More

    ಕರ್ನಾಟಕಕ್ಕೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ತಂದ ಅನಿರುದ್ಧ ಜೋಶಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಅನಿರುದ್ಧ ಜೋಶಿ (64*ರನ್, 40 ಎಸೆತ, 3 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರೈಲ್ವೇಸ್ ವಿರುದ್ಧ 2 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿತು. ಟೂರ್ನಿಯಲ್ಲಿ ಆಡಿದ 4ನೇ ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿದ ಕರುಣ್ ನಾಯರ್ ಪಡೆ ನಾಕೌಟ್ ಹಂತಕ್ಕೇರುವ ಆಸೆಯನ್ನು ಜೀವಂತ ಉಳಿಸಿಕೊಂಡಿದೆ.

    ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ 5 ವಿಕೆಟ್‌ಗೆ 152 ರನ್ ಪೇರಿಸಿತು. ಪ್ರತಿಯಾಗಿ ಕರ್ನಾಟಕ ತಂಡ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳ ವೈಲ್ಯದಿಂದ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆಗ ಏಕಾಂಗಿ ಹೋರಾಟ ತೋರಿದ ಅನಿರುದ್ಧ ಜೋಶಿ ಸಾಹಸದಿಂದ ಕರ್ನಾಟಕ ತಂಡ 19.4 ಓವರ್‌ಗಳಲ್ಲಿ 2 ವಿಕೆಟ್‌ಗೆ 158 ರನ್ ಗಳಿಸಿ ಜಯಿಸಿತು.

    ಇದನ್ನೂ ಓದಿ: ದೇಶೀಯ ಟಿ20ಯಲ್ಲಿ ಮಿಂಚುತ್ತಿದ್ದಾರೆ ಕೇದಾರ್ ಜಾಧವ್, ಸಿಎಸ್‌ಕೆ ಫ್ಯಾನ್ಸ್ ಏನಂದರು ಗೊತ್ತೇ?

    ಕೊನೇ ಓವರ್‌ನಲ್ಲಿ ಸತತ 2 ಸಿಕ್ಸರ್
    ಕರ್ನಾಟಕ ತಂಡ 47 ರನ್‌ಗೆ 3 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದಾಗ ಕಣಕ್ಕಿಳಿದ ಅನಿರುದ್ಧ ಜೋಶಿ ಮೊದಲಿಗೆ ಆರಂಭಿಕ ದೇವದತ್ ಪಡಿಕಲ್‌ಗೆ (37) ಸಾಥ್ ನೀಡಿದರು. 10ನೇ ಓವರ್‌ನಲ್ಲಿ ಪಡಿಕಲ್ ಕೂಡ ಔಟಾದ ಬಳಿಕ ಏಕಾಂಗಿ ಹೋರಾಟ ತೋರಿದ ಅನಿರುದ್ಧ ಜೋಶಿ, ಮತ್ತೊಂದೆಡೆಯಿಂದ ವಿಕೆಟ್ ಉರುಳುತ್ತಿದ್ದರೂ, 2 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಸಲರಾದರು. ಕೊನೆಯ 4 ಓವರ್‌ಗಳಲ್ಲಿ 40 ರನ್ ಕಸಿಯುವ ಸವಾಲು ಇದ್ದಾಗ ಅನಿರುದ್ಧ ಜೋಶಿ ಅವರೊಬ್ಬರೇ 40 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದರು. ಧ್ರುಶಾಂತ್ ಸೋನಿ ಎಸೆದ ಕೊನೆಯ ಓವರ್‌ನಲ್ಲಿ 9 ರನ್ ಬೇಕಿದ್ದಾಗ ಮೊದಲೆರಡು ಎಸೆತಗಳಲ್ಲಿ ತಲಾ 1 ರನ್‌ಗಳಷ್ಟೇ ಬಂದವು. ಇದರಿಂದ ಕೊನೇ 4 ಎಸೆತಗಳಲ್ಲಿ 7 ರನ್ ಅಗತ್ಯವಿದ್ದವು. ಆಗ ಸತತ 2 ಸಿಕ್ಸರ್ ಸಿಡಿಸಿದ ಅನಿರುದ್ಧ ಜೋಶಿ ಕರ್ನಾಟಕವನ್ನು ಗೆಲುವಿನ ದಡ ತಲುಪಿಸಿದರು.

    ರೈಲ್ವೇಸ್: 5 ವಿಕೆಟ್‌ಗೆ 152 (ಪ್ರಥಮ್ ಸಿಂಗ್ 41, ಶಿವಂ ಚೌಧರಿ 48, ಧ್ರುಶಾಂತ್ 12, ಹರ್ಷ್ ತ್ಯಾಗಿ 33*, ಪ್ರಸಿದ್ಧಕೃಷ್ಣ 25ಕ್ಕೆ 2, ಶ್ರೇಯಸ್ ಗೋಪಾಲ್ 27ಕ್ಕೆ 2, ವಿ. ಕೌಶಿಕ್ 25ಕ್ಕೆ 1), ಕರ್ನಾಟಕ: 19.4 ಓವರ್‌ಗಳಲ್ಲಿ 8 ವಿಕೆಟ್‌ಗೆ 158 (ರೋಹನ್ ಕದಂ 14, ಪಡಿಕಲ್ 37, ಕರುಣ್ ನಾಯರ್ 15, ಶ್ರೀಜಿತ್ 0, ಅನಿರುದ್ಧ ಜೋಶಿ 64*, ಪ್ರವೀಣ್ ದುಬೆ 0, ಶ್ರೇಯಸ್ ಗೋಪಾಲ್ 10, ಕೆ. ಗೌತಮ್ 12, ವಿ. ಕೌಶಿಕ್ 2*, ಟಿ. ಪ್ರದೀಪ್ 19ಕ್ಕೆ 3, ಶಿವೇಂದ್ರ ಸಿಂಗ್ 33ಕ್ಕೆ 2, ಧ್ರುಶಾಂತ್ 28ಕ್ಕೆ 3).

    *ಕರ್ನಾಟಕಕ್ಕೆ ಮುಂದಿನ ಪಂದ್ಯ:
    ಎದುರಾಳಿ: ಉತ್ತರ ಪ್ರದೇಶ
    ಯಾವಾಗ: ಸೋಮವಾರ
    ಆರಂಭ: ಮಧ್ಯಾಹ್ನ 12.00

    ಕನ್ನಡಿಗ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್, ಕೇರಳಕ್ಕೆ ಹ್ಯಾಟ್ರಿಕ್ ಗೆಲುವು

    ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts