ಮುಂಬೈ: ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತೀಯ ರೈಲ್ವೇ ಇತಿಹಾಸದ ಚಿತ್ರಣವೇ ಬದಲಾಗಿದ್ದು, ಮತ್ತೊಂದು ಮೈಲುಗಲ್ಲು ಸಾಧಿಸಿದೆ.
ವಿದೇಶಗಳಲ್ಲಿ ಮಾತ್ರ ಕಾಣುತ್ತಿದ್ದ ವಿಸ್ಟಡೊಮ್ ಕೋಚ್ ಹೊಂದಿರುವ ರೈಲನ್ನು ಇದೀಗ ನಮ್ಮ ದೇಶದಲ್ಲೇ ಕಾಣಬಹುದು. ಹೌದು ಮುಂಬೈ,ಸೂರತ್,ಅಹಮದಾಬಾದ್ ಮಾರ್ಗವಾಗಿ ಮುಂಬೈ ಸೆಂಟ್ರಲ್ -ಗಾಂಧಿನಗರ ಶತಾಬ್ದಿ ಎಕ್ಸ್ಪ್ರೆಸ್ ಮಂಗಳವಾರ ಸಂಚಾರ ಆರಂಭಿಸಿದೆ. ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣದ ಆನಂದವನ್ನು ಪಡೆದರು. ಈ ಬಗ್ಗೆ ವಿಡಿಯೋವೊಂದನ್ನು ರೈಲ್ವೇ ಇಲಾಖೆ ತನ್ನ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ.
ಏನಿದು ವಿಸ್ಟಡೊಮ್ ಕೋಚ್?
ಸುತ್ತಲೂ ಗಾಜುಗಳನ್ನು ಹೊಂದಿರುವ ಬೋಗಿ ಇದಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ರೈಲು ಅಭಿವೃದ್ಧಿಪಡಿಸಲಾಗಿದ್ದು, 360 ಡಿಗ್ರಿಯಲ್ಲಿ ಸುತ್ತಲಿನ ನಿಸರ್ಗವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಲಂಚ್ಬ್ರೇಕ್: ಇನ್ನು ಮುಂದೆ ಸರ್ಕಾರಿ ನೌಕರರು ಅರ್ಧಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ!
ಪ್ರಿಯಾಂಕಾ ಛೋಪ್ರಾ ಅಜ್ಜಿಯನ್ನು ನೆನಪಿಸಿ,ಮಿಸ್ ಯೂ ನಾನಿ ಎಂದಿದ್ದು ಏಕೆ?