More

    ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್​ ಸ್ಫೋಟ: ಸ್ಥಳಕ್ಕೆ ದೌಡಾಯಿಸಿದ ಗೃಹ ಸಚಿವರಿಗೆ ಕಾದಿತ್ತು ಶಾಕ್​!

    ಚಿಕ್ಕಬಳ್ಳಾಪುರ: ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ರಷರ್​ನಲ್ಲಿ ಜಿಲೆಟಿನ್​ ತುಂಬಿದ್ದ ಲಾರಿ ಸ್ಫೋಟ ಪ್ರಕರಣದಲ್ಲಿ 8 ಮಂದಿಯ ದೇಹಗಳು ಛಿದ್ರಛಿದ್ರಗೊಂಡು ಮೃತಪಟ್ಟಿದ್ದ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ಸ್ಫೋಟ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ್ದು, ಮೃತರ ಸಂಖ್ಯೆ 6ಕ್ಕೇರಿದೆ.

    ಚಿಕ್ಕಬಳ್ಳಾಪುರದ ಹಿರೇನಸಗವಲ್ಲಿಯ ಭ್ರಮರವಾಸಿನಿ ಕ್ರಷರ್ ಬಳಿ ಜಿಲೆಟಿನ್​ ಸ್ಫೋಟ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗೃಹ ಸಚಿವರ ಬಸವರಾಜ ಬೊಮ್ಮಾಯಿ, ಈ ಊರಲ್ಲಿರುವ ಕಲ್ಲು ಕ್ವಾರಿಗಳ ಸಂಖ್ಯೆ ಕೇಳಿ ಶಾಕ್​ ಆದರು. ಇದನ್ನೂ ಓದಿರಿ ಒಂದೂವರೆ ವರ್ಷದ ಮಗು ಕೊಂದಿದ್ದ ಪಾಪಿ ತಂದೆಗೆ ಗಲ್ಲುಶಿಕ್ಷೆ!

    ಹಿರೇನಸಗವಲ್ಲಿ ಒಂದೇ ಗ್ರಾಮದಲ್ಲಿ ಸುಮಾರು 250-300 ಎಕರೆ ಜಾಗದಲ್ಲಿ ಬರೋಬ್ಬರಿ 53 ಕ್ವಾರಿಗಳು ಇವೆ. ಇಲ್ಲಿನ ಬೆಟ್ಟವನ್ನು ಕ್ವಾರಿಗಳಾಗಿ ಮಾರ್ಪಾಡು ಮಾಡಲಾಗಿದ್ದು, ಸ್ಫೋಟಕ ಬಳಸಿ ಬೆಟ್ಟವನ್ನೆಲ್ಲ ಪುಡಿಪುಡಿ ಮಾಡಲಾಗಿದೆ. ಈ ಪೈಕಿ ಎಷ್ಟು ಕ್ವಾರಿಗಳಿಗೆ ಅನುಮತಿ ಇದೆ ಎಂಬುದೂ ಖಚಿತ ಮಾಹಿತಿ ಇಲ್ಲ. ಈ ಮಾಹಿತಿ ತಿಳಿಯುತ್ತಿದ್ದಂತೆ ಸಿಡಿಮಿಡಿಗೊಂಡ ಗೃಹ ಸಚಿವರು, 53 ಕ್ವಾರಿಗಳ ರಿಪೋರ್ಟ್ ಅನ್ನು ಸಂಜೆ ಒಳಗೆ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಇನ್ನು ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳ‌ ಪತ್ತೆಗೆ ಮೂರು ತಂಡ ರಚಿಸಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವಘಡನೆ ಬೆಳಕಿಗೆ ಬಂದ ಕೂಡಲೇ ಕ್ವಾರಿ ಮಾಲೀಕರು ಕುಟುಂಬ ಸಮೇತರಾಗಿ ರಾತ್ರೋರಾತ್ರಿ ಊರು ತೊರೆದಿದ್ದಾರೆ. ಇದನ್ನೂ ಓದಿರಿ ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

    ಆರೋಪಿಗಳಾದ ನಾಗರಾಜ್, ಪೆಯ್ಯಲ ರಾಘವೇಂದ್ರ ರೆಡ್ಡಿ, ನರಸಿಂಹಮೂರ್ತಿ, ಪೆಯ್ಯಲ ವೆಂಕಟಶಿವಾರೆಡ್ಡಿ ಅವರ ಮನೆಗಳನ್ನು ಜಾಲಾಡಿದ ಪೊಲೀಸರು, ಸಂಬಂಧಿಕರು ಮತ್ತು ಸ್ನೇಹಿತರನ್ನೂ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಮೊಬೈಲ್ ಸ್ವಿಚ್ ಆಫ್​ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.

    ಇನ್ನು ಜಿಲೆಟಿನ್ ಸ್ಫೋಟಕ್ಕೆ ಬಲಿಯಾದವರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರ ಪ್ರಕ್ರಿಯೆ ಮಧ್ಯಾಹ್ನ ಶುರುವಾಗಿತ್ತು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ.

    ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

    ಕೋಟಿ ಮೌಲ್ಯದ ಜಮೀನು ದಾನ ಕೊಡ್ತೀನಿ, ತಾಕತ್​ ಇದ್ರೆ ರಾಮಮಂದಿರ ಕಟ್ಟಿಸಿ: ಸಿದ್ದುಗೆ ರೈತನ ಸವಾಲು

    ವಿಧಾನಪರಿಷತ್​ನಲ್ಲಿ ಶಾಸಕರ ಮೊಬೈಲ್​ ಬ್ಯಾನ್! ಕೆಲ ನಿಯಮ ಜಾರಿಗೆ ಹೊರಟ್ಟಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts