನು ಅನುಸರಿಸುವುದಿಲ್ಲ. ಜಿಲೆಟಿನ್ ಒಂದೇ ಸ್ಪೋಟಗೊಳ್ಳುವುದಿಲ್ಲ. ಅದಕ್ಕೆ ಬೆಂಕಿ ಕಿಡಿ, ಹೆಚ್ಚು ಒತ್ತಡ ಬಿದ್ದಾಗ, ಅಮೋನಿಯಂ ನೈಟ್ರೖೆಟ್​ಗೆ ವಿದ್ಯುತ್ ಕಿಡಿ ಬಿದ್ದಾಗ ಸ್ಪೋಟಗೊಳ್ಳುತ್ತದೆ. ತರಬೇತಿ ಇಲ್ಲದೆ ಅವೈಜ್ಞಾನಿಕವಾಗಿ ಬಳಕೆ ಮಾಡಲು ಹೋಗಿ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂದು ತಜ್ಞರು ಮಾಹಿತಿ ನೀಡುತ್ತಾರೆ.

    ಬಳಕೆಗೆ ಸುರಕ್ಷಿತ ಕ್ರಮಗಳೇನು?

    • ಸ್ಪೋಟಕ ವಸ್ತುಗಳನ್ನು ವಿಶೇಷ ಬಾಕ್ಸ್, ಗೋದಾಮಿನಲ್ಲಿ ಸಂಗ್ರಹಿಸಬೇಕು
    • ಮೊಬೈಲ್, ವೈಯರ್​ಲೆಸ್ ಫೋನ್, ಸಿಗರೇಟು, ಬೆಂಕಿ ಪೊಟ್ಟಣ, ಲೈಟರ್ ಬಳಕೆ ನಿಷೇಧ
    • ಸ್ಪೋಟಕದಿಂದ 15 ಮೀಟರ್ ಸುತ್ತಳತೆಯಲ್ಲಿ ಧೂಮಪಾನ, ಬೆಂಕಿಯನ್ನು ನಿಯಂತ್ರಿಸಬೇಕು
    • ತರಬೇತಿ ಅಥವಾ ನುರಿತ ವ್ಯಕ್ತಿಗಳೇ ಸ್ಪೋಟಕ ಬಳಕೆ ಮಾಡಬೇಕು
    • ಸ್ಪೋಟಕ ಬಾಕ್ಸ್ ತೆಗೆಯಲು ಮರ, ತಾಮ್ರ, ಕಂಚು ಬಳಕೆ ಸೂಕ್ತ. ಕಬ್ಬಿಣ ನಿರ್ಬಂಧ
    • ಜಿಲೆಟಿನ್, ಅಮೋನಿಯಂ ನೈಟ್ರೖೆಡ್, ವಿದ್ಯುತ್ ಉಪಕರಣಗಳ ಬೇರೆ ಬೇರೆ ಸಂಗ್ರಹ

    ವೈಫಲ್ಯಗಳು

    • ದಂಧೆ ತಡೆಯುವ ಜವಾಬ್ದಾರಿ ಯಾವ ಇಲಾಖೆಗೂ ಇಲ್ಲ
    • ನಿಗಾ ಇಡುವುದಕ್ಕೆ ಅಧಿಕಾರಿ ಗಳಿಗೂ ಜವಾಬ್ದಾರಿ ನೀಡಿಲ್ಲ
    • ಲೈಸೆನ್ಸ್ ಇರುವವರಿಂದ ಸ್ಪೋಟಕ ಖರೀದಿ ರಾಜಾರೋಷ
    • ಬಳಕೆದಾರರ ಮಾರ್ಗಸೂಚಿ ಪಾಲನೆ ಮೇಲೆ ನಿಗಾ ಇಲ್ಲ
    • ಪರಿಹಾರ ಸಿಕ್ಕ ಬಳಿಕ ಸಂತ್ರಸ್ತರು ಸಂಪರ್ಕಕ್ಕೆ ಸಿಗುವುದಿಲ್ಲ
    • ಲೈಸೆನ್ಸ್​ದಾರ ಯಾರಿಗೆ ಮಾರಿದ್ದಾನೆಂಬ ಮಾಹಿತಿ ಸಂಗ್ರಹಿಸುವುದಿಲ್ಲ

    ಎಲ್ಲಿಂದ ಯಾರಿಗೆ ಸೇಲ್?: ಆಂಧ್ರ, ಒಡಿಶಾ, ತಮಿಳುನಾಡಿನಿಂದ ಅಕ್ರಮವಾಗಿ ಸ್ಪೋಟಕ ಖರೀದಿಸಿ ತಂದು ರಾಜ್ಯದಲ್ಲಿ ಬಳಸುತ್ತಿದ್ದಾರೆ. ಕಲ್ಲು ಗಣಿಗಾರಿಕೆ ಜತೆಗೆ ಕಟ್ಟಡ ನಿರ್ವಣ, ರಸ್ತೆ ನಿರ್ವಣ, ಕಾಮಗಾರಿ ವೇಳೆ ಬಂಡೆ ಸಿಕ್ಕರೆ ಸ್ಪೋಟಿಸಲು ಕದ್ದುಮುಚ್ಚಿ ಸ್ಪೋಟಕ ಬಳಕೆ ಮಾಡುತ್ತಾರೆ.

    ಜಿಲೆಟಿನ್ ಸ್ಫೋಟ ದುರಂತ ಕಾನೂನುಬಾಹಿರ ಚಟುವಟಿಕೆ ಎಂದು ದೃಢಪಟ್ಟಿದೆ. ಇದರ ವಿರುದ್ಧ ಬಿಗಿ ಕ್ರಮಕೈಗೊಂಡು ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಲಿದೆ.

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ಕರಾಳ ರಾತ್ರಿ ನಡೆದಿದ್ದೇನು?

    ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿಯ ಭ್ರಮರವರ್ಷಿಣಿ ಕಲ್ಲು ಕ್ವಾರಿ ಮೇಲೆ ಫೆ.7ರಂದು ಅಧಿಕಾರಿಗಳು ದಾಳಿ ನಡೆಸಿ ಸ್ಥಗಿತಗೊಳಿಸಿದ್ದರು. ಇದಾದ ಬಳಿಕವೂ ಕದ್ದುಮುಚ್ಚಿ ಗಣಿಗಾರಿಕೆ ನಡೆಯುತ್ತಿತ್ತು. ಮತ್ತೆ ಅಧಿಕಾರಿಗಳು ದಾಳಿ ನಡೆಸುವ ಮಾಹಿತಿ ಹಿನ್ನೆಲೆಯಲ್ಲಿ ಸೋಮವಾರ ಮಧ್ಯರಾತ್ರಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಜಿಲೆಟಿನ್ ಕಡ್ಡಿಗಳನ್ನು, ಟಯರ್​ನಲ್ಲಿಟ್ಟು ಕ್ರಷರ್ ಸಮೀಪದ ಗೋಮಾಳ ಜಾಗದ ಬಂಡೆಗೆ ಸಾಗಿಸಲಾಗುತ್ತಿತ್ತು. ವಾಹನದಿಂದ ಕೆಳಗಿಸಿ ಸ್ಪೋಟಕಗಳನ್ನು ಬಂಡೆಯ ಪಕ್ಕದಲ್ಲಿಡುತ್ತಿದ್ದಂತೆ ಸ್ಫೋಟ ಸಂಭವಿಸಿದೆ. ಸ್ಪೋಟಕಗಳನ್ನಿಟ್ಟಿದ್ದ ಜಾಗದ ಸಮೀಪ ಸಿಗರೇಟ್, ಮೊಬೈಲ್ ಬಳಸಿರುವುದು ಖಚಿತ ಪಟ್ಟಿದೆ. ಇವರೆಡರ ಪೈಕಿ ಯಾವುದಾದರೊಂದರಿಂದ ಸ್ಫೋಟ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಸ್ಪೋಟದಿಂದ ಸಿಡಿದ ಕಲ್ಲುಗಳು ತಾಗಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತರ ಕುಟುಂಬಕ್ಕೆ -ಠಿ;5 ಲಕ್ಷ ಪರಿಹಾರ ನೀಡಲು ಸಿಎಂ ಯಡಿಯೂರಪ್ಪ ಸಮ್ಮತಿಸಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್​ ಸ್ಫೋಟ: ಸ್ಥಳಕ್ಕೆ ಬಂದ ಸಿದ್ದರಾಮಯ್ಯ ಎಸ್ಪಿ ವಿರುದ್ಧ ಗರಂ

    ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕ್ಕೆ ಹೆದರಿ ಹೀಗೆ ಮಾಡಿಕೊಂಡಿದ್ದಾರೆ: ಸಚಿವ ಸುಧಾಕರ್​

    ಚಿಕ್ಕಬಳ್ಳಾಪುರ ಜಿಲೆಟಿನ್​ ಸ್ಫೋಟ ದುರಂತ: ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಬಿಎಸ್​ವೈ ಸೂಚನೆ

    ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್​ ಸ್ಫೋಟ: ಸ್ಥಳಕ್ಕೆ ದೌಡಾಯಿಸಿದ ಗೃಹ ಸಚಿವರಿಗೆ ಕಾದಿತ್ತು ಶಾಕ್​!

    ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್​ ಸ್ಫೋಟ: 6ಕ್ಕೇರಿದ ಸಾವಿನ ಸಂಖ್ಯೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts