More

    ವೇಶ್ಯಾವಾಟಿಕೆಯ ಮಹಿಳೆಗೆ ಊರು ಬಿಟ್ಟು ಹೋಗುವಂತೆ ಗದರಿದ ಎಸ್​ಪಿ..

    ಕೊಪ್ಪಳ: ವೇಶ್ಯಾವಾಟಿಕೆ ನಡೆಸಿ ಸಿಕ್ಕಿಬಿದ್ದಿದ್ದ ಮಹಿಳೆಯೊಬ್ಬರಿಗೆ ಎಸ್​ಪಿಯೊಬ್ಬರು ಊರು ಬಿಟ್ಟು ಹೋಗುವಂತೆ ಗದರಿದ್ದು, ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದ್ದು ಹಲವರ ಗಮನ ಸೆಳೆದಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಎಚ್ಚರಿಕೆ ನೀಡಿದ್ದಾರೆ.

    ಆರೋಪಿಗಳ ಪರೇಡ್ ವೇಳೆ ತಪ್ಪಿತಸ್ಥರ ವಿಚಾರಣೆ ನಡೆಸಿದ ಎಸ್​ಪಿ ಅರುಣಾಂಶು ಗಿರಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಒಂದಕ್ಕಿಂತ ಹೆಚ್ಚು ಸಲ ವೇಶ್ಯಾವಾಟಿಕೆ ಅಪರಾಧದಲ್ಲಿ ಸಿಕ್ಕಿಬಿದ್ದಿದ್ದರಿಂದ ಆಕೆಗೆ ಅವರು ಹೀಗೆ ಗದರಿದ್ದಾರೆ.

    ಇದನ್ನೂ ಓದಿ: ಗ್ರಾಮಾದ್ಯಂತ ಉಲ್ಬಣಿಸಿದ ವಾಂತಿ-ಭೇದಿ ಸಮಸ್ಯೆ; 70ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು..

    ಎಷ್ಟು ಜನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದೀಯಾ? ನಿನಗೆ ಹೆಣ್ಣು ಮಕ್ಕಳಿಲ್ವಾ? ನಿನ್ನ ಮಗಳಿಗೂ ಇದೇ ರೀತಿ ದಾರಿ ಮಾಡಿಕೊಡ್ತಿಯಾ? ಎಂದು ಗದರಿದ ಎಸ್​ಪಿ, ಆಕೆ 50 ವರ್ಷ ವಯಸ್ಸಾಗಿದ್ದರೂ ಇಂಥ ಚಟುವಟಿಕೆಯಲ್ಲಿ ತೊಡಗಿದ್ದನ್ನು ತಿಳಿದು, ಊರು ಬಿಟ್ಟು ಹೋಗಿ ಎಂದು ಕಳಿಸಿಕೊಟ್ಟಿದ್ದಾರೆ. ಅದೇ ರೀತಿ ರೌಡಿಶೀಟರ್​ ಹಾಗೂ ಗಡಿಪಾರಾದವರಿಗೂ ಎಸ್​ಪಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಸ್ತಿತ್ವಕ್ಕಾಗಿ ಹೋರಾಡುವ ಪಕ್ಷಗಳನ್ನು ನೋಡಿ ನಗಬೇಡಿ: ಮೋದಿ ಹೀಗಂದಿದ್ದೇಕೆ?

    ಟ್ಯಾಂಕರ್​-ಕಾರು ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು, ಇನ್ನೊಬ್ಬರ ಸ್ಥಿತಿ ಗಂಭೀರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts