More

    ಎಲ್ಲರಲ್ಲಿ ಹೃದಯವಂತಿಕೆ ಬೆಳೆಯಲಿ

    ಭಾಲ್ಕಿ: ಪ್ರತಿಯೊಬ್ಬ ಮನುಷ್ಯನಲ್ಲಿ ಸ್ವಚ್ಛ ಮನಸ್ಸಿನ ಹೃದಯವಂತಿಕೆ ಇದ್ದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನುಡಿದರು.

    ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ಬುಧವಾರ ಆಯೋಜಿಸಿದ್ದ ೨೯೯ನೇ ಮಾಸಿಕ ಶರಣ ಸಂಗಮ ಮತ್ತು ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಇಂದಿನ ಒತ್ತಡದ ಜೀವನದಲ್ಲಿ ಯಾರೊಬ್ಬರಿಗೂ ನೆಮ್ಮದಿ ಇಲ್ಲದಂತಾಗಿದೆ. ಮನಸ್ಸು ಸಂಕೋಚಿತಗೊಳ್ಳುತ್ತಿದೆ. ಇದರಿಂದ ಮುಕ್ತಿ ಹೊಂದಲು ಶರಣರು ತೋರಿದ ಮಾರ್ಗ ಅನುಸರಿಸಬೇಕು ಎಂದರು.

    ಬಡ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು ಎನ್ನುವುದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಉದ್ದೇಶ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದಿದ್ದಾರೆ. ವಿಶೇಷವಾಗಿ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದಲ್ಲಿ ಬಡವರು, ನಿರ್ಗತಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಕಲಿತ ಮಕ್ಕಳು ಉನ್ನತ ಸಾಧನೆಗೈಯುತ್ತಿರುವುದು ಸಂತಸ ತರಿಸಿದೆ ಎಂದು ಹೇಳಿದರು.

    ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ ಅನುಭಾವ ನೀಡಿದರು. ಡಾ.ಚನ್ನಬಸವ ಪಟ್ಟದ್ದೇವರು ಬ್ಯಾಂಕ್‌ನ ಉಪಾಧ್ಯಕ್ಷ ಶರಣಪ್ಪ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು.

    ನಿವೃತ್ತ ಆರೋಗ್ಯ ಸಿಬ್ಬಂದಿ ಶ್ರೀಮಂತ ಪಾಟೀಲ್, ಸಾಹಿತಿ ವೀರಣ್ಣ ಕುಂಬಾರ, ಗುರುಪ್ರಸಾದ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸವಿತಾ ಭೂರೆ ಇತರರಿದ್ದರು.

    ಕುಮಾರಿ ಸಿಂಧು, ಅಮೂಲ್ಯ ಕರಕಾಳೆ ವಚನ ಗಾಯನ ನಡೆಸಿಕೊಟ್ಟರು. ಕುಮಾರಿ ಸಾಕ್ಷಿ ದತ್ತು ಕರಕಾಳೆ ನಿರೂಪಣೆ ಮಾಡಿದರು. ಸುಜಾತಾ ಸಂಗಮೇಶ ಪಾಟೀಲ್ ನೇಳಗಿ ಕಾರ್ಯಕ್ರಮದ ಭಕ್ತಿ ದಾಸೋಹ ವಹಿಸಿಕೊಂಡಿದ್ದರು.

    ಸನ್ಮಾನ: ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ವಿದ್ಯಾರ್ಥಿಗಳಾದ ಲಖನ ಚಂದ್ರಕಾಂತ, ಮಾರುತಿ ಪ್ರಭು ಮತ್ತು ಹಣಮಂತ ಧನರಾಜ ಅವರನ್ನು ಲಿಂಗೈಕ್ಯ ಶಂಕರೆಪ್ಪ ಕರಕಾಳೆ ಪರಿವಾರದಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts