More

    ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್​ ಸ್ಫೋಟ: 6ಕ್ಕೇರಿದ ಸಾವಿನ ಸಂಖ್ಯೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

    ಚಿಕ್ಕಬಳ್ಳಾಪುರ: ತಾಲೂಕಿನ ಹಿರೇನಸಗವಲ್ಲಿಯ ಭ್ರಮರವಾಸಿನಿ ಕ್ರಷರ್ ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ.

    ಸ್ಫೋಟದ ತೀವ್ರತೆಗೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹಗಳು ಛಿದ್ರಛಿದ್ರವಾಗಿವೆ. ಮತ್ತೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತರನ್ನು ಉಮಾಕಾಂತ (ಇಂಜಿನಿಯರ್), ರಾಮು (ಸ್ಥಳೀಯ ನಿವಾಸಿ). ಮಹೇಶ್ (ವಾಚ್ ಮೆನ್) ಗಂಗಾಧರ್ ಮತ್ತು ಮುರುಳಿ (ಕಂಪ್ಯೂಟರ್ ಅಪರೇಟರ್​) ಎಂದು ಗುರುತಿಸಲಾಗಿದೆ. ಈ ಸ್ಫೋಟ ದುರಂತದಲ್ಲಿ ಸ್ಥಳೀಯರ ಮನೆಗಳು ಬಿರುಕು ಬಿಟ್ಟಿವೆ.

    ಮೃತರು ಟಾಟಾ ಏಸ್ ಹಾಗೂ ಒಂದು ಬೈಕ್ ಮೂಲಕ ಕ್ರಷರ್​ನಿಂದ ಒಂದು ಕಿಲೋಮೀಟರ್ ದೂರದ ಅಂತರದಲ್ಲಿರುವ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ಅನ್ನು ಹೊತ್ತು ತರುತ್ತಿದ್ದರು. ಈ ವೇಳೆ ಜಿಲೆಟಿನ್​ ಸ್ಫೋಗೊಂಡು ಭಾರಿ ದುರಂತ ಸಂಭವಿಸಿದೆ.

    ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರ ಗಣಿ ಸ್ಫೋಟ ಪ್ರಕರಣ ತನಿಖೆ ಸಿಐಡಿಗೆ ಒಪ್ಪಿಸಲಾಗುವುದು. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

    ಇನ್ನು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಬಿ.ಎನ್.ಬಚ್ಚೇಗೌಡ, ಪದೇಪದೆ ಗಣಿ ಸ್ಫೋಟಗಳ ದುರಂತ ನಡೆಯುತ್ತಿದೆ. ಇದರ ಕಡಿವಾಣಕ್ಕೆ ಸರ್ಕಾರ ಬ್ರೇಕ್​ ಹಾಕಲೇಬೇಕು. ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಮೃತರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕ್ಕೆ ಹೆದರಿ ಹೀಗೆ ಮಾಡಿಕೊಂಡಿದ್ದಾರೆ: ಸಚಿವ ಸುಧಾಕರ್​

    ವಿಧಾನಪರಿಷತ್​ನಲ್ಲಿ ಶಾಸಕರ ಮೊಬೈಲ್​ ಬ್ಯಾನ್! ಕೆಲ ನಿಯಮ ಜಾರಿಗೆ ಹೊರಟ್ಟಿ ಸಜ್ಜು

    ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts