More

    14 ವರ್ಷಗಳ ಬಳಿಕ ಪಾಕ್‌ಗೆ ಬಂದಿಳಿದ ದಕ್ಷಿಣ ಆಫ್ರಿಕಾ ತಂಡ

    ಇಸ್ಲಾಮಾಬಾದ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಬರೋಬ್ಬರಿ 14 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಬಂದಿಳಿಯಿತು. ಕಡಲನಗರಿ ಕರಾಚಿಗೆ ಬಂದಿಳಿದ ಕ್ವಿಂಟನ್ ಡಿಕಾಕ್ ಸಾರಥ್ಯದ ತಂಡಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಪಾಕ್‌ಗೆ ಆಗಮಿಸುವುದಕ್ಕೂ ಮುನ್ನವೇ, 21 ಸದಸ್ಯರ ತಂಡವನ್ನು ಜೊಹಾನ್ಸ್‌ಬರ್ಗ್‌ನಲ್ಲಿ ಎರಡು ಬಾರಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಆಟಗಾರರು ಐಸೋಲೇಷನ್‌ನಲ್ಲಿದ್ದು, ಮೊದಲ ಸುತ್ತಿನ ಪರೀಕ್ಷೆಯಾದ ಬಳಿಕ ಮೈದಾನಕ್ಕೆ ಅಭ್ಯಾಸಕ್ಕಿಳಿಯಲಿದ್ದಾರೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ತಂದ ಅನಿರುದ್ಧ ಜೋಶಿ

    2007ರಲ್ಲಿ ಕಡೇ ಬಾರಿಗೆ ಪಾಕ್ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡ ಎರಡು ಪಂದ್ಯಗಳ ಸರಣಿಯನ್ನು 1-0ಯಿಂದ ಗೆದ್ದುಕೊಂಡಿತ್ತು. ಇದಾದ ಮೇಲೆ ಪಾಕಿಸ್ತಾನದ ಬದಲಿ ತವರು ತಾಣ ಯುಎಇಯಲ್ಲಿ 2010 ಹಾಗೂ 2013ರಲ್ಲಿ ಉಭಯ ತಂಡಗಳು ಸರಣಿ ಆಡಿದ್ದವು. 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಆಟಗಾರರು ತೆರಳುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಯುಎಇಯನ್ನು ಬದಲಿ ತವರು ತಾಣವನ್ನಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿಕೊಂಡಿತ್ತು.

    ಇದನ್ನೂ ಓದಿ: ಇಂಗ್ಲೆಂಡ್ ಎದುರು ಶ್ರೀಲಂಕಾ ತಂಡದ ಪ್ರತಿ ಹೋರಾಟ,

    ದಕ್ಷಿಣ ಆಫ್ರಿಕಾ ತಂಡ ಪ್ರವಾಸದಲ್ಲಿ ಎರಡು ಟೆಸ್ಟ್ ಹಾಗೂ ಲಾಹೋರ್‌ನಲ್ಲಿ ಮೂರು ಟಿ20 ಪಂದ್ಯಗಳನ್ನಾಡಲಿದೆ. ಕರಾಚಿಯಲ್ಲಿ ಜ.26ರಿಂದ 30ರವರೆಗೆ ಮೊದಲ ಹಾಗೂ ರಾವಲ್ಪಿಂಡಿಯಲ್ಲಿ ಫೆ.4 ರಿಂದ 8 ರವರೆಗೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಲಾಹೋರ್‌ನಲ್ಲಿ ಫೆ.11 ರಿಂದ ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಮುಖ್ಯ ಕೋಚ್ ಮಾರ್ಕ್ ಬೌಷರ್ ತಂಡಕ್ಕೆ ನೀಡಿರುವ ಭದ್ರತೆ ಕುರಿತು ತೃಪ್ತಿ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts